ಸ್ತ್ರೀ ಸ್ವಾತಂತ್ರ್ಯದಿಂದ ಸಮಾಜ ಹಾಗೂ ಕುಟುಂಬ ವ್ಯವಸ್ಥೆಗೆ ಧಕ್ಕೆ: ಸಿಬಿಎಸ್ಇ ಪರೀಕ್ಷೆಯಲ್ಲಿ ವಿವಾದಾತ್ಮಕ ಪ್ರಶ್ನೆಗೆ ಕೊಕ್: ವಿದ್ಯಾರ್ಥಿಗಳಿಗೆ ಪೂರ್ಣಾಂಕ

ಇನ್ನುಮುಂದೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಬಲಪಡಿಸುವುದಾಗಿ ಮಂಡಳಿ ಭರವಸೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಡಿಸೆಂಬರ್ 11ರಂದು ನಡೆದಿದ್ದ ಸಿಬಿಎಸ್ಇ 10ನೇ ತರಗತಿ ಇಂಗ್ಲಿಷ್ ಭಾಷಾ ಪರೀಕ್ಷೆಯಲ್ಲಿ ನೀಡಲಾಗಿದ್ದ ಪ್ರಶ್ನೆಯೊಂದು ವಿವಾದಕ್ಕೆ ಕಾರಣವಾಗಿತ್ತು. ಅದರ ವಿರುದ್ಧ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದಾಗಿ ಆ ಪ್ರಶ್ನೆಯನ್ನು ಕೈ ಬಿಡುವುದಾಗಿ ಮಂಡಳಿ ಪ್ರಕಟಣೆ ನೀಡಿದೆ. 

ಆ ಪ್ರಶ್ನೆಯ ಪೂರ್ಣಾಂಕವನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ಮಂಡಳಿ ತಿಳಿಸಿದೆ. ಇನ್ನುಮುಂದೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಬಲಪಡಿಸುವುದಾಗಿ ಮಂಡಳಿ ಭರವಸೆ ನೀಡಿದೆ. ಅದಕ್ಕಾಗಿ ಪರಿಣತರ ಸಮಿತಿಯನ್ನೂ ರಚಿಸುವುದಾಗಿ ಹೇಳಿದೆ.

ಮಕ್ಕಳ ವಿಶ್ವಾಸವನ್ನು ಪಡೆಯಲು ಪತ್ನಿ ತನ್ನ ಪತಿಗೆ ಶರಣಾಗಬೇಕು ಎನ್ನುವ ಅರ್ಥದ ಸಾಲುಗಳು ಆ ಪ್ರಶ್ನೆಯಲ್ಲಿದ್ದವು. ಅಲ್ಲದೆ ಸ್ತ್ರೀ ಸ್ವಾತಂತ್ರ್ಯವೇ ಸಾಮಾಜಿಕ ಹಾಗೂ ಕೌಟುಂಬಿಕ ಸಮಸ್ಯೆಯ ಮೂಲ ಎಂದೂ ಹೇಳಲಾಗಿತ್ತು. ಇದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com