ನಿಗದಿತ ಸಮಯಕ್ಕೆ ಬಿಲ್'ಗಳ ಪಾವತಿಸಿ: ಎಸ್ಕಾಂಗಳಿಗೆ ಹೈಕೋರ್ಟ್ ಸೂಚನೆ

ವಿದ್ಯುತ್ ಉತ್ಪಾದಕರಿಗೆ ಬಾಕಿ ಇರುವ ಬಿಲ್ ಗಳನ್ನು ವಿಳಂಬವಿಲ್ಲದೆ ಪಾವತಿಸುವುದು ಸೇರಿದಂತೆ ವಿದ್ಯುತ್ ಖರೀದಿ ಒಪ್ಪಂದಗಳ (ಪಿಪಿಎ) ಅಡಿಯಲ್ಲಿ ತಮ್ಮ ಬಾಧ್ಯತೆ ಮತ್ತು ಹೊಣೆಗಾರಿಕೆಗಳನ್ನು ಗೌರವಿಸುವಂತೆ ಎಲ್ಲಾ ಎಸ್ಕಾಮ್‌ಗಳು (ವಿದ್ಯುತ್ ಸರಬರಾಜು ಕಂಪನಿಗಳು) ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿದ್ಯುತ್ ಉತ್ಪಾದಕರಿಗೆ ಬಾಕಿ ಇರುವ ಬಿಲ್ ಗಳನ್ನು ವಿಳಂಬವಿಲ್ಲದೆ ಪಾವತಿಸುವುದು ಸೇರಿದಂತೆ ವಿದ್ಯುತ್ ಖರೀದಿ ಒಪ್ಪಂದಗಳ (ಪಿಪಿಎ) ಅಡಿಯಲ್ಲಿ ತಮ್ಮ ಬಾಧ್ಯತೆ ಮತ್ತು ಹೊಣೆಗಾರಿಕೆಗಳನ್ನು ಗೌರವಿಸುವಂತೆ ಎಲ್ಲಾ ಎಸ್ಕಾಮ್‌ಗಳು (ವಿದ್ಯುತ್ ಸರಬರಾಜು ಕಂಪನಿಗಳು) ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.

ಇಂಧನ ಉತ್ಪಾದಿಸುವ ಹಲವು ಕಂಪೆನಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.

ಎಸ್ಕಾಂಗಳ ಪರ ವಾದಿಸಿದ ವಕೀಲರು, ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು, ರಾಜ್ಯ ಸರಕಾರ ಹಾಗೂ ರೈತರಿಗೆ ನೀಡಿರುವ ವಿದ್ಯುತ್ ಸಬ್ಸಿಡಿ ಬಾಕಿ ಇನ್ನೂ ಎಸ್ಕಾಂಗಳಿಗೆ ಬಂದಿಲ್ಲ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ, ವಿದ್ಯುತ್ ಉತ್ಪಾದಕರಿಗೆ ಬಾಕಿ ಬಿಲ್ ಪಾವತಿಸಲು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com