ನಾಯಿಮರಿಗೆ 66 ಲಕ್ಷ ರೂ. ತೆತ್ತು ಮೋಸ ಹೋದ ಡೆಹರಾಡೂನ್ ಮಹಿಳೆ: ಬೆಂಗಳೂರು ನಿವಾಸಿಯಿಂದ ವಂಚನೆ

ಶುರುವಿನಲ್ಲಿ ಪೂರ್ತಿ ಮೊತ್ತವನ್ನು ಕಟ್ಟಿಸಿಕೊಂಡ ಕ್ಯಾಮರೂನ್ ಮೂಲದ ಆರೋಪಿ ನಂತರ ಸಂತಾನೋತ್ಪತ್ತಿ ಶುಲ್ಕ, ಸಾರಿಗೆ ಶುಲ್ಕ, ಕಸ್ಟಮ್ಸ್ ಶುಲ್ಕ ಎಂದೆಲ್ಲಾ ಹೇಳಿ ಬೇರೆ ಬೇರೆ ಹಂತಗಳಲ್ಲಿ ಮಹಿಳೆಯಿಂದ ಹಣ ಕಿತ್ತಿದ್ದ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಡೆಹರಾಡೂನ್ ಮೂಲದ 55 ವರ್ಷದ ಮಹಿಳೆ ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿ ಮರಿಯೊಂದಕ್ಕೆ 66 ಲಕ್ಷ ತೆತ್ತು ಮೋಸ ಹೋಗಿರುವ ಕುತೂಹಲಕರ ಘಟನೆ ನಡೆದಿದೆ. ಈ ಸಂಬಂಧ ದಾಖಲಾದ ದೂರಿನ ಅನ್ವಯ ಆರೋಪಿ ಆಫ್ರಿಕಾ ರಾಷ್ಟ್ರ ಕ್ಯಾಮರೂನ್ ಪ್ರಜೆ ಡಿಂಗ್ ಬಾಬ್ಗಾ ಎಂಬಾತನನ್ನು ಉತ್ತರಾಖಂಡ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಆತನನ್ನು ಹೆಚ್ಚಿನ ವಿಚಾರಣೆಗೆ ಉತ್ತರಾಖಂಡಕ್ಕೆ ಕರೆದೊಯ್ಯಲಾಗಿದೆ. 

ಮೋಸ ಹೋದ ಮಹಿಳೆ ತನ್ನ ಮಗಳ ಹುಟ್ಟಿದ ಹಬ್ಬಕ್ಕೆ ಆಕೆಗೆ ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿಯನ್ನು ಉಡುಗೊರೆಯಾಗಿ ಕೊಡಲು ತೀರ್ಮಾನಿಸಿದ್ದರು. ಅದಕ್ಕಾಗಿ ಅವರು ಆನ್ಲೈನ್ ಮೊರೆ ಹೋಗಿದ್ದರು.

ಜಾಲತಾಣವೊಂದರಲ್ಲಿ ನಾಯಿ ಬೆಲೆ 15,000ರೂ. ಎಂದು ನಮೂದು ಮಾಡಲಾಗಿತ್ತು. ಅದೇ ಜಾಲತಾಣದ ಮೂಲಕ ಆಕೆಗೆ ಆರೋಪಿಯ ಪರಿಚಯವಾಗಿತ್ತು. 

ಶುರುವಿನಲ್ಲಿ ಪೂರ್ತಿ ಮೊತ್ತವನ್ನು ಕಟ್ಟಿಸಿಕೊಂಡ ಆರೋಪಿ ನಂತರ ಸಂತಾನೋತ್ಪತ್ತಿ ಶುಲ್ಕ, ಸಾರಿಗೆ ಶುಲ್ಕ, ಕಸ್ಟಮ್ಸ್ ಶುಲ್ಕ ಎಂದೆಲ್ಲಾ ಹೇಳಿ ಬೇರೆ ಬೇರೆ ಹಂತಗಳಲ್ಲಿ ಮಹಿಳೆಯಿಂದ ಹಣ ಪೀಕಿದ್ದ. ಆರೋಪಿ ಮಾತಿಗೆ ಮರುಳಾಗಿದ್ದ ಮಹಿಳೆಗೆ ತಾನು ಮೋಸ ಹೋಗಿರುವುದು ತಿಳಿಯುವಷ್ಟ್ರರಲ್ಲಿ ಅಕೆ ಒಟ್ಟು 66 ಲಕ್ಷ ಹಣ ಕಳೆದುಕೊಂಡಾಗಿತ್ತು.

ನಂತರ ಆರೋಪಿ ಬಳಿ ತನ್ನ ಹಣ ಮರಳಿಸುವಂತೆ ಆಕೆ ಧಮ್ಕಿ ಹಾಕಿದ್ದಳು. ಆಗ ಆರೋಪಿ ಇನ್ನೊಂದಷ್ಟು ಹೆಚ್ಚುವರಿ ಹನ ಕೊಟ್ತರೆ ತಾನು ಎಲ್ಲಾ ಹಣವನ್ನು ಮರಳಿಸುವುದಾಗಿ ಹೇಳಿದ್ದ. ಮತ್ತೆ ಆತನ ಮಾತಿಗೆ ಮರುಳಾದ ಮಹಿಳೆ ಹಣ ಕಳುಹಿಸಿದ್ದಳು. ನಂತರ ಆತ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಈ ಬಗ್ಗೆ ಮಹಿಳೆ ಪೊಲೀಸ್ ದೂರು ನೀಡಿದಾಗ ಆರೋಪಿ ಬೆಂಗಳೂರಿನಲ್ಲಿ ಇದ್ದಿದ್ದು ಪತ್ತೆಯಾಗಿತ್ತು. ಆರೋಪಿಯಿಂದ 12ಕ್ಕೂ ಹೆಚ್ಚು ಮೊಬೈಲ್ ಫೋನುಗಳು, ಸಿಮ್ ಕಾರ್ಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com