ಸಿಬ್ಬಂದಿ ಕೊರತೆಯ ಮಧ್ಯೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಏಕೈಕ ಸರ್ಕಾರಿ ಕೋವಿಡ್ ಆಸ್ಪತ್ರೆ!

ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಏಕೈಕ ಸರ್ಕಾರಿ ಕೋವಿಡ್-19 ಆಸ್ಪತ್ರೆ, ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಸಮಸ್ಯೆ ಕಾಡುತ್ತಿಲ್ಲ.

Published: 26th April 2021 10:18 AM  |   Last Updated: 26th April 2021 12:51 PM   |  A+A-


Oxygen supply unit at COVID-19 hospital in Madikeri.

ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಘಟಕ

Posted By : Sumana Upadhyaya
Source : The New Indian Express

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಏಕೈಕ ಸರ್ಕಾರಿ ಕೋವಿಡ್-19 ಆಸ್ಪತ್ರೆ, ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಸಮಸ್ಯೆ ಕಾಡುತ್ತಿಲ್ಲ.

ಜಿಲ್ಲೆಯ ಈ ಒಂದೇ ಒಂದು ಕೋವಿಡ್ ಆಸ್ಪತ್ರೆಯಲ್ಲಿ ದಿನಕ್ಕೆ ಸುಮಾರು 2 ಸಾವಿರ ಸ್ವಾಬ್ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗುತ್ತಿದೆ. ಪಕ್ಕದ ಸುಳ್ಯ ತಾಲ್ಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸಹ ಕೊಡಗಿಗೆ ಚಿಕಿತ್ಸೆಗೆ ಬರುತ್ತಿದ್ದಾರೆ.

ಕೋವಿಡ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಸರಿಯಿಲ್ಲವೆಂದು ಇತ್ತೀಚೆಗೆ ವಿಡಿಯೊ ವೈರಲ್ ಆಗಿತ್ತು, ಜಿಲ್ಲೆಯ ಜನರಿಗೆ ಸಾಕಷ್ಟು ಭಯ, ಆತಂಕವಾಗಿತ್ತು. ಮಡಿಕೇರಿಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಸಾಕಷ್ಟು ಬೆಡ್ ಗಳಿಲ್ಲ, ನಾಲ್ಕು ಮಂದಿ ರೋಗಿಗಳು ಒಂದೇ ಬೆಡ್ ನಲ್ಲಿರಬೇಕಾದ ಪರಿಸ್ಥಿತಿಯಿದೆ ಎಂದೆಲ್ಲಾ ಸುದ್ದಿ ಬಂದಿತ್ತು.

ಆದರೆ ಇದೆಲ್ಲಾ ಸುಳ್ಳುಸುದ್ದಿ ಎಂದು ಆಸ್ಪತ್ರೆಯ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. 'ವ್ಯಕ್ತಿಗೆ ಕೊರೋನಾ ಪಾಸಿಟಿವ್ ಎಂದು ಗೊತ್ತಾದ ಕೂಡಲೇ ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ಪರೀಕ್ಷೆಗಳಿಗೆ ರೋಗಿ ಒಳಗಾಗಬೇಕಾಗುತ್ತದೆ. ಸಿಟಿ ಸ್ಕ್ಯಾನ್ ಸೌಲಭ್ಯ ಆಸ್ಪತ್ರೆಯಲ್ಲಿ ಇದ್ದರೂ ಕೂಡ ರೇಡಿಯಾಲಜಿಸ್ಟ್ ನ್ನು ಇಲ್ಲಿಗೆ ನೇಮಕ ಮಾಡಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವಷ್ಟು ಬೇಗನೆ ಇಲ್ಲಿ ಸಿಟಿ ಸ್ಕ್ಯಾನ್ ವರದಿ ಸಿಗುವುದಿಲ್ಲ. ಹೀಗಾಗಿ ಬೆಡ್ ಸಮೇತ ರೋಗಿಗಳು ಸುಮಾರು 2 ಗಂಟೆ ಕಾಲ ಕಾಯಬೇಕಾಗುತ್ತದೆ, ಇದು ವಾಸ್ತವ, ಆದರೆ ಇದು ತಪ್ಪಾಗಿ ಸುದ್ದಿಯಾಗಿದೆ. ರೋಗಿಗಳು ಸಿಟಿ ಸ್ಕ್ಯಾನ್ ವರದಿಗೆ ಕಾಯುತ್ತಿರುವಾಗ ವಾರ್ಡ್ ನಲ್ಲಿ ಇರುವುದನ್ನು ಮೂರ್ನಾಲ್ಕು ಮಂದಿ ಒಂದೇ ಬೆಡ್ ನಲ್ಲಿ ಇರುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದರು.

ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ 150 ಬೆಡ್ ಗಳಿದ್ದು, ಆಕ್ಸಿಜನ್ ಪೂರೈಕೆ ಕೂಡ ಸರಿಯಾಗಿದೆ. ಇಂದಿನಿಂದ ಹೆಚ್ಚುವರಿ ಆಕ್ಸಿಜನ್ ಪೂರೈಕೆಯ 100 ಬೆಡ್ ಗಳು ಕಾರ್ಯನಿರ್ವಹಿಸಲು ಆರಂಭವಾಗುತ್ತವೆ. ಒಟ್ಟು 13 ಸಾವಿರ ಲೀಟರ್ ಆಕ್ಸಿಜನ್ ಆಸ್ಪತ್ರೆಯಲ್ಲಿ ದೊರಕುತ್ತಿದ್ದು 12ರಿಂದ 15 ದಿನಗಳಲ್ಲಿ ಮರುಭರ್ತಿ ಮಾಡಲಾಗುತ್ತದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ ಕಾರಿಯಪ್ಪ ಹೇಳುತ್ತಾರೆ.

ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಮಾತ್ರ ಇದೆ ಎಂದು ಡಾ ಕಾರಿಯಪ್ಪ ಸ್ಪಷ್ಟಪಡಿಸಿದ್ದಾರೆ. ಈಗಿರುವ ವೈದ್ಯರು ಮತ್ತು ಇತರ ಸಿಬ್ಬಂದಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp