ಬೆಂಗಳೂರು: ಕೊತ್ತನೂರು ಕೆರೆಯಲ್ಲಿ ಗಂಗಾರತಿ

ಬೆಂಗಳೂರಿನ ಕೊತ್ತನೂರು ಕೆರೆಯಲ್ಲಿ ಕಾರ್ತಿಕ ಮಾಸದ ಕಡೆಯ ಶುಕ್ರವಾರ ಕೊತ್ತನೂರು ಕೆರೆ ಕ್ಷೇಮಾಭಿವೃದ್ಧಿ ಸಮಿತಿ ಗಂಗಾರತಿ ಆಯೋಜಿಸಿತ್ತು.
ಮಹಿಳೆಯರು ಗಂಗಾರತಿ ಮಾಡಿದ ದೃಶ್ಯ
ಮಹಿಳೆಯರು ಗಂಗಾರತಿ ಮಾಡಿದ ದೃಶ್ಯ

ಬೆಂಗಳೂರು: ನಗರದ ಕೊತ್ತನೂರು ಕೆರೆಯಲ್ಲಿ ಕಾರ್ತಿಕ ಮಾಸದ ಕಡೆಯ ಶುಕ್ರವಾರ ಕೊತ್ತನೂರು ಕೆರೆ ಕ್ಷೇಮಾಭಿವೃದ್ಧಿ ಸಮಿತಿ ಗಂಗಾರತಿ ಆಯೋಜಿಸಿತ್ತು.

ಬಡಾವಣೆಯ ಜೀವಸೆಲೆಯಾದ ಕೆರೆಗೆ ಆರತಿ ಬೆಳಗುವ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನ ಸಂಭ್ರಮದಿಂದ ಪಾಲ್ಗೊಂಡಿದ್ದರು.

ಸುಮಾರು 18 ಎಕರೆ ವಿಸ್ತೀರ್ಣದ ಈ ಕೆರೆಯನ್ನು ಬಿಬಿಎಂಪಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಈಚೆಗೆ ಅಭಿವೃದ್ಧಿಪಡಿಸಿದ್ದು, ಕಳೆದ ಕೆಲವು ದಿನಗಳಿಂದ ಬಿದ್ದ ಮಳೆಯಿಂದಾಗಿ ಈಗ ತುಂಬಿದೆ. ಈ ಸಂದರ್ಭದಲ್ಲಿ ಪ್ರಕೃತಿಯನ್ನು ಆರಾಧಿಸುವ ಹಾಗೂ ಜಲ ಸಂರಕ್ಷಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಗಂಗಾರತಿಯನ್ನು ಆಯೋಜಿಸಲಾಗಿತ್ತು.

<strong>ಕೆರೆಯ ಸುತ್ತ ಹಣತೆಗಳನ್ನು ಬೆಳಗುವ ಮೂಲಕ ಗಂಗಾರತಿ</strong>
ಕೆರೆಯ ಸುತ್ತ ಹಣತೆಗಳನ್ನು ಬೆಳಗುವ ಮೂಲಕ ಗಂಗಾರತಿ

ಕೆರೆಯ ಸುತ್ತ ನೂರಾರು ಹಣತೆಗಳನ್ನು ಬೆಳಗುವ ಮೂಲಕ ಬಡಾವಣೆಯ ಮಕ್ಕಳು ಗಂಗಾರತಿಗೆ ಮೆರಗು ತಂದರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com