ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ಮಧ್ಯ ಏಷ್ಯಾದಲ್ಲೇ ಬೆಸ್ಟ್

ಕೆಂಪೇಗೌಡ ವಿಮಾನನಿಲ್ದಾಣದ ಸಿಬ್ಬಂದಿಗಳಿಗೆ 'ಬೆಸ್ಟ್ ಏರ್ ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಮತ್ತು ಸೆಂಟ್ರಲ್ ಏಷ್ಯಾ' ಪುರಸ್ಕಾರ ಸಿಕ್ಕಿದೆ. ಸ್ಕೈ ಟ್ರಾಕ್ಸ್ ವರ್ಲ್ಡ್ ಏರ್ ಪೋರ್ಟ್ ಅವಾರ್ಡ್ ಸಂಸ್ಥೆ ಈ ಪುರಸ್ಕಾರ ನೀಡಿದೆ. 
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸಿಬ್ಬಂದಿ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸಿಬ್ಬಂದಿ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸಿಬ್ಬಂದಿಗಳಿಗೆ 'ಬೆಸ್ಟ್ ಏರ್ ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಮತ್ತು ಸೆಂಟ್ರಲ್ ಏಷ್ಯಾ' ಪುರಸ್ಕಾರ ಸಿಕ್ಕಿದೆ. ಸ್ಕೈ ಟ್ರಾಕ್ಸ್ ವರ್ಲ್ಡ್ ಏರ್ ಪೋರ್ಟ್ ಅವಾರ್ಡ್ ಸಂಸ್ಥೆ ಈ ಪುರಸ್ಕಾರ ನೀಡಿದೆ. 

ಕೊರೊನಾ ಕಾರಣದಿಂದಾಗಿ ವಿಮಾನಯಾನ ಉದ್ಯಮ ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಈ ಪುರಸ್ಕಾರ ಮಹತ್ವಪೂರ್ಣವಾದುದು ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಬಗ್ಗೆ ಹರ್ಷ ವ್ಯಕ್ತ ಪಡಿಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ 'ಈ ಪುರಸ್ಕಾರವನ್ನು ವಿಮಾನ ಪ್ರಯಾಣಿಕರು ನೀಡಿದ ವೋಟಿಂಗ್ ಆಧರಿಸಿ ನೀಡಲಾಗುತ್ತದೆ. ನಮ್ಮ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದ ಎಲ್ಲಾ ವಿಮಾನಪ್ರಯಾಣಿಕರಿಗೂ ಧನ್ಯವಾದಗಳು' ಎಂದರು.

ವರ್ಲ್ಡ್ ಏರ್ ಪೋರ್ಟ್ ಅವಾರ್ಡ್ಸ್ ಕಾರ್ಯಕ್ರಮ 1999ರಲ್ಲಿ ಪ್ರಾರಂಭಗೊಂಡಿತು. ವಿಮಾನ ಪ್ರಯಾಣಿಕರ ಅಭಿಪ್ರಾಯಗಳನ್ನು ಧರಿಸಿ ಈ ಸಂಸ್ಥೆ ವಿಜೇತ ವಿಮಾನ ನಿಲ್ದಾಣಗಳಿಗೆ ಪುರಸ್ಕಾರ ನೀಡುತ್ತದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com