ಬೆಂಗಳೂರು: 100 ರೋಗಿಗಳಿಗೆ ಆಕ್ಸಿಜನ್ ಕೊರತೆ, ಕಣ್ಣೀರು ಹಾಕಿದ ಖಾಸಗಿ ಆಸ್ಪತ್ರೆ ಸಿಇಒ!

ರಾಜಧಾನಿ ಬೆಂಗಳೂರಿನಲ್ಲಿ ಹೆಮ್ಮಾರಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಆಕ್ಸಿಜನ್ ಸಹಿತ ಹಾಸಿಗೆಗಳು ದೊರೆಯದ ರೋಗಿಗಳು ಅಥವಾ ಅವರ ಕುಟುಂಬಸ್ಥರು ಮಾತ್ರ ಕಣ್ಣೀರು ಹಾಕುತ್ತಿಲ್ಲ. ಆದರೆ, ಆಸ್ಪತ್ರೆಯ ಮುಖ್ಯಸ್ಥರು ಕೂಡಾ ತೀವ್ರ ಒತ್ತಡದಲ್ಲಿದ್ದಾರೆ.
ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆ
ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೆಮ್ಮಾರಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಆಕ್ಸಿಜನ್ ಸಹಿತ ಹಾಸಿಗೆಗಳು ದೊರೆಯದ ರೋಗಿಗಳು ಅಥವಾ ಅವರ ಕುಟುಂಬಸ್ಥರು ಮಾತ್ರ ಕಣ್ಣೀರು ಹಾಕುತ್ತಿಲ್ಲ. ಆದರೆ, ಆಸ್ಪತ್ರೆಯ ಮುಖ್ಯಸ್ಥರು ಕೂಡಾ ತೀವ್ರ ಒತ್ತಡದಲ್ಲಿದ್ದಾರೆ.

ಗುರುವಾರ ಗಂಭೀರ ಸ್ಥಿತಿಯಲ್ಲಿದ್ದ 100 ರೋಗಿಗಳಿಗೆ ಎದುರಾದ ಆಕ್ಸಿಜನ್ ಕೊರತೆ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡುವಾಗ ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆಯ ಸಿಇಒ ಡಾ.ಜ್ಯೋತಿ ಎಸ್ ನೀರಾಜ ಕೂಡಾ ಕಣ್ಣೀರು ಹಾಕಿದರು.

ಇದು ನಮ್ಮೆಲ್ಲರಿಗೂ ದುಃಸ್ವಪ್ನವಾಗಿತ್ತು. ಆಕ್ಸಿಜನ್ ಪಡೆಯಲು ನಿರಂತರವಾಗಿ ಪ್ರಯತ್ನಿಸುತ್ತಾ ವಾರ್ ರೂಂನಂತೆ ನಮ್ಮ ಆಸ್ಪತ್ರೆ ಕಾಣಿಸುತಿತ್ತು.  ಆಕ್ಸಿಜನ್ ಹುಡುಕಾಟಕ್ಕೆ ಎಲ್ಲ ವೈದ್ಯರು ಸೇರಿದರು.ಆಕ್ಸಿಜನ್ ಪೂರೈಕೆದಾರರು,ಇತರ ಆಸ್ಪತ್ರೆಗಳಿಗೆ ಕರೆ ಮಾಡುತ್ತಿದ್ದರು. ಜನಪ್ರತಿನಿಧಿಗಳು ಕೂಡಾ ನೆರವಿಗೆ ಬರಲಿಲ್ಲ. 100 ರೋಗಿಗಳ ಪರಿಸ್ಥಿತಿ ಅಪಾಯದಲ್ಲಿದ್ದಾಗ ನಾವೆಲ್ಲ ಸಾಕಷ್ಟು ಪ್ರಯತ್ನಿಸಿ, ಕಣ್ಣೀರು ಹಾಕಿದ್ದಾಗಿ ತಿಳಿಸಿದರು.

ಈ ರೋಗಿಗಳಿಗೆ  ಬೆಡ್ ವ್ಯವಸ್ಥೆ ಮಾಡುವಂತೆ ಅನೇಕ ಆಸ್ಪತ್ರೆಗಳಿಗೆ ಎಸ್ ಒಎಸ್ ಕಳುಹಿಸಿದರೂ ಎಲ್ಲಿಯೂ ಕೂಡಾ ಬೆಡ್ ಸಿಗಲಿಲ್ಲ.
ಪ್ರತಿದಿನ ಆಸ್ಪತ್ರೆಗೆ 3 ಸಾವಿರ ಲೀಟರ್ ಲಿಕ್ವಿಡ್ ಆಕ್ಸಿಜನ್ ಅಗತ್ಯವಿದೆ. ಜನಪ್ರತಿನಿಧಿಯೊಬ್ಬರ ನೆರವಿನಿಂದ ಸ್ವಲ್ಪ ಪ್ರಮಾಣದ ಆಕ್ಸಿಜನ್ ದೊರೆಯಿತು. ಆದರೆ, ಅದು 12 ಗಂಟೆಗೆ ಮಾತ್ರ ಸಾಕಾಗುತಿತ್ತು. ಆದರೆ, ಅದು ಮುಗಿದ ನಂತರ ಏನು ಮಾಡೋದು?ಅದು ಮುಗಿದ  ನಂತರ ಮತ್ತೆ ಅದೇ ಪರಿಸ್ಥಿತಿ ಇರಲಿದೆ ಎಂದು ಅವರು ಹೇಳಿದರು.

ನಮ್ಮಲ್ಲಿ ಸಂಗ್ರಹ ಇಲ್ಲ ಅಂತಾ ಎಲ್ಲಾ ಆಕ್ಸಿಜನ್ ಸರಬರಾಜುದಾರರು ಹೇಳುತ್ತಿದ್ದು, ಎಲ್ಲಿಯೂ ಕೂಡಾ ನಮಗೆ ಸಹಾಯ ದೊರೆಯುತ್ತಿಲ್ಲ. ಆದ್ದರಿಂದ ಆಕ್ಸಿಜನ್ ಬೇಕಾಗಿರುವ ರೋಗಿಗಳನ್ನು ಕಡಿಮೆ ಸಂಖ್ಯೆಯಲ್ಲಿ ಆಡ್ಮೀಟ್ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಶುಕ್ರವಾರ 10 ಮಂದಿಯನ್ನು ಡಿಸ್ಚಾರ್ಜ್ ಮಾಡಿದ್ದೇವೆ. ಆದರೆ, ಆಕ್ಸಿಜನ್ ಇಲ್ಲದ ಕಾರಣ ಹೊಸ ರೋಗಿಗಳನ್ನು ಆಡ್ಮೀಟ್ ಮಾಡಿಕೊಳ್ಳುತ್ತಿಲ್ಲ. ರೋಗಿಗಳ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಲು ನಾವು ಬಯಸುವುದಿಲ್ಲ ಎಂದು ಸಿಇಒ ಡಾ.ಜ್ಯೋತಿ ಎಸ್ ನೀರಾಜ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com