ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಅನುಮತಿ
ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿಗೆ ಅವರಿಗೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಜಿಲ್ಲೆಗಳಲ್ಲಿ ಎಂಟು ವಾರಗಳ ಕಾಲ ಉಳಿಯಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
Published: 19th August 2021 05:43 PM | Last Updated: 19th August 2021 07:41 PM | A+A A-

ಜನಾರ್ದನ ರೆಡ್ಡಿ
ನವದೆಹಲಿ: ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿಗೆ ಅವರಿಗೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಜಿಲ್ಲೆಗಳಲ್ಲಿ ಎಂಟು ವಾರಗಳ ಕಾಲ ಉಳಿಯಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
ಹಿಂದಿನ ಸಂದರ್ಭದಲ್ಲಿ ಬಳ್ಳಾರಿಗೆ ಭೇಟಿ ನೀಡಿದಾಗ ರೆಡ್ಡಿ ಅವರು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ ಎಂಬುದನ್ನು ಪರಿಗಣಿಸಿದ ನ್ಯಾಯಪೀಠ, ರೆಡ್ಡಿ ಅವರ ಉತ್ತಮ ನಡತೆಯ ಆಧಾರದ ಮೇಲೆ ಸುಪ್ರೀಂಕೋರ್ಟ್ ತೀರ್ಪು ನೀಡಿತು.
ಈ ಪ್ರಕರಣದ ವಿಚಾರಣೆ ಇನ್ನೂ ಆರಂಭಗೊಂಡಿಲ್ಲ. ಅರ್ಜಿದಾರರು ಬಳ್ಳಾರಿಗೆ ಭೇಟಿ ನೀಡಿದಾಗ ಯಾವುದೇ ಜಾಮೀನು ಷರತ್ತನ್ನು ಉಲ್ಲಂಘಿಸಿಲ್ಲ. ಪ್ರಕರಣದ ಈ ಸಂಗತಿಗಳು ಮತ್ತು ಸನ್ನಿವೇಶಗಳನ್ನು ನೋಡಿದರೆ, ಜಾಮೀನು ಆದೇಶವನ್ನು ಮಾರ್ಪಡಿಸುವಂತೆ ನಿರ್ದೇಶಿಸಿದೆ ಎಂದು ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ದಿನೇಶ್ ಮಹೇಶ್ವರಿ ಹೇಳಿದರು.
ಇದರೊಂದಿಗೆ, ಬಳ್ಳಾರಿ (ಕರ್ನಾಟಕ), ಕಡಪ ಮತ್ತು ಅನಂತಪುರ (ಆಂಧ್ರ ಪ್ರದೇಶ) ಜಿಲ್ಲೆಗಳಿಗೆ ಭೇಟಿ ನೀಡಲು ಮತ್ತು ಉಳಿದುಕೊಳ್ಳಲು ರೆಡ್ಡಿಗೆ ಅನುಮತಿ ನೀಡಲಾಗಿದೆ. 2015ರ ಜ. 20ರಂದು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು, ಆದರೆ ಈ ಜಿಲ್ಲೆಗಳಿಗೆ ಭೇಟಿ ನೀಡದಂತೆ ಷರತ್ತು ವಿಧಿಸಿತ್ತು.
ರೆಡ್ಡಿ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ, ಸಿಬಿಐ ತನ್ನ ತನಿಖೆಯನ್ನು ಪೂರ್ಣಗೊಳಿಸಿದ್ದರಿಂದ ತನ್ನ ಕಕ್ಷಿದಾರನ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ತೆರವುಗೊಳಿಸಬೇಕು ಮಾಡಬೇಕು ಎಂದು ಹೇಳಿದರು.
"ಅರ್ಜಿದಾರರು ತಮ್ಮ ಊರಾದ ಬಳ್ಳಾರಿಯಿಂದ ಎಷ್ಟು ದಿನ ಹೊರಗಿರಬೇಕು. ಈ ಷರತ್ತನ್ನು ಮನ್ನಾ ಮಾಡಬೇಕು. ಪ್ರಕರಣದಲ್ಲಿ ಈಗಾಗಲೇ ಸುಮಾರು 10,000 ದಾಖಲೆಗಳು ಮತ್ತು 300 ಸಾಕ್ಷಿಗಳಿದ್ದರೆ. ಈ ವಿಚಾರಣೆ ಮುಂದಿನ10 ವರ್ಷಗಳು ಸಾಗಬಹುದು. ಅಲ್ಲಿಯವರೆಗೆ ಊರಿಗೆ ಭೇಟಿ ನೀಡದಿರುವಂತಹ ನಿಯಮ ಕಠಿಣವಾಗಿದೆ ಎಂದು ವಾದಿಸಿದರು.
ಮತ್ತೊಂದೆಡೆ, ಸಿಬಿಐ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್, ಆರೋಪಿ ಈಗಲೂ ಸಾಕ್ಷಿಗಳನ್ನು ಬೆದರಿಸುವ ಮತ್ತು ಲಂಚ ನೀಡುವ ಮೂಲಕ ಹೇಳಿಕೆ ಬದಲಿಸಲು ಪ್ರಯತ್ನಿಸಬಹುದು ಎಂದರು.