ಕೊಡಗು ಜಿಲ್ಲೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಕೋವಿಡ್-19 ಲಸಿಕೆ ಹಾಕುವಲ್ಲಿ ಶೇ.137 ರಷ್ಟು ಸಾಧನೆ

ಕೋವಿಡ್-19 ಲಸಿಕೆಯ ತೀವ್ರ ಕೊರತೆಯ ನಡುವೆಯೂ ಕೊಡುಗು ಜಿಲ್ಲೆಯಲ್ಲಿ 18 ವರ್ಷಕ್ಕೂ ಮೇಲ್ಟಟ್ಟ ಕಾಲೇಜ್ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ಹಾಕುವಲ್ಲಿ ಶೇ.137 ರಷ್ಟು ಗುರಿ ಸಾಧಿಸಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಡಿಕೇರಿ: ಕೋವಿಡ್-19 ಲಸಿಕೆಯ ತೀವ್ರ ಕೊರತೆಯ ನಡುವೆಯೂ ಕೊಡುಗು ಜಿಲ್ಲೆಯಲ್ಲಿ 18 ವರ್ಷಕ್ಕೂ ಮೇಲ್ಟಟ್ಟ ಕಾಲೇಜ್ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ಹಾಕುವಲ್ಲಿ ಶೇ.137 ರಷ್ಟು ಗುರಿ ಸಾಧಿಸಲಾಗಿದೆ. 

ಜಿಲ್ಲೆಯಾದ್ಯಂತ ನಡೆಸಿದ ವಿಶೇಷ ಲಸಿಕಾ ಅಭಿಯಾನದಲ್ಲಿ 14,772 ವಿದ್ಯಾರ್ಥಿಗಳು, 649 ಬೋಧಕ ಮತ್ತು 394 ಬೋಧಕೇತರ ಸಿಬ್ಬಂದಿ ಸೇರಿದಂತೆ ಒಟ್ಟಾರೇ 15,815 ನಿವಾಸಿಗಳಿಗೆ ಲಸಿಕೆ ಹಾಕಲಾಗಿದೆ. ಜುಲೈ 27 ರೊಳಗೆ ಆದ್ಯತೆ ಮೇರೆಗೆ 11,483 ಕಾಲೇಜ್ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ಹಾಕುವಂತೆ ರಾಜ್ಯ ಕಾಲೇಜ್ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಈ ಹಿಂದೆ ಜಿಲ್ಲಾ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿತ್ತು.

ಶಿಕ್ಷಣ ಇಲಾಖೆಯು ನಿಗದಿಪಡಿಸಿದ ನಿಗದಿತ ಗುರಿಯನ್ನು ಜಿಲ್ಲೆಯಲ್ಲಿ ದಾಟಿದ್ದರೂ ಸಹ ಡಿಗ್ರಿ ಕಾಲೇಜ್ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ವಿಶೇಷ ಅಭಿಯಾನವನ್ನು  ಆರೋಗ್ಯ ಕೇಂದ್ರಗಳು ಮತ್ತು ಕಾಲೇಜ್ ಗಳಲ್ಲಿ ಯಶಸ್ವಿಯಾಗಿ ಆಯೋಜಿಸುತ್ತಿವೆ. ಅನೇಕ ಸ್ಥಳೀಯ ವಿದ್ಯಾರ್ಥಿಗಳು ಜಿಲ್ಲೆಯ ಹೊರಗಿನ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಆದ್ದರಿಂದ,  ನಿಗದಿತ ಗುರಿಯನ್ನು ದಾಟಿ 14,000 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದ್ದೇವೆ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಗೊತ್ತುಪಡಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊರತುಪಡಿಸಿದಂತೆ ಸುಮಾರು 33 ಡಿಗ್ರಿ ಕಾಲೇಜ್ ಗಳಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಸಲಾಗಿದೆ. ನಾವು ಕಾಲೇಜುಗಳಿಂದ ವರದಿಗಳನ್ನು ಸಂಗ್ರಹಿಸಿದ್ದು, ಅದಕ್ಕೆ ಅನುಗುಣವಾಗಿ ವಿಶೇಷ ಅಭಿಯಾನ ಆಯೋಜಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಲಸಿಕೆಯ ತೀವ್ರ ಕೊರತೆಯ ನಡುವೆಯೂ ಜಿಲ್ಲಾಡಳಿತ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಲಸಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com