ದಲಿತನೆಂಬ ಕಾರಣಕ್ಕೆ ಪ್ರವೇಶ ನಿರಾಕರಿಸಿದ್ದ ಕುಗ್ರಾಮ: ಈಗ ಅದೇ ನಾಯಕನಿಂದ ನೆರವಿನ ನಿರೀಕ್ಷೆಯಲ್ಲಿ 'ಕಾಡುಗೊಲ್ಲ ಸಮುದಾಯ'!

2 ವರ್ಷಗಳ ಹಿಂದೆ ದಲಿತನೆಂಬ ಕಾರಣಕ್ಕೆ ಗ್ರಾಮ ಪ್ರವೇಶಿಸಲು ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಅವರಿಗೆ ನಿರಾಕರಿಸಿದ್ದ ಕಾಡುಗೊಲ್ಲ ಸಮುದಾಯ ಜನರು ಇದೀಗ ಅದೇ ನಾಯಕನಿಂದಲೇ ನೆರವು ನಿರೀಕ್ಷೆ ಮಾಡುವಂತಾಗಿದೆ. 
ಕೇಂದ್ರ ಸಚಿವ ನಾರಾಯಣಸ್ವಾಮಿ
ಕೇಂದ್ರ ಸಚಿವ ನಾರಾಯಣಸ್ವಾಮಿ

ತುಮಕೂರು: 2 ವರ್ಷಗಳ ಹಿಂದೆ ದಲಿತನೆಂಬ ಕಾರಣಕ್ಕೆ ಗ್ರಾಮ ಪ್ರವೇಶಿಸಲು ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಅವರಿಗೆ ನಿರಾಕರಿಸಿದ್ದ ಕಾಡುಗೊಲ್ಲ ಸಮುದಾಯ ಜನರು ಇದೀಗ ಅದೇ ನಾಯಕನಿಂದಲೇ ನೆರವು ನಿರೀಕ್ಷೆ ಮಾಡುವಂತಾಗಿದೆ. 

ಎ. ನಾರಾಯಣಸ್ವಾಮಿ ಅವರಿಗೆ ಗೊಲ್ಲರ ಹಟ್ಟಿ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ನಂತರ ಸ್ವಯಂಸೇವಾ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಅಸ್ಪೃಶ್ಯತಾ ಆಚರಣೆ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದರು. ಸಮುದಾಯದ ಮುಖಂಡರ ಜೊತೆ ಮಾತುಕತೆಯನ್ನು ನಡೆಸಿ ಆಚರಣೆಯನ್ನು ಕೈಬಿಡುವಂತೆ ಮನವರಿಕೆ ಮಾಡಿದ್ದರು. 

ಬಳಿಕ ಗ್ರಾಮಸ್ಥರು ನಾರಾಯಣ ಸ್ವಾಮಿಯವರನ್ನು ಪೂರ್ಣಕುಂಬ ಕಳಸದ ಮೂಲಕ ಹಟ್ಟಿಗೆ ಬರಮಾಡಿಕೊಂಡಿದ್ದರು. ಇದೀಗ ನಾರಾಯಣಸ್ವಾಮಿಯವರು ಕೇಂದ್ರ ಸಚಿವರಾಗಿದ್ದು, ಬಹಿಷ್ಕರಿಸಿ ಅವಮಾನಿಸಿದ್ದ ಗ್ರಾಮಸ್ಥರು ಇದೀಗ ಇದೇ ನಾಯಕನಿಂದಲೇ ಅಭಿವೃದ್ಧಿ ಹಾಗೂ ನೆರವಿನ ನಿರೀಕ್ಷೆ ಮಾಡುತ್ತಿದ್ದಾರೆ. 

ಸಂಪ್ರದಾಯಗಳಿಗೆ ಕಟ್ಟಿಬಿದ್ದಿದ್ದ ಗ್ರಾಮದಲ್ಲಿ ಕೆಲವು ವಿಭಾಗದ ಜನರು ನಾರಾಯಣಸ್ವಾಮಿಯವರ ಪ್ರವೇಶಕ್ಕೆ ನಿರಾಕರಿಸಿದ್ದರು. ಆದರೀಗ ಅವರ ಮನಸ್ಥಿತಿ ಬದಲಾಗಿದೆ. ಜನರು ವಿದ್ಯಾವಂತರಾಗಿದ್ದಾರೆ. ಈರೀತಿಯ ಘಟನೆ ಮರುಕಳುಹಿಸಿವುದಿಲ್ಲ ಎಂದು ತಾಲ್ಲೂಕು ಪಂಚಾಯತ್ ಪ್ರತಿನಿಧಿ ಮತ್ತು ಸಮುದಾಯದ ಸದಸ್ಯ ಮೈಲಾರ ರೆಡ್ಡಿಯವರು ಹೇಳಿದ್ದಾರೆ. 

ಯಶವಂತ್ ಎಂಬ ಗ್ರಾಮದ ನಿವಾಸಿ ಮಾತನಾಡಿ, ಸಮುದಾಯಕ್ಕೆ ಎಸ್'ಟಿ ಮೀಸಲಾತಿ ಸಿಗುವಂತೆ ಮಾಡಲು ನಾರಾಯಣಸ್ವಾಮಿಯವರು ಸಹಾಯ ಮಾಡಬೇಕು. ಮಾನವಶಾಸ್ತ್ರೀಯ ಅಧ್ಯಯನವು ಸಮುದಾಯವನ್ನು ಬುಡಕಟ್ಟು ಜನಾಂಗವನ್ನು ಸಾಬೀತುಪಡಿಸಿದೆ. ನಮ್ಮ ಸಮಸ್ಯೆಗಳ ಬಗೆಹರಿಸಲು ನಮ್ಮೊಂದಿಗೆ ಯಾವುದೇ ರಾಜಕೀಯ ಪ್ರತಿನಿಧಿಗಳಿಲ್ಲ. ನಾರಾಯಣಸ್ವಾಮಿಯವರು ನಮಗೆ ಸಹಾಯ ಮಾಡಿದ್ದೇ ಆದರೆ, ಸಮುದಾಯದ ಮುಂದಿನ ಪೀಳಿಗೆಗೆ ಒಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿ ಸಿಕ್ಕಿದಂತಾಗುತ್ತದೆ ಎಂದು ಹೇಳಿದ್ದಾರೆ.

ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಿರುವುದು ಬಿಟ್ಟರೆ 2 ವರ್ಷಗಳ ಹಿಂದೆ ನೀಡಿದ್ದ ಯಾವುದೇ ಭರವಸೆಗಳನ್ನೂ ಈಡೇರಿಸದಿರುವುದಕ್ಕೆ ಸ್ಥಳೀಯರು ನಾರಾಯಣಸ್ವಾಮಿಯವರ ಮೇಲೆ ಬೇಸರಗೊಂಡಿದ್ದಾರೆ. 

ಸಮುದಾಯದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಗೌಡ ಅವರು ಮಾತನಾಡಿ, ಗ್ರಾಮದಲ್ಲಿ ಒಟ್ಟು 80 ಮನೆಗಳಿದ್ದು, ದತ್ತು ತೆಗೆದುಕೊಂಡು ಕುಗ್ರಾಮಕ್ಕೆ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದರು. ಆದರೆ, ಅದಾವುದೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com