ಒಂದೂವರೆ ವರ್ಷದ ಬಳಿಕ ಶಾಲೆಯತ್ತ ಮುಖ ಮಾಡಿದ ವಿದ್ಯಾರ್ಥಿಗಳು: ಶಿಕ್ಷಕರು ಹೇಗೆ ಬರಮಾಡಿಕೊಂಡರು, ಶಾಲೆಗಳತ್ತ ಒಂದು ಸುತ್ತು

ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಒಂದೂವರೆ ವರ್ಷಗಳಿಂದ ಬಾಗಿಲು ಹಾಕಿದ್ದ ಶಾಲಾ-ಕಾಲೇಜುಗಳು ಸೋಮವಾರ(ಆ.23ಕ್ಕೆ ) ಆರಂಭವಾಗಿದೆ.
ಇಂದು ಹುಬ್ಬಳ್ಳಿಯಲ್ಲಿ ಮಕ್ಕಳು ಶಾಲೆಗೆ ಬಂದ ರೀತಿ
ಇಂದು ಹುಬ್ಬಳ್ಳಿಯಲ್ಲಿ ಮಕ್ಕಳು ಶಾಲೆಗೆ ಬಂದ ರೀತಿ

ಬೆಂಗಳೂರು: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಒಂದೂವರೆ ವರ್ಷಗಳಿಂದ ಬಾಗಿಲು ಹಾಕಿದ್ದ ಶಾಲಾ-ಕಾಲೇಜುಗಳು ಸೋಮವಾರ(ಆ.23ಕ್ಕೆ ) ಆರಂಭವಾಗಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇಂದು 9ರಿಂದ 12ನೇ ತರಗತಿಯವರೆಗೆ ಭೌತಿಕ ತರಗತಿಗಳು ಆರಂಭವಾಗಿದ್ದು ಗಡಿ ಭಾಗದ ಜಿಲ್ಲೆಗಳಲ್ಲಿ ಮತ್ತು ಕೋವಿಡ್ ಸೋಂಕು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಮಾತ್ರ ಇನ್ನೂ ಶಿಕ್ಷಣ ಇಲಾಖೆ ಆರಂಭಿಸಿಲ್ಲ.

ಹಾಗಾದರೆ ಇಂದು ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಹೇಗೆ ಶಾಲೆ ಆರಂಭಗೊಂಡವು, ತರಗತಿಗಳು ಹೇಗೆ ನಡೆಯುತ್ತಿವೆ, ವಿದ್ಯಾರ್ಥಿಗಳು ಹೇಗೆ ಶಾಲೆಗೆ ಬಂದರು, ಶಾಲೆಗಳಲ್ಲಿ ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಒಂದು ರೌಂಡ್ ನೋಡಿಕೊಂಡು ಬರೋಣ:

ಬಹಳ ಸಮಯದ ನಂತರ, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಇಂದು ಬೆಳಗ್ಗೆ ಕಂಡುಬಂದ ದೃಶ್ಯ ಹೀಗಿದೆ-

ಹಲವು ಶಾಲೆಗಳು ಇಂದು ಮಕ್ಕಳನ್ನು ಶಿಕ್ಷಕರನ್ನು ಬರಮಾಡಿಕೊಳ್ಳಲು ರಂಗೋಲಿ, ತೋರಣಗಳಿಂದ ಅಲಂಕೃತಗೊಂಡವು. ವಿಜಯಪುರದ ಎಸ್ ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ ಡಾ ಜಿ ಡಿ ಅಕಮಂಚಿ, ನಾವು ವಿದ್ಯಾರ್ಥಿಗಳನ್ನು ತರಗತಿಗೆ ಕಳುಹಿಸುವಾಗ ಎಲ್ಲಾ ಕೋವಿಡ್ ಶಿಷ್ಠಾಚಾರಗಳನ್ನು ಪಾಲಿಸಿದ್ದೇವೆ. ಶೇಕಡಾ 60ರಷ್ಟು ವಿದ್ಯಾರ್ಥಿಗಳು ಇಂದು ತರಗತಿಗಳಿಗೆ ಹಾಜರಾಗಿದ್ದಾರೆ ಎಂದರು. 

ಎಸ್ ಎಸ್ ಹೈಸ್ಕೂಲ್ ನಲ್ಲಿ ಶಿಕ್ಷಕರು ಮಕ್ಕಳಿಗೆ ಸಲಹೆ ಸೂಚನೆಗಳನ್ನು ಆರಂಭದಲ್ಲಿ ಪ್ರವೇಶಿಸುವಾಗಲೇ ನೀಡಿದರು.ಮಕ್ಕಳು ಶಾಲೆ ಆರಂಭವಾದ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. 

ಇಂದು 9 ನೇ ತರಗತಿಯಿಂದ ಶಾಲೆಗಳು ಪುನರಾರಂಭವಾಗುತ್ತಿದ್ದಂತೆ, ವಿದ್ಯಾರ್ಥಿಗಳು ಬೆಂಗಳೂರಿನ ಕೆಂಗೇರಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಆವರಣ ಪ್ರವೇಶಿಸುತ್ತಿರುವುದು ಕಂಡುಬಂತು.

ಕೋಲಾರದಲ್ಲಿ ಇಂದು ಕಂಡುಬಂದದ್ದು ಹೀಗೆ:

ಧಾರವಾಡದ ಶಾಲೆಯಲ್ಲಿ ಇಂದು ಕಂಡುಬಂದದ್ದು ಹೀಗೆ:

ವಿದ್ಯಾರ್ಥಿಗಳು ಶಾಲೆ ಆರಂಭ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com