ಕೋವಿಡ್ ಪರಿಸ್ಥಿತಿ ಬಗ್ಗೆ ಕಾಂಗ್ರೆಸ್ ನಾಯಕರ ಪ್ರಶ್ನೆ: ಸಮರ್ಥ ಉತ್ತರ ನೀಡದೆ ಪಾಲಿಕೆ ತಬ್ಬಿಬ್ಬು!

ಪ್ರತಿ ಪಕ್ಷ ಕಾಂಗ್ರೆಸ್ ಮುಖಂಡರು ಬಿಬಿಎಂಪಿ ಪಶ್ಚಿಮ ವಲಯದ ಅಧಿಕಾರಿಗಳಿಗೆ ಕೋವಿಡ್ ನಿರ್ವಹಣೆ ಬಗ್ಗೆ ಪ್ರಶ್ನೆ ಕೇಳಿದರು. ಆದರೆ ಉತ್ತರ ನೀಡಲು ಬಿಬಿಎಂಪಿ ಅಧಿಕಾರಿಗಳು ತಡವರಿಸಿದರು.
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ಪ್ರತಿ ಪಕ್ಷ ಕಾಂಗ್ರೆಸ್ ಮುಖಂಡರು ಬಿಬಿಎಂಪಿ ಪಶ್ಚಿಮ ವಲಯದ ಅಧಿಕಾರಿಗಳಿಗೆ ಕೋವಿಡ್ ನಿರ್ವಹಣೆ ಬಗ್ಗೆ ಪ್ರಶ್ನೆ ಕೇಳಿದರು. ಆದರೆ ಉತ್ತರ ನೀಡಲು ಬಿಬಿಎಂಪಿ ಅಧಿಕಾರಿಗಳು ತಡವರಿಸಿದರು.

ಹೋಮ್ ಐಸೋಲೇಟೆಡ್ ರೋಗಿಗಳಿಗೆ ಮೆಡಿಕಲ್ ಕಿಟ್ ನೀಡಲು ಮೀಸಲಿರಿಸಿದ್ದ ಹಣ ಎಲ್ಲಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ತಬ್ಬಿಬ್ಬಾದರು.

ಡಿಸಿಎಂ ಅಶ್ವತ್ಥನಾರಾಯಣ ಮತ್ತು ಕಂದಾಯ ಸಚಿವ ಆರ್.ಅಶೋಕ್ ಪರಿಸ್ಥಿತಿ ಸರಿದೂಗಿಸಲು ಪ್ರಯತ್ನಿಸಿದರು.ಕಾಂಗ್ರೆಸ್ ನಾಯಕರಾದ ದಿನೇಶ್ ಗುಂಡೂರಾವ್ ಹಲವು ಪ್ರಶ್ನೆ ಕೇಳಿದರು.

ಪಶ್ಚಿಮ ವಲಯದಿಂದ ಎಷ್ಟು ಮಂದಿಗೆ ಪಾಸಿಟಿವ್ ಬಂದಿದೆ,  ಎಷ್ಟು ಮಂದಿ ಆಸ್ಪತ್ರೆಯಲ್ಲಿದ್ದಾರೆ ಮತ್ತು ಎಷ್ಟು ಮಂದಿ ಮನೆಯಲ್ಲಿದ್ದಾರೆ ಎಂಬ ಅಂಕಿಅಂಶಗಳ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವೈದ್ಯಕೀಯ ಕಿಟ್‌ಗಳನ್ನು ನೀಡುವುದು ಏಕೆ ನಿಂತುಹೋಯಿತು ಮತ್ತು ಕೋವಿಡ್ ಅನ್ನು ನಿರ್ವಹಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾದ 25 ಲಕ್ಷ ರೂ.ಗಳಲ್ಲಿ ಏನಾಯಿತು ಎಂದು ಅವರು ಕೇಳಿದರು.

25 ಲಕ್ಷ ರು ಹಣ ಎಲ್ಲಿ ಹೋಯಿತು? ರೋಗಿಗಳಿಗೆ ಇನ್ನೂ ಏಕೆ ಮೆಡಿಕಲ್ ಕಿಟ್ ನೀಡಿಲ್ಲ, ಕಳೆದ ಬಾರಿ ರಸ್ತೆಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು, ಮನೆಗೆ ಮೆಡಿಕಲ್ ಕಿಟ್ ನೀಡಲಾಗಿತ್ತು, ಕಳೆದ ವರ್ಷ ಪರಿಸ್ಥಿತಿ ಇದಕ್ಕಿಂತ ಉತ್ತಮವಾಗಿತ್ತು, ಹಣವನ್ನು ಏನು ಮಾಡಿದಿರಿ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. ಹಣವನ್ನು ಪಿಪಿಇ ಕಿಟ್, ಸ್ಯಾನಿಟೈಸರ್,ಕೊಳ್ಳಲು ಬಳಸಿಕೊಂಡಿದ್ದಾಗಿ ಅಧಿಕಾರಿಗಳು ವಿವರಿಸಿದರು.

ಇಂತಹ ನಿರ್ಣಾಯಕ ಸಮಯದಲ್ಲಿ ವ್ಯಾಕ್ಸಿನೇಷನ್ ಏಕೆ ಕಡಿಮೆಯಾಗಿದೆ, ಎಂದು ಶಾಸಕ ಜಮೀರ್ ಅಹ್ಮದ್ ಪ್ರಶ್ನಿಸಿದರು.  18 ವರ್ಷ ತುಂಬಿದ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com