ಕ್ಷಯ ರೋಗ ಪತ್ತೆಗಾಗಿ ಆರೋಗ್ಯ ಇಲಾಖೆಯಿಂದ ಮನೆ ಮನೆ ಸಮೀಕ್ಷೆ

ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಮತ್ತು ಅವರ ಮನೆಯ ಸಂಪರ್ಕದಲ್ಲಿರುವವರ ಮನೆ ಮನೆ ಭೇಟಿ ಮಾಡಿ ಕ್ಷಯರೋಗ ಪತ್ತೆಗಾಗಿ ಆರೋಗ್ಯ ಇಲಾಖೆ ಸಮೀಕ್ಷೆ ನಡೆಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಮತ್ತು ಅವರ ಮನೆಯ ಸಂಪರ್ಕದಲ್ಲಿರುವವರ ಮನೆ ಮನೆ ಭೇಟಿ ಮಾಡಿ ಕ್ಷಯರೋಗ ಪತ್ತೆಗಾಗಿ ಆರೋಗ್ಯ ಇಲಾಖೆ ಸಮೀಕ್ಷೆ ನಡೆಸಿದೆ.

ಕೊವಿಡ್ -19 ಮತ್ತು ಕ್ಷಯರೋಗವು ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯ ಲಕ್ಷಣಗಳುಳ್ಳ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಾಗಿದ್ದು, ಕ್ಷಯರೋಗವು ಕೋವಿಡ್ -19 ಸೋಂಕಿನ ಅಪಾಯವನ್ನು ಹೆಚ್ಚಿಸುತ್ತಿವೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. 

ಕ್ಷಯ ಮತ್ತು ಕೋವಿಡ್ -19 ಸೋಂಕು ತ್ವರಿತ ಮತ್ತು ತೀವ್ರ ರೋಗ ಲಕ್ಷಣಗಳ ಬೆಳವಣಿಗೆ ಹಾಗೂ ರೋಗದ ಪ್ರಗತಿಯು ಎರಡೂ ರೋಗಿಗಳ ಕಳಪೆ ಫಲಿತಾಂಶದೊಂದಿಗೆ ಸಂಬಂಧಿಸಿದ್ದು, ರೋಗಿಗಳ ಫಲಿತಾಂಶಗಳನ್ನು ಸುಧಾರಿಸಲು, ಸಂಪರ್ಕಗಳ ಮತ್ತು ಸಮುದಾಯದಲ್ಲಿ ಪ್ರಕರಣವನ್ನು ಕಡಿಮೆ ಮಾಡಲು ಈ ಎರಡು ರೋಗಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಅಗತ್ಯವಿದೆ. 

ಹೀಗಾಗಿ  ಆರೋಗ್ಯ ಇಲಾಖೆಯು ಆಗಸ್ಟ್ 16 ರಿಂದ ಆಗಸ್ಟ್ 31 ರವರೆಗೆ ವಿಶೇಷವಾಗಿ ಕೋವಿಡ್ ನಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಮತ್ತು ಅವರ ಸಂಪರ್ಕದಲ್ಲಿರುವವರ ಮನೆ - ಮನೆ ಭೇಟಿ ಮಾಡಿ ಕ್ಷಯರೋಗ ಪತ್ತೆಗಾಗಿ ಸಕ್ರಿಯ ಅಭಿಯಾನವನ್ನು ಹಮ್ಮಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com