ಮೈಸೂರಿನಲ್ಲಿ ಕೋವಿಡ್-19 ಡೆಲ್ಟಾ ಪ್ಲಸ್ ಕೇಸು ಪತ್ತೆ; ಪ್ರತಿ ಜಿಲ್ಲೆಯಲ್ಲಿ ಶೇ.5ರಷ್ಟು ರ್ಯಾಂಡಮ್ ಟೆಸ್ಟ್: ಡಾ. ಕೆ.ಸುಧಾಕರ್

ಕೊರೋನಾ ಎರಡನೇ ಅಲೆಯಿಂದ ತತ್ತರಿಸಿ ಹೋಗಿರುವ ಕರುನಾಡಿಗೆ ಮಾರಕ ಡೆಲ್ಟಾ+ ರೂಪಾಂತರಿ ಕೊರೋನಾ ಕಾಲಿಟ್ಟಿದೆ. ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಅವರೇ ಇದನ್ನು ಬೆಂಗಳೂರಿನಲ್ಲಿಂದು ದೃಢಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಎರಡನೇ ಅಲೆಯಿಂದ ತತ್ತರಿಸಿ ಹೋಗಿರುವ ಕರುನಾಡಿಗೆ ಮಾರಕ ಡೆಲ್ಟಾ ಪ್ಲಸ್ ರೂಪಾಂತರಿ ಕೊರೋನಾ ಕಾಲಿಟ್ಟಿದೆ. ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಅವರೇ ಇದನ್ನು ಬೆಂಗಳೂರಿನಲ್ಲಿಂದು ದೃಢಪಡಿಸಿದ್ದಾರೆ.

ಡೆಡ್ಲಿ ಡೆಲ್ಟಾ ಪ್ಲಸ್ ಎಂಟ್ರಿಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಸಂಪೂರ್ಣ ಅಲರ್ಟ್ ಆಗಿದೆ. ಪ್ರತಿ ಜಿಲ್ಲೆಗಳಲ್ಲೂ ಶೇಕಡಾ 5ರಷ್ಟು ರ್ಯಾಂಡಮ್ ಟೆಸ್ಟ್ ಮಾಡಬೇಕು. ಅನುಮಾನ ಹೆಚ್ಚಿರುವ ಕಡೆಗಳಲ್ಲಿ ರ್ಯಾಂಡಮ್ ಟೆಸ್ಟ್ ಹೆಚ್ಚು ಮಾಡುವುದಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದಾರೆ. 

ನಮಗೆ ಅನುಮಾನ ಬರುವ ಕಡೆಗಳಲ್ಲೆಲ್ಲಾ ಇನ್ನೂ ಹೆಚ್ಚು ಪರೀಕ್ಷೆಗಳನ್ನು ಮಾಡಲು ಸೂಚನೆ ನೀಡುತ್ತೇವೆ ಎಂದಿದ್ದಾರೆ.
ಇನ್ನು ಮೈಸೂರಿನಲ್ಲಿ ಪತ್ತೆಯಾಗಿದ್ದ ಡೆಲ್ಟಾ ಪ್ಲಸ್ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ. ಅವರ ಬಗ್ಗೆ ಗೌಪ್ಯತೆ ನಿಯಮದಿಂದಾಗಿ ಹೆಚ್ಚು ವಿವರ ನೀಡಲು ಸಾಧ್ಯವಿಲ್ಲ. ಅವರೀಗ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com