ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪತ್ತೆ ಮಾಡುವ ಪಿಇಟಿ- ಸಿಟಿ  ಸ್ಕ್ಯಾನರ್ ಇಲ್ಲ

ವೈದ್ಯಕೀಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಬೆಂಗಳೂರಿನಲ್ಲಿ ಶ್ರೀಮಂತರಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ದೊರೆಯುತ್ತಿರಬಹುದು ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಮೂಲಭೂತ ಪರೀಕ್ಷಾ ಸಾಧನಗಳ ಕೊರತೆಯಿದೆ.
ಕಿದ್ವಾಯಿ ಆಸ್ಪತ್ರೆ
ಕಿದ್ವಾಯಿ ಆಸ್ಪತ್ರೆ

ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಬೆಂಗಳೂರಿನಲ್ಲಿ ಶ್ರೀಮಂತರಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ದೊರೆಯುತ್ತಿರಬಹುದು ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಮೂಲಭೂತ ಪರೀಕ್ಷಾ ಸಾಧನಗಳ ಕೊರತೆಯಿದೆ. ರಾಜ್ಯಾದ್ಯಂತ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ನೀಡುವ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ  ಅದನ್ನು ಪತ್ತೆ ಹಚ್ಚುವ ಪಿಇಟಿ- ಸಿಟಿ ಸ್ಯಾನ್ ಯಂತ್ರವೇ ಇಲ್ಲ ಎಂಬು ಆತಂಕಕಾರಿ ವಿಚಾರ ತಿಳಿದುಬಂದಿದೆ.

ಪಿಇಟಿ ಸ್ಕ್ಯಾನ್ ಎನ್ನುವುದು ಇಮೇಜಿಂಗ್ ಪರೀಕ್ಷೆಯಾಗಿದ್ದು ಅದು ಅಂಗಾಂಶಗಳು ಮತ್ತು ಅಂಗಗಳ ಚಯಾಪಚಯ ಅಥವಾ ಜೀವ ರಾಸಾಯನಿಕ ಕ್ರಿಯೆಯನ್ನು ಬಹಿರಂಗಪಡಿಸಲು ಸಹಾಯ ಮಾಡುತ್ತದೆ. ಪಿಟಿಇ- ಸಿಟಿ ಸ್ಕ್ಯಾನ್ ದೇಹದಲ್ಲಿನ ಯಾವುದೇ ಅಸಹಜತೆಯ ಬಗ್ಗೆ ನಿರ್ಣಾಯಕ ಕ್ರಿಯಾತ್ಮಕ ಮತ್ತು ರಚನಾತ್ಮಕ ಮಾಹಿತಿಯನ್ನು ನೀಡುತ್ತದೆ. 48 ಗಂಟೆಗಳಲ್ಲಿ ಚಿಕಿತ್ಸೆಗೆ ಪ್ರತಿಕ್ರಿಯೆಯನ್ನು ಕಾಣಬಹುದು, ಇತರ ಇಮೇಜ್ ಗಳಾದ ಎಂಐರ್ ಐನಲ್ಲಿ ಮಾಹಿತಿ ಸಿಗಲ್ಲ.

ಪಿಇಟಿ-ಸಿಟಿ ಸ್ಕ್ಯಾನ್‌ಗಳು ಕ್ಯಾನ್ಸರ್ ಮಾತ್ರವಲ್ಲದೆ ಇತರ ಮಾರಣಾಂತಿಕ ಕಾಯಿಲೆಗಳಾದ ಕಾರ್ಡಿಯಾಕ್ ಪರಿಸ್ಥಿತಿಗಳು (ಕಾರ್ಯಸಾಧ್ಯತೆ), ದೀರ್ಘಕಾಲದ, ಗೊತ್ತಿಲ್ಲದ ಜ್ವರ, ಬುದ್ಧಿಮಾಂದ್ಯತೆ ಇತ್ಯಾದಿಗಳ ರೋಗನಿರ್ಣಯ ಮತ್ತು ಚಿಕಿತ್ಸೆಯ ನಿರ್ವಹಣೆಯನ್ನು ಶೇಕಡಾ 50 ರಷ್ಟು ಬದಲಾಯಿಸಿದೆ ಎಂದು ಹಳೆಯ ಮದ್ರಾಸ್ ರಸ್ತೆಯ  ಮಣಿಪಾಲ್ ಆಸ್ಪತ್ರೆಯ  ನ್ಯೂಕ್ಲಿಯರ್‌ನ ಸಲಹೆಗಾರ ಡಾ ಆರ್‌ವಿ ಪರಮೇಶ್ವರನ್ ಹೇಳಿದ್ದಾರೆ.

