ಲಾಟರಿ ಮೂಲಕ 16 ಕೋಟಿಯ ಜೀವೌಷಧಿ: ಮಾರಣಾಂತಿಕ ಕಾಯಿಲೆಯಿಂದ ಮರುಜೀವ ಪಡೆದ ಭಟ್ಕಳದ ಮಗು!

ಹುಟ್ಟಿನಿಂದಲೇ ಸ್ನಾಯು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಉತ್ತರ ಕನ್ನಡದ ಭಟ್ಕಳದ ಮೊಹಮ್ಮದ್ ಬೆಸಿಲ್ ಮತ್ತು ಖಾದಿಜಾ ದಂಪತಿಯ ಪುತ್ರಿ 14 ತಿಂಗಳ ಫಾತಿಮಾ ಜೀನ್ ಚಿಕಿತ್ಸೆಗೆ ಬಳಿಕ ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ.
ಫಾತಿಮಾ
ಫಾತಿಮಾ

ಬೆಂಗಳೂರು: ಹುಟ್ಟಿನಿಂದಲೇ ಸ್ನಾಯು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಉತ್ತರ ಕನ್ನಡದ ಭಟ್ಕಳದ ಮೊಹಮ್ಮದ್ ಬೆಸಿಲ್ ಮತ್ತು ಖಾದಿಜಾ ದಂಪತಿಯ ಪುತ್ರಿ 14 ತಿಂಗಳ ಫಾತಿಮಾ ಜೀನ್ ಚಿಕಿತ್ಸೆಗೆ ಬಳಿಕ ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ. 

ಬಹು ರಾಷ್ಟ್ರೀಯ ಔಷದ ಕಂಪನಿ ನೋವಾರ್ಟಿಸ್ ನ ಲಾಟರಿಯಲ್ಲಿ ಫಾತಿಮಾ ಆಯ್ಕೆಯಾಗಿದ್ದಳು. ಹೀಗಾಗಿ ಕಳೆದ ತಿಂಗಳ ಕೊನೆಯಲ್ಲಿ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಫಾತಿಮಾಗೆ ಝೋಲ್ಗೆನ್ಶಾ ಎಂಬ ವಿಶೇಷ ಜೀನ್ ಚಿಕಿತ್ಸೆ ನಡೆಸಲಾಗಿತ್ತು.

ಚಿಕಿತ್ಸೆಯ ನಂತರ ಫಾತಿಮಾ ಚೇತರಿಸಿಕೊಳ್ಳುತ್ತಿದ್ದಾಳೆ. ಸ್ವಾಧೀನ ಕಳೆದುಕೊಂಡಿದ್ದ ಕಾಲಿಗೆ ಈಗ ಜೀವ ಬಂದಿದೆ. ಸಾಮಾನ್ಯ ಮಗುವಿನಂತೆ ಆಗಲು ಇನ್ನೂ ಕೆಲ ಸಮಯ ತೆಗೆದುಕೊಳ್ಳುತ್ತೆದ ಎಂದು ಆಸ್ಪತ್ರೆಯ ನಿರ್ದೇಶಕ(ಸಿಇಒ) ನವೀನ್ ಥಾಮಸ್ ಹೇಳಿದ್ದಾರೆ. 

ಮೆದುಳಿನಿಂದ ಸ್ನಾಯುಗಳಿಗೆ ವಿದ್ಯುತ್ ಸಂಕೇತಗಳನ್ನು ರವಾನಿಸುವ ನರಕೋಶಗಳ ನಷ್ಟದಿಂದ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ  ಸ್ಪೈನಲ್ ಮಸ್ಕುಲರ್ ಅಟ್ರೋಫಿ ಅಥವಾ ಎಸ್ಎಂಎ ಎಂದು ಗುರುತಿಯಲಾಗುತ್ತದೆ.

ಆರೋಗ್ಯಕರ ತಂದೆ-ತಾಯಿಯ ಜೀನ್ ನಿಂದ ಈ ಸಿಗ್ನಲಿಂಗ್ ಗೆ ಪ್ರೋಟೀನ್ ಸಿಗುತ್ತದೆ. ತಂದೆ-ತಾಯಿಯ ಜೀನ್ ಗಳು ದೋಷಪೂರಿತವಾಗಿದ್ದರೆ ಮತ್ತು ಚಿಕಿತ್ಸೆಯಿಲ್ಲದೆ ಇದ್ದರೆ ಮಗು ಈ ಅಶ್ವಸ್ಥತೆಗೆ ಒಳಗಾಗುತ್ತದೆ. ಹೀಗಾಗಿ ಹೆಚ್ಚು ಜಾಗರೂಕತೆಯಿಂದ ಇರಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com