ಕೃಷಿ ಚಟುವಟಿಕೆಗಳಿಗೆ ಜಾನುವಾರು ಸಾಗಿಸುವವರ ಮೇಲೆ ಕ್ರಮವಿಲ್ಲ; ಹೈಕೋರ್ಟ್'ಗೆ ಸರ್ಕಾರ

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಸುಗ್ರೀವಾಜ್ಞೆ-2020ರ ನಿಮಯ ಅಂತಿಮಗೊಳಿಸಿ ಜಾರಿಗೆ ತರುವ ತನಕ ರಾಜ್ಯದಲ್ಲಿ ಜಾನುವಾರುಗಳನ್ನು ಸಾಗಣೆ ಮಾಡುವವರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸುವುದಿಲ್ಲ ಎಂದು ಹೈಕೋರ್ಟ್'ಗೆ ಸರ್ಕಾರ ಭರವಸೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಸುಗ್ರೀವಾಜ್ಞೆ-2020ರ ನಿಮಯ ಅಂತಿಮಗೊಳಿಸಿ ಜಾರಿಗೆ ತರುವ ತನಕ ರಾಜ್ಯದಲ್ಲಿ ಜಾನುವಾರುಗಳನ್ನು ಸಾಗಣೆ ಮಾಡುವವರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸುವುದಿಲ್ಲ ಎಂದು ಹೈಕೋರ್ಟ್'ಗೆ ಸರ್ಕಾರ ಭರವಸೆ ನೀಡಿದೆ. 

ಸುಗ್ರೀವಾಜ್ಞೆ ರದ್ದುಪಡಿಸಲು ಕೋರಿ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರಿಫ್ ಜಮೀಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ಎಡ್ವೊಕೇಟ್ ಜನರಲ್ ಈ ಭರವಸೆ ನೀಡಿದರು. 

ಈ ಸಮಸ್ಯೆ ಪರಿಹರಿಸುವ ಕುರಿತು ಸ್ಪಷ್ಟನೆ ನೀಡಬೇಕೆಂದು ಹೈಕೋರ್ಟ್ ಸರ್ಕಾರಕ್ಕೆ ಜನ.18 ರಂದು ಸೂಚನೆ ನೀಡಿತ್ತು. 

ವಿಚಾರಣೆ ವೇಳೆ ಸೆಕ್ಷನ್ 5ರ ಪ್ರಕಾರ ಜಾನುವಾರುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವುದಕ್ಕೆ ನಿರ್ಬಂಧಗಳಿವೆ. ಇದು ರೈತರು ತಮ್ಮ ಜಾನುವಾರುಗಳನ್ನು ಕೃಷಿ ಕೆಲಸಗಳಿಗೆ, ಹೈನುಗಾರಿಕೆಗೆ ಸಾಗಿಸುವುದಕ್ಕೂ ಅಡ್ಡಿಯಾಗಿದೆ ಎಂದಿತು. 

ಇದಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರು, ಕಾಯ್ದೆಗೆ ನಿಯಮಗಳನ್ನು ರೂಪಿಸುವವರೆಗೆ ಸೆಕ್ಷನ್ 5ರ ಅಡಿಯಲ್ಲಿ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com