ಇರಾನ್ ನ ಬಂದರಿನಲ್ಲಿ 19 ತಿಂಗಳಿನಿಂದ ಸಂಕಷ್ಟದಲ್ಲಿ ಸಿಲುಕಿರುವ ಭಟ್ಕಳದ ವ್ಯಕ್ತಿ ನೆರವಿಗಾಗಿ ಕೋರಿಕೆ
ಇರಾನ್‌ನ ಸರಕು ಸಾಗಣೆ ಹಡಗಿನಲ್ಲಿ ಸಮುದ್ರಯಾನಗಾರನಾಗಿ ಕೆಲಸ ಮಾಡುತ್ತಿರುವ ಭಟ್ಕಳ ಮೂಲದ 31 ವರ್ಷದ ವ್ಯಕ್ತಿ 19 ತಿಂಗಳಿಗೂ ಹೆಚ್ಚು ಕಾಲ ಬಂದರಿನಲ್ಲಿ ಸಿಕ್ಕಿಕೊಂಡಿದ್ದಾರೆ.
Published: 17th July 2021 01:26 PM | Last Updated: 17th July 2021 05:12 PM | A+A A-

ಯಾಸೀನ್ ಷಾ
ಹುಬ್ಬಳ್ಳಿ: ಇರಾನ್‌ನ ಸರಕು ಸಾಗಣೆ ಹಡಗಿನಲ್ಲಿ ಸಮುದ್ರಯಾನಗಾರನಾಗಿ ಕೆಲಸ ಮಾಡುತ್ತಿರುವ ಭಟ್ಕಳ ಮೂಲದ 31 ವರ್ಷದ ವ್ಯಕ್ತಿ 19 ತಿಂಗಳಿಗೂ ಹೆಚ್ಚು ಕಾಲ ಬಂದರಿನಲ್ಲಿ ಸಿಕ್ಕಿಕೊಂಡಿದ್ದಾರೆ.
ಹಡಗು ಮಾಲೀಕರ ನಡುವಿನ ವಿವಾದ ಮತ್ತು ಸಾಂಕ್ರಾಮಿಕ ಪರಿಸ್ಥಿತಿ ಭಟ್ಕಲ್ ನಿವಾಸಿ ಯಾಸೀನ್ ಷಾ ಅವರನ್ನು ಚಬಹಾರ್‌ನ ಇರಾನ್ ಬಂದರಿನ ಡಾಕಿಂಗ್ ಪ್ರದೇಶದಲ್ಲಿ ಕಠಿಣ ಜೀವನ ನಡೆಸುವಂತೆ ಮಾಡಿದೆ. ಒಂದೂವರೆ ವರ್ಷದ ಹಿಂದೆ ಇಲ್ಲಿಗೆ ಅವರನ್ನು ಕರೆತಂದ ಹಡಗು ಮಾಲೀಕರಾಗಲೀ ಅಥವಾ ಏಜೆನ್ಸಿಯಾಗಲೀ ಕಳೆದ ಆರು ತಿಂಗಳಿನಿಂದಲೂ ಸಂಪರ್ಕಕ್ಕೆ ಸಿಕ್ಕಿಲ್ಲ.
ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಇರಾನ್ ಗೆ ಬಂದ ಯಾಸಿನ್, ಬಂದರಿನಲ್ಲಿ ಸರಕು ಸಾಗಣೆ ಹಡಗಿನಲ್ಲಿ ಸಮುದ್ರ ಯಾನಗಾರನಾಗಿ ಕೆಲಸ ಆರಂಭಿಸಿದ್ದರು. ಆದರೆ, ಸಾಂಕ್ರಾಮಿಕ ಪರಿಸ್ಥಿತಿ ಸುಧಾರಿಸಿದ ನಂತರ ಇತರ ಸರಕು ಹಡಗುಗಳ ಚಲನೆ ಪುನರಾರಂಭಗೊಂಡಿದ್ದರೂ ಅವರಿಗೆ ಕೆಲಸ ನೀಡಿಲ್ಲ. ಕೈಯಲ್ಲಿ ವೀಸ್ ಇಲ್ಲ, ಒಂದು ವರ್ಷದಿಂದಲೂ ಸಂಬಳ ಪಾವತಿಸಿಲ್ಲ.
