ಬೆಂಗಳೂರು: ಆಟೋ ಪರಿಷ್ಕೃತ ದರ ಇಂದಿನಿಂದ ಜಾರಿ, ನೂತನ ದರ ಎಷ್ಟು?

ರಾಜಧಾನಿ ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇನ್ನು ಮುಂದೆ ಹೆಚ್ಚಿನ ದರ ನೀಡಲು ಸಜ್ಜಾಗಿರಿ. ನಗರದಲ್ಲಿ ಆಟೋ ಪ್ರಯಾಣ ದರ (Auto Fare) ಹೆಚ್ಚಳವಾಗುತ್ತಿದ್ದು ಪರಿಷ್ಕೃತ ದರ ಇಂದು(ಡಿಸೆಂಬರ್ 1) ಬುಧವಾರದಿಂದಲೇ ಜಾರಿಗೆ ಬರುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇನ್ನು ಮುಂದೆ ಹೆಚ್ಚಿನ ದರ ನೀಡಲು ಸಜ್ಜಾಗಿರಿ. ನಗರದಲ್ಲಿ ಆಟೋ ಪ್ರಯಾಣ ದರ (Auto Fare) ಹೆಚ್ಚಳವಾಗುತ್ತಿದ್ದು ಪರಿಷ್ಕೃತ ದರ ಇಂದು(ಡಿಸೆಂಬರ್ 1) ಬುಧವಾರದಿಂದಲೇ ಜಾರಿಗೆ ಬರುತ್ತಿದೆ.

ನೂತನ ದರ ಹೇಗಿದೆ?: ಒಂಭತ್ತು ವರ್ಷಗಳ ಬಳಿಕ ಆಟೋದರ ಪರಿಷ್ಕರಣೆಯಾಗುತ್ತಿದೆ. ಮೊದಲ 2 ಕಿಲೋ ಮೀಟರ್ ವರೆಗೆ ಕನಿಷ್ಠ ಪ್ರಯಾಣ ದರ (Minimum Charge) 25ರೂಪಾಯಿಯಿಂದ 30 ರೂಪಾಯಿಗೆ ಏರಿಕೆಯಾಗಿದೆ. ಕನಿಷ್ಠ ಪ್ರಯಾಣ ದರದ ನಂತರದ ಪ್ರತಿ ಕಿಲೋ ಮೀಟರ್ ದರ 15 ರೂಪಾಯಿ ಹೆಚ್ಚಳವಾಗಲಿದೆ.

ಕಾಯುವಿಕೆಯ ದರ (Waiting Charge) ಮೊದಲ 5 ನಿಮಿಷ ಉಚಿತವಾಗಿರುತ್ತದೆ. ನಂತರ ಪ್ರತಿ ನಿಮಿಷಕ್ಕೆ 5 ರೂಪಾಯಿ ನಿಗದಿಗೊಳಿಸಲಾಗಿದೆ. ಪ್ರಯಾಣಿಕರ ಲಗೇಜು ದರ ಮೊದಲ 20 ಕೆ.ಜಿ.ಗೆ ಉಚಿತ. 20 ಕೆ.ಜಿ.ಯಿಂದ 50 ಕೆ.ಜಿ.ವರೆಗೆ 5  ರೂಪಾಯಿ ನಿಗದಿಪಡಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ಆಟೋ ಪ್ರಯಾಣ ದರ ಸಾಮಾನ್ಯ ದರ ಜತೆಗೆ ಅರ್ಧ ಪಟ್ಟು ಹೆಚ್ಚಳವಾಗುತ್ತದೆ. 

ದರದಲ್ಲಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಆಟೋ ಚಾಲಕರು (Auto Drivers) ತಮ್ಮ ಆಟೋ ಮೀಟರ್‌ಗಳಿಗೆ ಬರುವ ಫೆಬ್ರವರಿ 28ರೊಳಗೆ ಸಾರಿಗೆ ಅಧಿಕಾರಿಗಳಿಂದ ಪ್ರಮಾಣೀಕರಿಸಿಕೊಂಡು ಮತ್ತೆ ಮುದ್ರೆ ಹಾಕಿಸಿಕೊಳ್ಳಬೇಕಾಗಿದೆ. ಪರಿಷ್ಕರಣೆ ದರ ಪ್ರಯಾಣಿಕರಿಂದ ನೋಡಲು ಸಿಗುವಂತೆ ಪ್ರದರ್ಶಿಸಬೇಕು. ರಾತ್ರಿ 10 ಗಂಟೆಯ ನಂತರ ಪ್ರಯಾಣ ಮಾಡುವವರು ಪ್ರಯಾಣ ವೆಚ್ಚದ ಒಂದೂವರೆ ಪಟ್ಟು ಪಾವತಿ ಮಾಡಬೇಕಾಗುತ್ತದೆ.

ಕಳೆದ ಬಾರಿ ಆಟೋದರ ಪರಿಷ್ಕರಣೆಯಾಗಿದ್ದು 2013 ರಲ್ಲಿ 1.9 ಕಿಲೋ ಮೀಟರ್ ಗೆ ಕನಿಷ್ಟ ಪ್ರಯಾಣ ದರ 20 ರಿಂದ 25 ರೂಪಾಯಿಗೆ ಹೆಚ್ಚಳವಾಗಿತ್ತು.  2019 ರಲ್ಲಿ ದರ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ ಆಟೋ ದರ ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಿರಲಿಲ್ಲ.  ಈಗ ತೈಲ ಹಾಗೂ ಗ್ಯಾಸ್ ದರ ಹೆಚ್ಚಳ ಬೆನ್ನಲ್ಲೇ ದರ ಪರಿಷ್ಕರಣೆ ಮಾಡುವಂತೆ ಆಟೋ ಚಾಲಕರು ಮನವಿ ಮಾಡಿದ್ದರು.

ಬೆಂಗಳೂರಿನಲ್ಲಿ ಪ್ರತಿನಿತ್ಯ ಲಕ್ಷಾಂತರ ಮಂದಿ ಆಟೋದಲ್ಲಿ ಪ್ರಯಾಣಿಸುತ್ತಾರೆ, ಸಾವಿರಾರು ಮಂದಿ ಆಟೋ ಚಾಲಕರು ಆಟೋ ಚಲಾಯಿಸಿ ಜೀವನ ಸಾಗಿಸುತ್ತಾರೆ. ಇದೀಗ ಆಟೋ ದರ ಹೆಚ್ಚಳವಾಗಿದ್ದು, ಜನಸಾಮಾನ್ಯರ ಜೀವನದ ಮೇಲೆ ಮತ್ತೊಂದು ದರ ಏರಿಕೆ ಬಿಸಿ ತಟ್ಟಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com