ಮಂಡ್ಯ ಜಿಲ್ಲೆಯ ಬೀರವಳ್ಳಿ ಬಳಿ ಅಪಘಾತ: ಇಬ್ಬರ ಸಾವು, ಐವರಿಗೆ ಗಾಯ; ವಿಜಯಪುರ ಕಾರು ಅಪಘಾತದಲ್ಲಿ ಇಬ್ಬರು ಸಾವು
ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೀರವಳ್ಳಿ ಬಳಿ ಟ್ರ್ಯಾಕ್ಟರ್ ಮಗುಚಿ ಇಬ್ಬರು ಮೃತಪಟ್ಟು ಐವರಿಗೆ ಗಾಯಗೊಂಡಿರುವ ಘಟನೆ ಇಂದು ಬುಧವಾರ ನಸುಕಿನ ಜಾವ ನಡೆದಿದೆ.
Published: 22nd December 2021 09:11 AM | Last Updated: 22nd December 2021 01:44 PM | A+A A-

ಸಾಂದರ್ಭಿಕ ಚಿತ್ರ
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೀರವಳ್ಳಿ ಬಳಿ ಟ್ರ್ಯಾಕ್ಟರ್ ಮಗುಚಿ ಇಬ್ಬರು ಮೃತಪಟ್ಟು ಐವರಿಗೆ ಗಾಯಗೊಂಡಿರುವ ಘಟನೆ ಇಂದು ಬುಧವಾರ ನಸುಕಿನ ಜಾವ ನಡೆದಿದೆ.
ಶ್ರೀ ಚಂದಗೋಳಮ್ಮ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ವಾಪಸ್ಸು ತೆರಳುವಾಗ ಅಪಘಾತ ಸಂಭವಿಸಿದೆ. ಮೃತರನ್ನು ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ತಂದ್ರೆ ಕೊಪ್ಪಲು ಗ್ರಾಮದ ರಮೇಶ್(44) ಹಾಗೂ ಧ್ರುವ(11) ಎಂದು ಗುರುತಿಸಲಾಗಿದೆ.
ಕೆ.ಆರ್. ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪಘಾತದಲ್ಲಿ ಐವರಿಗೆ ಗಾಯವಾಗಿದ್ದು ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಿಜಯಪುರದ ಗಂಗೂರು ಗ್ರಾಮದಲ್ಲಿ ಅಪಘಾತ: ಇನ್ನೊಂದೆಡೆ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗಂಗೂರು ಗ್ರಾಮದ ಬಳಿ ಮತ್ತೊಂದು ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿ ಕಾರು ಮಗುಚಿಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಲೀಂ ಟಕ್ಕಳಕಿ(20), ಸೈಫನ್ ತಾಂಬೋಳೆ(17) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೃತ ಯುವಕರು ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಿಂದ ದೇವರಹಿಪ್ಪರಗಿ ಪಟ್ಟಣಕ್ಕೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದ್ದು, ಮೃತರು ಹಾಗೂ ಗಾಯಾಳು ದೇವರಹಿಪ್ಪರಗಿ ಪಟ್ಟಣದ ನಿವಾಸಿಗಳಾಗಿದ್ದಾರೆ.