ಕಿದ್ವಾಯಿ ಆಸ್ಪತ್ರೆಯಲ್ಲಿ ಪಿಇಟಿ- ಸಿಟಿ ಸ್ಕ್ಯಾನರ್ ಇಲ್ಲದಿರುವುದನ್ನು ನಿರ್ದೇಶಕ ಡಾ. ರಾಮಚಂದ್ರ ಒಪ್ಪಿಕೊಂಡಿದ್ದು, ಎಂಆರ್ ಐ, ಅಲ್ಟ್ರಾಸೌಂಡ ಮತ್ತು ಸಿಟಿ ಸ್ಕ್ಯಾನ್ ನಂತರ ಇತರ ವಿಧಾನಗಳನ್ನು ಕ್ಯಾನ್ಸರ್ ಪತ್ತೆ ಹಾಗೂ ಚಿಕಿತ್ಸೆಗೆ ಬಳಸುತ್ತಿರುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಶೀಘ್ರದಲ್ಲಿ ಪಿಇಟಿ- ಸಿಟಿ ಸ್ಕ್ಯಾನರ್ ಅಳವಡಿಕೆ ಪ್ರಕ್ರಿಯೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಸ್ತಾವನೆಗೆ ರಾಜ್ಯ ಮಟ್ಟದ ಏಕ ಗವಾಕ್ಷಿ ತೆರವು ಸಮಿತಿ ಅನುಮತಿ ನೀಡಿದ್ದು, ಕೆಲ ದಿನಗಳಲ್ಲಿ ಪಿಇಟಿ- ಸಿಟಿ ಸ್ಕ್ಯಾನರ್ ಬರಲಿದೆ ಎಂದರು. 

ಕ್ಯಾನ್ಸರ್ ಮೂರು ಮತ್ತು ನಾಲ್ಕನೇ ಹಂತದಲ್ಲಿದ್ದಾಗ ಸುಮಾರು 30 ರಿಂದ 40 ಪ್ರತಿಶತ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಆರಂಭಿಕ ಪತ್ತೆ ಕ್ಯಾನ್ಸರ್ ಚಿಕಿತ್ಸೆಗೆ ಪ್ರಮುಖವಾಗಿದೆ; 95 ರಷ್ಟು ರೋಗಿಗಳು ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಮಾಡಿದರೆ ಗುಣಮುಖರಾಗುತ್ತಾರೆ ಎಂದು ಡಾ ರಾಮಚಂದ್ರ ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಪಿಇಟಿ- ಸಿಟಿ ಸ್ಕ್ಯಾನ್ ಗೆ 25,000 ದಿಂದ 40,000 ರೂ. ಇರುತ್ತದೆ. ಅದನ್ನು ಭರಿಸಲಾಗದ ಅನೇಕ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಇದಕ್ಕೆ 7 ರಿಂದ 8 ಕೋಟಿ ರೂ. ವೆಚ್ಚವಾಗುತ್ತದೆ. ಪ್ರತಿದಿನ ಸುಮಾರು 50 ಕ್ಯಾನ್ಸರ್ ರೋಗಿಗಳು ಆಸ್ಪತ್ರೆ ಬರುತ್ತಿದ್ದಾರೆ. ನ್ಯೂಕ್ಲಿಯರ್ ಮೆಡಿಕಲ್ ಸೆಕ್ಷನ್ ನಲ್ಲಿ ಕೇವಲ ಒಬ್ಬ ಡಾಕ್ಟರ್ ಇರುವುದರೊಂದಿಗೆ ಹತಾಶ ರೋಗಿಗಳಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಸವಾಲುನಿಂದ ಕೂಡಿರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com