ಏಕಕಾಲದಲ್ಲೇ ಅನ್ನನಾಳ ಹಾಗೂ ಮೂತ್ರಪಿಂಡದ ಕ್ಯಾನ್ಸರ್ ಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಫೋರ್ಟಿಸ್ ಆಸ್ಪತ್ರೆ ವೈದ್ಯರ ಸಾಹಸ

ಏಕಕಾಲದಲ್ಲೇ ಅನ್ನನಾಳ ಕ್ಯಾನ್ಸರ್ ಹಾಗೂ ಮೂತ್ರಪಿಂಡದ ಕ್ಯಾನ್ಸರ್ ಹೊಂದಿದ್ದ 74 ವರ್ಷದ ವ್ಯಕ್ತಿಗೆ ರೋಬೋಟ್ ಸಹಾಯದ ಮೂಲಕ  ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಇದು ವಿಶ್ವದಲ್ಲೇ ಅಪರೂಪದ ಪ್ರಕರಣಗಳಲ್ಲಿ ಒಂದು ಎನ್ನಲಾಗಿದೆ.

Published: 21st June 2021 09:49 PM  |   Last Updated: 21st June 2021 10:05 PM   |  A+A-


Forties1

ಫೋರ್ಟಿಸ್

Posted By : Nagaraja AB
Source : UNI

ಬೆಂಗಳೂರು: ಏಕಕಾಲದಲ್ಲೇ ಅನ್ನನಾಳ ಕ್ಯಾನ್ಸರ್ ಹಾಗೂ ಮೂತ್ರಪಿಂಡದ ಕ್ಯಾನ್ಸರ್ ಹೊಂದಿದ್ದ 74 ವರ್ಷದ ವ್ಯಕ್ತಿಗೆ ರೋಬೋಟ್ ಸಹಾಯದ ಮೂಲಕ  ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಇದು ವಿಶ್ವದಲ್ಲೇ ಅಪರೂಪದ ಪ್ರಕರಣಗಳಲ್ಲಿ ಒಂದು ಎನ್ನಲಾಗಿದೆ.

ಆಸ್ಪತ್ರೆಯ ಆಂಕೋಲಜಿ ಮತ್ತು ಹೆಮಟೋ ಆಂಕೋಲಾಜಿ, ಫೊರ್ಟಿಸ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ನಿರ್ದೇಶಕಿ ಡಾ.ನೀತಿ ರೈಝಾದ, ಮೂತ್ರಶಾಸ್ತ್ರ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ, ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ಹಿರಿಯ ಸಲಹೆಗಾರ ಡಾ. ಮನೀಶ್ ಜೋಶಿ ಇವರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

ಆಘ್ಘಾನಿಸ್ತಾನ ಮೂಲದ 74 ವರ್ಷದ ವ್ಯಕ್ತಿ ಆಹಾರ ಸೇವನೆಯ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ನಡೆಸಿದಾಗ ಅನ್ನನಾಳದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ವಿವಿಧ ಪರೀಕ್ಷೆಗಳ ನಂತರ ಅವರಿಗೆ ಎಡ ಮೂತ್ರಪಿಂಡದಲ್ಲಿಯೂ ಗಡ್ಡೆಯೊಂದಿಗೆ “ಓಸೋಪೇಜಿಲ್ ಕ್ಯಾನ್ಸರ್” ಇರುವುದು ತಿಳಿದು ಬಂದಿತ್ತು. ಇದು ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಆಗಿದೆ. 

ಸಾಮಾನ್ಯವಾಗಿ ಒಮ್ಮೆಲೆ ಎರಡೂ ರೀತಿಯ ಕ್ಯಾನ್ಸರ್ ಕಾಣಿಸಿಕೊಳ್ಳುವುದೇ ಅಪರೂಪದ ಪ್ರಕರಣವಾಗಿದೆ. ಎರಡು ರೀತಿಯ ಕ್ಯಾನ್ಸರ್ ಇರುವ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಿದರೂ ಬದುಕುವ ಸಾಧ್ಯತೆ ಶೇ.90ರಷ್ಟು ಕಡಿಮೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ನಂತರ, ರೋಗಿಗೆ ಅನ್ನನಾಳ ಹಾಗೂ ಮೂತ್ರಪಿಂಡದಲ್ಲಿ ಕ್ಯಾನ್ಸರ್ ಇದ್ದ ಕಾರಣ ಕಿಮೋರೇಡಿಯೇಶನ್ ಚಿಕಿತ್ಸೆಯಿಂದ ಪ್ರಾರಂಭಿಸಿ, ನಂತರದಲ್ಲಿ ರೋಬೋಟ್ ನೆರವಿನ ಮೂಲಕ ಏಕಕಾಲದಲ್ಲಿಯೇ ಎರಡೂ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಈ ಕುರಿತು ಮಾಹಿತಿ ನೀಡಿದ ಕ್ಯಾನ್ಸರ್ ಸಂಸ್ಥೆ ವೈದ್ಯಕೀಯ ಆಂಕೋಲಕಜಿ ಮತ್ತು ಹೆಮಟೋ ಆಂಕೋಲಜಿ ನಿರ್ದೇಶಕ ಡಾ.ನಿತಿ ರೈಜಾಡಾ, ವಯಸ್ಸಾದ ಕಾರಣ ಇವರಿಗೆ ಒಂದು ಶಸ್ತ್ರಚಿಕಿತ್ಸೆ ನಡೆಸುವುದೇ ಅಪಾಯಕಾರಿ. ಅದರಲ್ಲೂ ಎರಡೆರಡು ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನ ಕೆಲಸವೇ ಆಗಿತ್ತು ಎಂದಿದ್ದಾರೆ.


Stay up to date on all the latest ರಾಜ್ಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp