ಕಿದ್ವಾಯಿ ಆಸ್ಪತ್ರೆಯಲ್ಲಿ ಒಪಿಡಿ ತೆರೆದ ಇನ್ಫೋಸಿಸ್ ಫೌಂಡೇಷನ್

ಕಿದ್ವಾಯಿ ಗಂಥಿ ಸಂಸ್ಥೆಯಲ್ಲಿ ಇನ್ಫೋಸಿಸ್ ವತಿಯಿಂದ ನಿರ್ಮಿಸಿರುವ ಒಪಿಡಿ ಬ್ಲಾಕ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವೋ ಸುಧಾಕರ್ ಅವರು ಸೋಮವಾರ ಉದ್ಘಾಟನೆ ಮಾಡಿದರು. 
ಕಿದ್ವಾಯಿ ಗಂಥಿ ಸಂಸ್ಥೆಯಲ್ಲಿ ಇನ್ಫೋಸಿಸ್ ವತಿಯಿಂದ ನಿರ್ಮಿಸಿರುವ ಒಪಿಡಿ ಬ್ಲಾಕ್ ನ್ನು ಸಿಎಂ ಬೊಮ್ಮಾಯಿ ಹಾಗೂ ಸುಧಾಕರ್ ಅವರು ಉದ್ಘಾಟನೆ ಮಾಡಿದರು.
ಕಿದ್ವಾಯಿ ಗಂಥಿ ಸಂಸ್ಥೆಯಲ್ಲಿ ಇನ್ಫೋಸಿಸ್ ವತಿಯಿಂದ ನಿರ್ಮಿಸಿರುವ ಒಪಿಡಿ ಬ್ಲಾಕ್ ನ್ನು ಸಿಎಂ ಬೊಮ್ಮಾಯಿ ಹಾಗೂ ಸುಧಾಕರ್ ಅವರು ಉದ್ಘಾಟನೆ ಮಾಡಿದರು.

ಬೆಂಗಳೂರು: ಕಿದ್ವಾಯಿ ಗಂಥಿ ಸಂಸ್ಥೆಯಲ್ಲಿ ಇನ್ಫೋಸಿಸ್ ವತಿಯಿಂದ ನಿರ್ಮಿಸಿರುವ ಒಪಿಡಿ ಬ್ಲಾಕ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವೋ ಸುಧಾಕರ್ ಅವರು ಸೋಮವಾರ ಉದ್ಘಾಟನೆ ಮಾಡಿದರು. 

ಇನ್ಫೋಸಿಸ್‌ ನ ಸಿಎಸ್‌ಆರ್‌ ವಿಭಾಗ ಮತ್ತು ಲೋಕೋಪಕಾರಿ ಸಂಸ್ಥೆ ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಂಕೋಲಜಿಯಲ್ಲಿನ 75,000 ಚದರ ಅಡಿ ವಿಸ್ತೀರ್ಣದ ಬಹು-ಶಿಸ್ತಿನ ಹೊರರೋಗಿ (ಒಪಿಡಿ) ಬ್ಲಾಕ್‌ನ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. 

ಈ ಹೊಸ ಒಪಿಡಿ ಬ್ಲಾಕ್‌ಗೆ ಇನ್ಫೋಸಿಸ್‌ ಫೌಂಡೇಷನ್ 25.5 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಇದು 12ಕ್ಕೂ ಹೆಚ್ಚು ಇಲಾಖೆಗಳ ವ್ಯಾಪ್ತಿ ಹೊಂದಿದ್ದು, ಪ್ರತಿನಿತ್ಯ 1,800 ರೋಗಿಗಳಿಗೆ ಸ್ಥಳಾವಕಾಶ ಒದಗಿಸುವ ಗುರಿ ಹೊಂದಿದೆ.

ಉದ್ಘಾಟನೆ ವೇಳೆ ಮಾತನಾಡಿರುವ ಸುಧಾಮೂರ್ತಿ ಅವರು, ''ಸೂಕ್ತ ಚಿಕಿತ್ಸೆ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಹಲವು ಬಾರಿ ದುರದೃಷ್ಟಕರ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂಕಷ್ಟದಲ್ಲಿರುವ ಜನರಿಗೆ, ವಿಶೇಷವಾಗಿ ನಾವೆಲ್ಲರೂ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಸಿಲುಕಿರುವ ಸಂದರ್ಭದಲ್ಲಿ, ಜನರಿಗೆ ಸ್ವಚ್ಛ ಹಾಗೂ ಸಮಯಕ್ಕೆ ಸರಿಯಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇದು ಫೌಂಡೇಷನ್‌ನ ಒಂದು ಸಣ್ಣ ಪ್ರಯತ್ನವಾಗಿದೆ. 

ಈ ಉಪಕ್ರಮದ ಸಹಭಾಗಿತ್ವ ಹಾಗೂ ಬೆಂಬಲಕ್ಕೆ ನಾವು, ರಾಜ್ಯ ಸರ್ಕಾರ, ಗೌರವಾನ್ವಿತ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಮತ್ತು ಕಿದ್ವಾಯಿ ಗ್ರಂಥಿ ಸ್ಮಾರಕ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com