ಶವಾಗಾರದಲ್ಲಿ ಕೊಳೆತ ಸ್ಥಿತಿಯಲ್ಲಿ ಇಬ್ಬರು ಕೋವಿಡ್ ಸೋಂಕಿತರ ಶವ ಪತ್ತೆ ಪ್ರಕರಣ: ಬೆಂಗಳೂರಿನ ಇಎಸ್ಐ ಆಸ್ಪತ್ರೆಯ ಡೀನ್ ಎತ್ತಂಗಡಿ

ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಶವಾಗಾರದಲ್ಲಿ 16 ತಿಂಗಳ ಹಿಂದೆ ಮೃತಪಟ್ಟ ಇಬ್ಬರು ಕೋವಿಡ್ ಸೋಂಕಿತರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆಸ್ಪತ್ರೆಯ ಡೀನ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಶವಾಗಾರದಲ್ಲಿ 16 ತಿಂಗಳ ಹಿಂದೆ ಮೃತಪಟ್ಟ ಇಬ್ಬರು ಕೋವಿಡ್ ಸೋಂಕಿತರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆಸ್ಪತ್ರೆಯ ಡೀನ್ ಡಾ.ಜೀತೇಂದ್ರಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ನೌಕರರ ರಾಜ್ಯ ವಿಮಾ ನಿಗಮವು ಡೀನ್‌ ಡಾ.ಜೀತೇಂದ್ರಕುಮಾರ್ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ನಿರ್ದೇಶಕಿ, ಪ್ರಾಧ್ಯಾಪಕಿ ಡಾ.ರೇಣುಕಾ ರಾಮಯ್ಯ ಅವರನ್ನು ಪ್ರಭಾರಿ ಡೀನ್ ಆಗಿ ನೇಮಿಸಲಾಗಿದೆ.

ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ, ಜುಲೈ 2020ರಲ್ಲಿ ನಿಧನರಾಗಿದ್ದ ಇಬ್ಬರು COVID-19 ರೋಗಿಗಳ ಶವಗಳನ್ನು ವಿಲೇವಾರಿ ಮಾಡದೆ ಶವಗಾರದಲ್ಲಿಯೇ ಬಿಡಲಾಗಿದೆ ಎಂದು ನವೆಂಬರ್ 29 ರಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.

ಆ ಸಮಯದಲ್ಲಿ ಅನೇಕ ಕೋವಿಡ್ ಶವಗಳು ಇದ್ದ ಕಾರಣ, ಅವುಗಳನ್ನು ಹೊಸ ಶವಾಗಾರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಬಳಿಕ ಆಸ್ಪತ್ರೆಯ ಆಕ್ಸಿಜನ್ ಗ್ಯಾಸ್ ಪೈಪ್ ಲೈನ್ ಬಳಿ ಇದ್ದ ಹಳೆಯ ಶವಾಗಾರವನ್ನು ಮುಚ್ಚಲಾಯಿತು. ಈ ವೇಳೆ ಶವಾಗಾರದೊಳಗೆ ಇದ್ದ ಎರಡು ಶವಗಳನ್ನು ವಿಲೇವಾರಿ ಮಾಡಲು ಸಂಬಂಧಪಟ್ಟ ಆಸ್ಪತ್ರೆಯ ಅಧಿಕಾರಿಗಳು ಮರೆತಿದ್ದಾರೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com