ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ದೇಶದ ಮೊದಲ 'ಕ್ಯಾನೊಪಿ ವಾಕ್' ಆರಂಭ

ಉತ್ತರ ಕನ್ನಡ ಜಿಲ್ಲೆಯ ಕುವೇಶಿ ಬಳಿಯ ಅರಣ್ಯವಲಯದಲ್ಲಿ ನಿರ್ಮಿಸಲಾಗಿದ್ದ ದೇಶದ ಮೊದಲ ಮರಗಳ ಮೇಲೆ ನಡಿಗೆಯ 'ಕ್ಯಾನೊಪಿ ವಾಕ್' ಇದೀಗ ಪ್ರವಾಸಿಗರ ಭೇಟಿಗೆ ಮುಕ್ತವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಕುವೇಶಿ ಬಳಿಯ ಅರಣ್ಯವಲಯದಲ್ಲಿ ನಿರ್ಮಿಸಲಾಗಿದ್ದ ದೇಶದ ಮೊದಲ ಮರಗಳ ಮೇಲೆ ನಡಿಗೆಯ ಕ್ಯಾನೊಪಿ ವಾಕ್ ಇದೀಗ ಪ್ರವಾಸಿಗರ ಭೇಟಿಗೆ ಮುಕ್ತವಾಗಿದೆ.

ಕ್ಯಾಸಲ್ ರಾಕ್ ವನ್ಯಜೀವಿ ವಿಭಾಗವು ಕುವೇಶಿ ಪ್ರದೇಶದ ದುಧ್‌ಸಾಗರ್ ಜಲಪಾತಗಳ ಬಳಿ ಚಾರಣವನ್ನು ಪುನರಾರಂಭಿಸಿದೆ.

ಕಾಳಿ ಹುಲಿ ಅರಣ್ಯಧಾಮದ ವ್ಯಾಪ್ತಿಯಲ್ಲಿ ಬರುವ ಕ್ಯಾನೊಪಿ ವಾಕ್ ಇದಾಗಿದ್ದು, ಇದು ಕರ್ನಾಟಕದ ಹಾಗೂ ದೇಶದ ಮೊಟ್ಟ ಮೊದಲ ಕ್ಯಾನೊಪಿ ವಾಕ್ ಪ್ರವಾಸಿ ತಾಣವಾಗಿದೆ. 

ದಾಂಡೇಲಿ ವೈಲ್ಡ್ ಲೈಫ್ ಮತ್ತು ಕ್ಯಾಸರಲ್ ರಾಕ್ ವೈಲ್ಡ್ ಲೈಫ್ ವ್ಯಾಪ್ತಿಯಲ್ಲಿ ಜಂಗಲ್ ಲಾಡ್ಸ್ಜ್ ಅಂಡ್ ರೆಸಾರ್ಟನವರು ನಡೆಸುತ್ತಿರುವ ಅರಣ್ಯಧಾಮದ ಸನಿಹ ಕುವೇಶಿ ಗ್ರಾಮವಿದೆ. ಈ ಗ್ರಾಮದ ಬಳಿಯ ದಟ್ಟ ಅರಣ್ಯ ಹಾಗೂ ಎತ್ತರದ ಮರಗಳ ಮೇಲೆ 30 ಅಡಿ ಎತ್ತರದ ಮರಗಳಿರುವ ಪ್ರದೇಶದಲ್ಲಿ ಕ್ಯಾನೊಪಿ ವಾಕ್‍ ನಿರ್ಮಾಣ ಮಾಡಲಾಗಿದೆ. ಒಂದೇ ಎತ್ತರದ ಮರಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಮೇಲೆಯೇ 240 ಮೀಟರ್ ಉದ್ದದ ಕ್ಯಾನೊಪಿ ರೂಪಿಸಲಾಗಿದೆ. 

4 ವರ್ಷಗಳ ಹಿಂದೆಯೇ ಈ ಕ್ಯಾನೊಪಿ ವಾಕ್'ನ್ನು ಉದ್ಘಾಟನೆ ಮಾಡಲಾಗಿತ್ತು. ಆದರೆ, ಪರಿಸರವಾದಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅದಲ್ಲದೆ, ಕ್ಯಾನೊಪಿ ವಾಕ್‌'ಗೆ ತೆರಳಲು ರಸ್ತೆಗಳು ಇಲ್ಲದಿರುವುದೂ ಇದಕ್ಕೆ ಕಾರಣವಾಗಿತ್ತು. ಇಲ್ಲಿನ ಗ್ರಾಮಸ್ಥರು ರಸ್ತೆ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.

ಹಲವು ವರ್ಷಗಳ ಹಿಂದೆಯೇ ಕ್ಯಾನೊಪಿ ವಾಕ್ ನಿರ್ಮಾಣ ಮಾಡಿದ್ದರೂ, ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗಿರಲಿಲ್ಲ. ಈ ಬಾರಿ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗಿದೆ. ಸ್ಥಳದಲ್ಲಿ ವಾಹನ ವ್ಯವಸ್ತೆಗಳನ್ನು ಮಾಡಲಾಗಿದ್ದು, ಈ ವಾಹನಗಳು ಕುವೇಶಿ ಅರಣ್ಯ ಪ್ರದೇಶದವರೆಗೆ ಪ್ರವಾಸಿಗರನ್ನು ಕರೆದೊಯ್ಯುತ್ತವೆ. ನಂತರ ಅಲ್ಲಿಂದ ಕಾಲ್ನಡಿಗೆ ಆರಂಭವಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. 

ಕ್ಯಾನೊಪಿ ವಾಕ್ ಜೊತೆಗೆ ಗಣೇಶಗುಡಿಯಲ್ಲಿ ವಾಟರ್ ಸ್ಪೋರ್ಟ್ಸ್ ಕೂಡ ಪುನರಾರಂಭಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com