ನೀರಿನ ಸಂರಕ್ಷಣೆ ಕುರಿತ ಕಾರ್ಯಾಗಾರ, ಸಂಶೋಧನೆ ನಡೆಸಿದ್ದ ಬೆಂಗಳೂರು ವಿದ್ಯಾರ್ಥಿನಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ!

ನೀರಿನ ಸಂರಕ್ಷಣೆ ಕುರಿತ ಕಾರ್ಯಾಗಾರ, ಸಂಶೋಧನೆ ಸೇರಿ ಹತ್ತಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪರಿಸರವಾಗಿಯಾಗಿ ಗುರ್ತಿಸಿಕೊಂಡಿರುವ ನಗರದ ವಿದ್ಯಾರ್ಥಿನಿಯೊಬ್ಬರು ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 
ಗರ್ವಿತಾ ಗುಲ್ಹಾಟಿ
ಗರ್ವಿತಾ ಗುಲ್ಹಾಟಿ

ಬೆಂಗಳೂರು: ನೀರಿನ ಸಂರಕ್ಷಣೆ ಕುರಿತ ಕಾರ್ಯಾಗಾರ, ಸಂಶೋಧನೆ ಸೇರಿ ಹತ್ತಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪರಿಸರವಾಗಿಯಾಗಿ ಗುರ್ತಿಸಿಕೊಂಡಿರುವ ನಗರದ ವಿದ್ಯಾರ್ಥಿನಿಯೊಬ್ಬರು ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 

ನಗರದ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಎಂ.ಎಸ್.ಗರ್ವಿತಾ ಗುಲ್ಹಾಟಿ (21) ಸಾಮಾಜಿಕ ಉದ್ಯಮಶೀಲತೆಗಾಗಿ ಫೋರ್ಬ್ಸ್ 30 ವರ್ಷದೊಳಗಿನ ಉದ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 

2017ರಿಂದ 2021ರ ಬ್ಯಾಚ್ ನಲ್ಲಿ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿನಿಯಾದ 21 ವರ್ಷದ ಗರ್ವಿತಾ, ನೀರಿನ ಸಂರಕ್ಷಣೆ, ಸಂಶೋಧನ್ ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪರಿಸರವಾದಿ ಎಂದು ಗುರ್ತಿಸಿಕೊಂಡಿದ್ದಾರೆ. ಇದೀಗ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಪಿಇಎಸ್ ವಿಶ್ವವಿದ್ಯಾಲಯಕ್ಕೆ ಮತ್ತೊಂದು ಹೆಮ್ಮೆಯ ಗರಿಯನ್ನು ತಂದುಕೊಟ್ಟಿದೆ.

ಎಂ.ಎಸ್.ಗರ್ವಿತಾ ಗುಲ್ಹಾಟಿ 
ಎಂ.ಎಸ್.ಗರ್ವಿತಾ ಗುಲ್ಹಾಟಿ 

ಭಾರತದಲ್ಲಿ ಲಕ್ಷಾಂತರ ಲೀಟರ್ ನೀರು ಪ್ರತಿವರ್ಷ ವ್ಯರ್ಥವಾಗುತ್ತಿದೆ ಎಂಬ ವಿಚಾರ ತಿಳಿದ ಗರ್ವಿತಾ ಅವರು, ಯುವಕರನ್ನೊಳಗೊಂಡ ಸಂಘಟನೆಯನ್ನು ಸ್ಥಾಪಿಸಿ ನೀರಿನ ಸಂರಕ್ಷಣೆ ಕುರಿತು ಕಾರ್ಯಾಗಾರಗಳನ್ನು ನಡೆಸುತ್ತಿದ್ದರು. ಈ ಮೂಲಕ ನೀರಿನ ಸಂರಕ್ಷಣೆ ಕುರಿತು ಚಳುವಳಿಯನ್ನೇ ಆರಂಭಿಸಿದ್ದರು. 2015ರಲ್ಲಿ ಆರಂಭವಾದ ಇವರ ಅಭಿಯಾನ ಈ ವರೆಗೂ 10 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿದೆ. 

ರೆಸ್ಟೋರೆಂಟ್ ಗಳಿಗೆ ಬರುವ ಜನರು ಗ್ಲಾಸ್ ಗಳಲ್ಲಿ ನೀರನ್ನು ಕುಡಿಯದೆ ಬಿಡುವುದರಿಂದ ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗುತ್ತಿದೆ ಎಂಬ ಮಾಹಿತಿ ಅರಿತ ಗರ್ವಿತಾ ಅವರು ರೆಸ್ಟೋರೆಂಟ್ ಗಳಿಗೆ ತೆರಳಿ ಗ್ರಾಹಕರು ಕೇಳದ ಹೊರತು ಗ್ಲಾಸ್ ಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ನೀಡದಂತೆ ಮನವಿ ಮಾಡಿಕೊಂಡರು. 15 ವರ್ಷದಲ್ಲಿಯೇ ಈ ಅಭಿಯಾನವನ್ನು ಗರ್ವಿತಾ ಅರಂಭಿಸಿದ್ದರು. ಇದಕ್ಕೆ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್ಆರ್'ಎಐ) ಕೂಡ ಬೆಂಬಲ ನೀಡಿತ್ತು. 

ಏಷ್ಯಾ-ಪೆಸಿಫಿಕ್ 2021 ರ ಸಾಮಾಜಿಕ ಉದ್ಯಮಿಗಳ ಫೋರ್ಬ್ಸ್‌ ಅಂಡರ್ 30 ಪಟ್ಟಿಯಲ್ಲಿ ನನ್ನ ಹೆಸರು ಬಂದಿರುವುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಈ ಪ್ರಯಾಣವು ನನಗೆ ಕಲಿಸಿದ ಪಾಠ ಮತ್ತು ನನಗೆ ಬೆಂಬಲ ನೀಡಿದ ಎಲ್ಲರಿಗೂ ತುಂಬಾ ಕೃತಜ್ಞಳಾಗಿದ್ದೇನೆಂದು ಗರ್ವಿತಾ ಹೇಳಿದ್ದಾರೆ. 

ಗರ್ವಿತಾ ಅವರ ಈ ಸಮಾಜ ಕಾರ್ಯ ಕುರಿತು ಸಾನ್ ಮೆಂಡಿಸ್ ಫೌಂಡೇಶನ್ ಕೂಡ ಈ ಹಿಂದೆ ಪ್ರಚಾರ ಮಾಡಿತ್ತು. ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಬಂದಿರುವುದಷ್ಟೇ ಅಲ್ಲದೆ, ಕಳೆದ ವರ್ಷ ವೇಲ್ಸ್ ರಾಜಕುಮಾರಿಯ ಗೌರವಾರ್ಥವಾಗಿ ಪ್ರತಿಷ್ಠಿತ ಡಯಾನಾ ಪ್ರಶಸ್ತಿಯನ್ನು ಕೂಡ ಗರ್ವಿತಾ ಪಡೆದುಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com