ಚಿಕ್ಕಮಗಳೂರು: ಸಿಬ್ಬಂದಿ, ಸಂಪನ್ಮೂಲ ಕೊರತೆ ನಡುವಲ್ಲೂ ಸೋಂಕಿತರ ಸೇವೆ ಮುಂದುರೆಸುತ್ತಿರುವ ವೈದ್ಯ
ಸಿಬ್ಬಂದಿ ಹಾಗೂ ಸಂಪನ್ಮೂಲ ಕೊರತೆ ನಡುವಲ್ಲೂ ಕೊರೋನಾ ಸಾಂಕ್ರಾಮಿಕ ರೋಗದ ಗಂಭೀರತೆಯನ್ನು ಅರಿತಿರುವ ಚಿಕ್ಕಮಗಳೂರು ವೈದ್ಯರೊಬ್ಬರು ಜನರ ಆರೋಗ್ಯ ರಕ್ಷಣೆಗಾಗಿ ಸೇವೆಯನ್ನು ಮುಂದುವರೆಸಿದ್ದಾರೆ.
Published: 06th June 2021 12:11 PM | Last Updated: 06th June 2021 12:11 PM | A+A A-

ಡಾ.ಚಂದ್ರಶೇಖರ್
ಚಿಕ್ಕಮಗಳೂರು: ಸಿಬ್ಬಂದಿ ಹಾಗೂ ಸಂಪನ್ಮೂಲ ಕೊರತೆ ನಡುವಲ್ಲೂ ಕೊರೋನಾ ಸಾಂಕ್ರಾಮಿಕ ರೋಗದ ಗಂಭೀರತೆಯನ್ನು ಅರಿತಿರುವ ಚಿಕ್ಕಮಗಳೂರು ವೈದ್ಯರೊಬ್ಬರು ಜನರ ಆರೋಗ್ಯ ರಕ್ಷಣೆಗಾಗಿ ಸೇವೆಯನ್ನು ಮುಂದುವರೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಲ್ಲೇಗೌಡ ಜನರಲ್ ಆಸ್ಪತ್ರ ಈ ವರೆಗೂ 6,000 ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿದೆ.
ಕೊರೋನಾ ಮೊದಲನೇ ಅಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ಬಂದ 4,000 ಸೋಂಕಿತರಿಗೆ ಚಿಕಿತ್ಸೆ ನೀಡಿದ್ದೇನೆ. 140 ಹಾಸಿಗೆಯುಳ್ಳ ಆಸ್ಪತ್ರೆಯಲ್ಲಿ ಮತ್ತೊಬ್ಬರು ವೈದ್ಯ ಮತ್ತು ಇತರ ವೈದ್ಯಕೀಯ ಸಿಬ್ಬಂದಿಯ ಸಹಾಯದಿಂದ ವೈದ್ಯ ಚಂದ್ರಶೇಖರ್ ಅವರು ಚಿಕಿತ್ಸೆ ನೀಡಿದ್ದಾರೆ.
ಮೊದಲನೇ ಅಲೆ ಎದುರಿಸಿದ ಅನುಭವವಿದ್ದರೂ ಎರಡನೇ ಅಲೆ ಸಾಕಷ್ಟು ಕಠಿಣ ಪರಿಸ್ಥಿತಿಯನ್ನು ಎದುರು ಮಾಡಿತ್ತು. ಏಪ್ರಿಲ್ ನಿಂದ ಈ ವರೆಗೂ ಆಸ್ಪತ್ರೆಯಲ್ಲಿ 1,500 ಮಂದಿ ಸೋಂಕಿತರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಪರಿಸ್ಥಿತಿ ಹೇಗೋ ನಿಭಾಯಿಸಿದ್ದೆ. ತದನಂತರ ದಿನಗಳು ಸಾಕಷ್ಟು ಒತ್ತಡವನ್ನು ನೀಡಿತ್ತು. ಐಸಿಯುಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಸಾಕಷ್ಟು ಆಘಾತವನ್ನು ನೀಡಿತ್ತು ಎಂದು ವೈದ್ಯ ಚಂದ್ರಶೇಖರ್ ಅವರು ಹೇಳಿದ್ದಾರೆ.
ಇದೇ ವೇಏಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಹಾಗೂ ಸಂಪನ್ಮೂಲ ಸಮಸ್ಯೆಗಳಿರುವುದನ್ನು ಒಪ್ಪಿಕೊಂಡಿರುವ ಅವರು, 40 ವರ್ಷಕ್ಕಿಂತ ಮೇಲ್ಪಟ್ಟವರು ಬಳಕೆಯಲ್ಲಿರುವ ವೆಂಟಿಲೇಟರ್ ಗಳಿಗಾಗಿಯೇ ಸಾಲಿನಲ್ಲಿ ನಿಂತಿರುವುದನ್ನು ನೋಡಲು ಬಹಳ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ಕಠಿಣ ಪರಿಸ್ಥಿತಿಗಳ ನಡುವೆ ಎದುರಾಗುತ್ತಿರುವ ಒತ್ತಡವನ್ನು ನಿವಾರಿಸಿಕೊಳ್ಳಲು ಯೋಗ ಹಾಗೂ ವ್ಯಾಯಾಮದ ಮೊರೆ ಹೋಗಿದ್ದಾರೆ.
ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಚಂದ್ರಶೇಖರ್ ಅವರು ಪ್ರತೀನಿತ್ಯ 90 ನಿಮಿಷಗಳ ವಿರಾಮ ತೆಗೆದುಕೊಂಡು ವ್ಯಾಯಾಮ, ಯೋಗ ಮಾಡುತ್ತಿದ್ದಾರೆ.
ಈ ನಡುವೆ ಚಂದ್ರಶೇಖರ್ ಅವರ ಸೇವೆಗೆ ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾನವ ಸಂಪನ್ಮೂಲದ ಕೊರತೆಯ ನಡೆಯುವಲ್ಲೂ ವೈದ್ಯ ಚಂದ್ರಶೇಖರ್ ಅವರು ತಮ್ಮ ಸೇವೆ ಮುಂದುವರೆಸಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಆಸ್ಪತ್ರೆಯ ಮುಖ್ಯಸ್ಥನಾಗಿರುವ ನಾನು ಈ ಸಂದರ್ಭದಲ್ಲಿ ನನ್ನೊಂದಿಗೆ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿದೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಆದರೂ ಜನರು ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಬೇಕೆಂದು ಚಂದ್ರಶೇಖರ್ ಅವರು ಸಲಹೆ ನೀಡಿದ್ದಾರೆ.