ರಾಜ್ಯಕ್ಕೆ ಹೆಚ್ಚುವರಿ ರೆಮ್ಡಿಸಿವಿರ್ ನೀಡುವ ಸಂಸದ ತೇಜಸ್ವಿ ಸೂರ್ಯ ಮನವಿಗೆ ತಕ್ಷಣ ಸ್ಪಂದಿಸಿದ ಕೇಂದ್ರ ಸರ್ಕಾರ
ಕರ್ನಾಟಕಕ್ಕೆ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ರೆಮ್ಡಿಸಿವಿರ್ ಜೀವರಕ್ಷಕ ಔಷಧವನ್ನು ನೀಡುವಂತೆ ಸಂಸದ ತೇಜಸ್ವಿ ಸೂರ್ಯ ಮಾಡಿದ್ದ ಮನವಿಗೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿದೆ.
Published: 22nd April 2021 06:39 PM | Last Updated: 22nd April 2021 06:39 PM | A+A A-

ರೆಮ್ಡಿಸಿವಿರ್
ನವದೆಹಲಿ: ಕರ್ನಾಟಕಕ್ಕೆ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ರೆಮ್ಡಿಸಿವಿರ್ ಜೀವರಕ್ಷಕ ಔಷಧವನ್ನು ನೀಡುವಂತೆ ಸಂಸದ ತೇಜಸ್ವಿ ಸೂರ್ಯ ಮಾಡಿದ್ದ ಮನವಿಗೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಡಿ.ವಿ ಸದಾನಂದ ಗೌಡ, ಪ್ರಹ್ಲಾದ್ ಜೋಷಿ ತಕ್ಷಣ ಸ್ಪಂದಿಸಿದ್ದು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ.
Bengaluru (South) MP @Tejasvi_Surya spoke to me on the shortage of Remdesivir allocation to Karnataka. Today an additional stock will be given and in the next few days further stocks will be sent. Thanking @DVSadanandGowda for the support.
— Nirmala Sitharaman (@nsitharaman) April 22, 2021
ಪ್ರತಿನಿತ್ಯ 25,000 ವಯಲ್ ಗಳನ್ನು ಹೆಚ್ಚುವರಿಯಾಗಿ ಕೇಂದ್ರ ಸರ್ಕಾರವು ಒದಗಿಸುತ್ತಿದ್ದು, ಇದಕ್ಕೂ ಮುಂಚೆ ಸಂಸದ ತೇಜಸ್ವೀ ಸೂರ್ಯ ರವರು,ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ರಾಸಾಯನಿಕ& ರಸಗೊಬ್ಬರ ಸಚಿವರಾದ ಡಿ ವಿ ಸದನಂದಗೌಡ, ಆರೋಗ್ಯ ಸಚಿವರಾದ ಹರ್ಷವರ್ಧನ್, ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ ರವರಿಗೆ ಕರೆ ಮಾಡಿ ಕರ್ನಾಟಕಕ್ಕೆ ಹೆಚ್ಚುವರಿ ರೆಮ್ಡಿಸಿವಿರ್ ಮೆಡಿಸಿನ್ ಒದಗಿಸುವಂತೆ ವಿನಂತಿಸಿದ್ದರು. ತಕ್ಷಣವೇ ಸ್ಪಂದಿಸಿರುವ ಕೇಂದ್ರ ಸಚಿವರ ಕಾರ್ಯವೈಖರಿಯನ್ನು ಸಂಸದ ತೇಜಸ್ವೀ ಸೂರ್ಯ ಶ್ಲಾಘಿಸಿದ್ದಾರೆ.
ಟ್ವಿಟ್ ಮೂಲಕ ಪ್ರತಿಕ್ರಿಯೆ ನೀಡಿರುವ ನಿರ್ಮಲಾ ಸೀತಾರಾಮನ್ ರವರು,
Grateful to FM Smt @nsitharaman for protecting Karnataka’s interest & assisting Bengaluru in this crucial hour.
— Tejasvi Surya (@Tejasvi_Surya) April 22, 2021
Sri @DVSadanandGowda is working tirelessly for Karnataka’s adequate supply of oxygen & medications.
I thank Dr @drharshvardhan & Sri @JoshiPralhad for all help. https://t.co/l3tlpGAhcA
ಕೇಂದ್ರ ಸಚಿವರಾದ ಡಿ ವಿ ಸದನಂದಗೌಡರು, ಮುಂಬರುವ ದಿನಗಳಲ್ಲಿ ಕರ್ನಾಟಕ್ಕೆ ಇನ್ನೂ ಹೆಚ್ಚಿನ ಪ್ರಮಾಣದ ಜೀವ ರಕ್ಷಕ ಮೆಡಿಸಿನ್ ರೆಮ್ಡಿಸಿವಿರ್ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದು,
"ರೆಮ್ಡಿಸಿವಿರ್ ಪ್ರಮಾಣವನ್ನು ರಾಜ್ಯಗಳ ಅಗತ್ಯತೆಗೆ ತಕ್ಕಂತೆ ಹಂಚಿಕೆ ಮಾಡಲಾಗುತ್ತಿದ್ದು, ಉತ್ಪನ್ನ ಪ್ರಮಾಣವನ್ನು ದುಪ್ಪಟ್ಟುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ" ಎಂದು ಸದನಂದಗೌಡರು ತಿಳಿಸಿರುತ್ತಾರೆ. ಸಂಸದ ತೇಜಸ್ವೀ ಸೂರ್ಯ, ರಾಜ್ಯದ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಕೇಂದ್ರ ಸಚಿವರುಗಳಿಗೆ ಧನ್ಯವಾದ ತಿಳಿಸಿದ್ದಾರೆ.