ಪದವಿ ಪಡೆದು ಇರಾನ್ ಗೆ ಬರಲು 6 ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ, ಸಮುದ್ರಯಾನಗಾರ ಕೆಲಸಕ್ಕಾಗಿ ಏಜೆನ್ಸಿಗೆ ಹಣ ಕೂಡಾ ನೀಡಿದ್ದೇನೆ. ಆದರೆ, ಇರಾನ್ ಗೆ ಬಂದ ಕೂಡಾಲೇ ಇರಾನಿ ಏಜೆನ್ಸಿ ಒಪ್ಪಂದವನ್ನು ಬದಲಾವಣೆ ಮಾಡಿದೆ. ಸಮುದ್ರಯಾನಗಾರ ಕೆಲಸಕ್ಕೆ ಭಾರತದಿಂದ ಬರುವ ಬಹುತೇಕ ಭಾರತೀಯರ ಒಪ್ಪಂದವನ್ನು ಪರ್ಷಿಯನ್ ಭಾಷೆಗೆ ಬದಲಾವಣೆ ಮಾಡಲಾಗುತ್ತಿದೆ. ಅದನ್ನು ಪ್ರಶ್ನಿಸಿದ ನಂತರ ನನ್ನ ಸಂಬಳ ಇದೀಗ 150 ಡಾಲರ್ ಆಗಿದೆ. ಹಣದ ಅಗತ್ಯವಿದೆ. ಆದರೆ, ಒಂದು ವರ್ಷದಿಂದ ಸಂಬಳ ನೀಡಿಲ್ಲ ಎಂದು ಯಾಸಿನ್ ಷಾ ಹೇಳಿದ್ದಾರೆ.
ಭಾರತ ಹಾಗೂ ವಿದೇಶದ ಅನೇಕ ಸಂಘ ಸಂಸ್ಥೆಗಳಿಗೆ ಯಾಸಿನ್ ಗೆ ನೆರವು ನೀಡಲು ಪ್ರಯತ್ನಿಸಿವೆ. ಇರಾನ್‌ನ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕವನ್ನು ಸ್ಥಾಧಿಸಲಾಯಿತು ಆದರೆ, ಈವರೆಗೂ ಯಾವುದೇ ನೆರವು ಸಿಕ್ಕಿಲ್ಲ, ಶಿಪ್ಪಿಂಗ್ ಕಂಪನಿ ಮಾಲೀಕರನ್ನು ಸಂಪರ್ಕಿಸುವಂತೆ ಅಧಿಕಾರಿಗಳು ಹೇಳಿದ್ದಾರೆ. ಕಂಪನಿಯು ಮೂವರು ಪಾಲುದಾರರನ್ನು ಹೊಂದಿದ್ದು, ಅವರಲ್ಲಿ ಒಡಕಿದೆ. ಇದರಿಂದಾಗಿ ಯಾಸೀನ್ ಸೇರಿದಂತೆ ಅನೇಕ ಮಂದಿಗೆ ವೇತನ ನೀಡಿಲ್ಲ ಎಂದು ಏಮ್ ಇಡಿಯಾ ಪೊರಂ ಸ್ಥಾಪಕ ಶಿರಾಳಿ ಶೇಕ್ ಮುಝಾಪರ್ ತಿಳಿಸಿದ್ದಾರೆ.
ಏಜೆಂಟರು ಮತ್ತು ಹಡಗು ಮಾಲೀಕರ ವಿವರಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ರಾಯಭಾರ ಕಚೇರಿಗೆಒದಗಿಸಿದ್ದೇವೆ. ಇರಾನ್ ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರಿಗೆ ವೇತನ ಪಾವತಿಯೊಂದಿಗೆ ಸ್ವದೇಶಕ್ಕೆ ಕರೆತರಲು ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಿಸುವಂತೆ ಅವರು ಒತ್ತಾಯಿಸಿದ್ದಾರೆ.