ಕನ್ನಡ ಧ್ವಜ, ಲಾಂಛನವಿರುವ ಬಿಕಿನಿ ಮಾರಾಟ: ಗೂಗಲ್ ಬಳಿಕ ಅಮೆಜಾನ್ ನಿಂದಲೂ ಕನ್ನಡಿಗರಿಗೆ ಅವಮಾನ

ಭಾರತದ ಕೊಳಕು ಭಾಷೆ ಕನ್ನಡ ಎಂದು ತೋರಿಸುವ ವೆಬ್'ಪೇಜ್ ಚೋರಿಸಿ ಗೂಗಲ್ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಮತ್ತೊಂದು ವಿದೇಶಿ ಕಂಪನಿ ಅಮೆಜಾನ್, ಕನ್ನಡಿಗರ ಗೌರವದ ಸಂಕೇತವಾದ ಕನ್ನಡ ಧ್ವಜದ ಬಣ್ಣ ಹಾಗೂ ರಾಜ್ಯ ಸರ್ಕಾರದ ಲಾಂಭನ ಇರುವ ಮಹಿಳೆಯರ ಒಳ ಉಡುಪುಗಳ ಮೇಲೆ ಬಳಸಿ ಕನ್ನಿಡಗರ ಅಸ್ಮಿತೆ, ಸಾರ್ವಭೌಮತ್ವಕ್ಕೆ ಧಕ್ಕೆಯುಂಟು ಮಾಡಿದ ಆರೋಪ ಕೇಳಿ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಭಾರತದ ಕೊಳಕು ಭಾಷೆ ಕನ್ನಡ ಎಂದು ತೋರಿಸುವ ವೆಬ್'ಪೇಜ್ ಚೋರಿಸಿ ಗೂಗಲ್ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಮತ್ತೊಂದು ವಿದೇಶಿ ಕಂಪನಿ ಅಮೆಜಾನ್, ಕನ್ನಡಿಗರ ಗೌರವದ ಸಂಕೇತವಾದ ಕನ್ನಡ ಧ್ವಜದ ಬಣ್ಣ ಹಾಗೂ ರಾಜ್ಯ ಸರ್ಕಾರದ ಲಾಂಭನ ಇರುವ ಮಹಿಳೆಯರ ಒಳ ಉಡುಪುಗಳ ಮೇಲೆ ಬಳಸಿ ಕನ್ನಿಡಗರ ಅಸ್ಮಿತೆ, ಸಾರ್ವಭೌಮತ್ವಕ್ಕೆ ಧಕ್ಕೆಯುಂಟು ಮಾಡಿದ ಆರೋಪ ಕೇಳಿ ಬಂದಿದೆ. 

ಈ ಒಳ ಉಡುಪುಗಳು ಕೆನಡಾ ದೇಶದಲ್ಲಿ ಆನ್'ಲೈನ್ ಖರೀದಿಗೆ ಲಭ್ಯವಿರುವಂತೆ ಅಮೆಜಾನ್ ವೆಬ್ ನಲ್ಲಿ ತೋರಿಸಿದೆ. 

ವಿಮೆನ್ಸ್ ಫ್ಲ್ಯಾಗ್ ಆಫ್ ಕರ್ನಾಟಕ ಒರಿಜಿನಲ್ ಡಿಸೈನ್ ಎಂಬ ಹೆಸರಿನಲ್ಲಿ ಈ ಬಿಕಿನಿಯನ್ನು ಮಾರಾಟ ಮಾಡಲಾಗುತ್ತಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕದ ಫ್ಲಾಗ್​ ಡಿಸೈನ್​ನ ಪ್ರಾಡಕ್ಟ್​ ಎಂದು ನಮೂದಿಸಲ್ಪಟ್ಟಿದ್ದ ಕನ್ನಡ ಧ್ವಜವಿರುವ ಮಹಿಳೆಯರ ಒಳಉಡುಪುಗಳನ್ನು ಸೇಲ್ ಮಾಡುತ್ತಿರುವುದಕ್ಕೆ ಅಮೇಜಾನ್​ಗೆ ಟ್ಯಾಗ್​ ಮಾಡಿ ವಿರೋಧಿಸಲಾಗಿತ್ತು.

ಈ ಬಗ್ಗೆ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಕೂಡ ಆಕ್ರೋಶ ಹೊರಹಾಕಿದ್ದು, ಕನ್ನಡ ನಾಡಿನ ಗೌರವಕ್ಕೆ ಧಕ್ಕೆ ಉಂಟುಮಾಡಿರುವ ಕೆನಡಾದ ಅಮೇಜಾನ್ ಸಂಸ್ಥೆ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.  ಕನ್ನಡ ಧ್ವಜವನ್ನು ಪ್ರಿಂಟ್ ಮಾಡಲಾದ ಬಿಕಿಯನ್ನು ಮಾರಾಟ ಮಾಡುತ್ತಿರುವುದಕ್ಕೆ ಅಮೇಜಾನ್ ಕ್ಷಮೆ ಯಾಚಿಸದಿದ್ದರೆ ಕಾನೂನು ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದ ಅರವಿಂದ ಲಿಂಬಾವಳಿ, ಇತ್ತೀಚೆಗಷ್ಟೆ ನಾವು ಗೂಗಲ್​ನಿಂದ ಅವಮಾನ ಎದುರಿಸಿದ್ದೆವು. ಆ ಕೋಪ ಮಾಸುವ ಮೊದಲೇ ಅಮೇಜಾನ್​ನಿಂದಲೂ ಕನ್ನಡ ಧ್ವಜಕ್ಕೆ ಅವಮಾನವಾಗಿದೆ. ಕೆನಡಾದ ಅಮೇಜಾನ್ ಕನ್ನಡ ಧ್ವಜದ ಚಿತ್ರ ಹಾಗೂ ಲಾಂಛನವನ್ನು ಪ್ರಿಂಟ್ ಮಾಡಿರುವ ಮಹಿಳೆಯರ ಒಳ ಉಡುಪನ್ನು ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಬಹುರಾಷ್ಟ್ರೀಯ ಕಂಪನಿಗಳು ಪದೇಪದೆ ಈ ರೀತಿ ಕನ್ನಡಕ್ಕೆ ಅವಮಾನ ಮಾಡುವುದನ್ನು ನಿಲ್ಲಿಸಬೇಕು. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಯಾವ ಕಂಪನಿಯೂ ಮಾಡಬಾರದು. ಇಂತಹ ಘಟನೆಗಳು ಮರುಕಳಿಸುತ್ತಿದ್ದರೆ ನಮ್ಮ ಸರ್ಕಾರ ಅದನ್ನು ಸಹಿಸುವುದಿಲ್ಲ. ಅಮೇಜಾನ್ ಈ ಬಗ್ಗೆ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಾವು ಅಮೇಜಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಅಮೇಜಾನ್​ಗೆ ಟ್ಯಾಗ್ ಮಾಡಿ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com