ಜನರೇ ಕೋವಿಡ್ ಬಗ್ಗೆ ಎಚ್ಚರಿಕೆಯಿಂದಿರಿ: ಸೆ.10ಕ್ಕೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 30 ಲಕ್ಷಕ್ಕೆ ಏರಬಹುದು!

ಮುಂದಿನ ತಿಂಗಳು ಸೆಪ್ಟೆಂಬರ್ 10ಕ್ಕೆ ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 32.8 ಕೋಟಿಗೆ ತಲುಪುವ ನಿರೀಕ್ಷೆಯಿದ್ದು 4.40 ಲಕ್ಷ ಮಂದಿ ಮೃತರಾಗಬಹುದು ಎಂದು ಜೀವನ್ ರಕ್ಷ ನಡೆಸಿದ ವಿಶ್ಲೇಷಣೆಯಿಂದ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂದಿನ ತಿಂಗಳು ಸೆಪ್ಟೆಂಬರ್ 10ಕ್ಕೆ ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 32.8 ಕೋಟಿಗೆ ತಲುಪುವ ನಿರೀಕ್ಷೆಯಿದ್ದು 4.40 ಲಕ್ಷ ಮಂದಿ ಮೃತರಾಗಬಹುದು ಎಂದು ಜೀವನ್ ರಕ್ಷ ನಡೆಸಿದ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಇನ್ನು ನಮ್ಮ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 29.50 ಲಕ್ಷ ಮತ್ತು ಸಾವಿನ ಸಂಖ್ಯೆ 37 ಸಾವಿರದ 470ಕ್ಕೆ ತಲುಪಬಹುದು ಎಂದು ಸಂಸ್ಥೆ ಅಂದಾಜಿಸಿದೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಬೆಂಗಳೂರು ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ಶೇಕಡಾ 24ರಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಶೇಕಡಾ 18.4ರಷ್ಟು ಹೆಚ್ಚಾಗಿದೆ. ಮೈಸೂರು, ಉಡುಪಿ ಮತ್ತು ಹಾಸನ ಜಿಲ್ಲೆಗಳಲ್ಲಿ ಕೂಡ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಕರ್ನಾಟಕ ರಾಜ್ಯ ಅತ್ಯಂತ ಜಾಗರೂಕರಾಗಿರಬೇಕು ಸದ್ಯ ರಾಜ್ಯದಲ್ಲಿ ಸುಮಾರು 22,000 ಸಕ್ರಿಯ ಪ್ರಕರಣಗಳಿವೆ. ಕಳೆದ ಮಾರ್ಚ್ ಮಧ್ಯದಲ್ಲಿ ಕೋವಿಡ್ ಎರಡನೇ ಅಲೆಯು ರಾಜ್ಯದಲ್ಲಿ ಬೀಸುವ ಮೊದಲು ನಾವು ನೋಡಿದ ಅದೇ ಪರಿಸ್ಥಿತಿ ಈಗ ಮತ್ತೆ ಕಾಣುತ್ತಿದೆ. ಕೇವಲ ಐದರಿಂದ ಆರು ವಾರಗಳ ಅವಧಿಯಲ್ಲಿ, ಕರ್ನಾಟಕವು 6 ಲಕ್ಷ ಸಕ್ರಿಯ ಪ್ರಕರಣಗಳನ್ನು ಕಂಡಿದೆ. ರಾಜ್ಯ ಸರ್ಕಾರವು ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾರ್ಯತಂತ್ರವನ್ನು ತರಬೇಕು ಎಂದು ಸಂಸ್ಥೆಯ ಸಂಚಾಲಕ ಮೈಸೂರು ಸಂಜೀವ್ ಹೇಳಿದ್ದಾರೆ.

ಅವರ ವಿಶ್ಲೇಷಣೆಯ ಪ್ರಕಾರ, ಕರ್ನಾಟಕದಲ್ಲಿ ಕಳೆದ 28 ದಿನಗಳ ಬೆಳವಣಿಗೆ ದರ (ಎಂಜಿಆರ್) ಶೇ 1.5 ರಷ್ಟಿದೆ ಮತ್ತು ಮೂರನೇ ತರಂಗವನ್ನು ತಪ್ಪಿಸಲು ಎಲ್ಲಾ ಜಿಲ್ಲೆಗಳ ಎಂಜಿಆರ್ ಅನ್ನು ಈ ಅಂಕಿ ಅಂಶದ ಅಡಿಯಲ್ಲಿ ತರಬೇಕು. ದಕ್ಷಿಣ ಕನ್ನಡ, ಕೊಡಗು, ಉಡುಪಿ, ಹಾಸನ, ಉತ್ತರ ಕನ್ನಡ, ಚಿಕ್ಕಮಗಳೂರು, ಚಾಮರಾಜನಗರ ಮತ್ತು ಶಿವಮೊಗ್ಗ ಜಿಲ್ಲೆಗಳಿಗಿಂತ ಕರ್ನಾಟಕಕ್ಕಿಂತ ಹೆಚ್ಚಿನ ಎಂಜಿಆರ್ ಹೊಂದಿರುವ ಜಿಲ್ಲೆಗಳಾಗಿವೆ ಎಂದು ತಿಳಿದುಬಂದಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com