ಮಿಷನ್ ಆಕ್ಸಿಜನ್: ರಾಜ್ಯದ ವಿವಿಧ ಭಾಗಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಪೂರೈಕೆಗೆ ಹಿರಿಯ ಪೊಲೀಸ್ ಅಧಿಕಾರಿಯ ನೆರವು!

ಕೋವಿಡ್-19 ರೋಗಿಗಳನ್ನು ಬದುಕಿಸುವುದಕ್ಕಾಗಿ ದೇಶಾದ್ಯಂತ ಆಕ್ಸಿಜನ್ ಪೂರೈಕೆಗೆ ಸಮಸ್ಯೆ ಎದುರಾಗಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ವರೆಗೂ 7 ಜಿಲ್ಲೆಗಳಲ್ಲಿ 17 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಪೂರೈಕೆ ಮಾಡಿದ್ದಾರೆ.
ಪೊಲೀಸ್ (ಸಂಗ್ರಹ ಚಿತ್ರ)
ಪೊಲೀಸ್ (ಸಂಗ್ರಹ ಚಿತ್ರ)

ಕೋಲಾರ: ಕೋವಿಡ್-19 ರೋಗಿಗಳನ್ನು ಬದುಕಿಸುವುದಕ್ಕಾಗಿ ದೇಶಾದ್ಯಂತ ಆಕ್ಸಿಜನ್ ಪೂರೈಕೆಗೆ ಸಮಸ್ಯೆ ಎದುರಾಗಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸ್ನೇಹಿತರೊಂದಿಗೆ ಈ ವರೆಗೂ 7 ಜಿಲ್ಲೆಗಳಲ್ಲಿ 17 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಪೂರೈಕೆ ಮಾಡಿದ್ದಾರೆ ಹಾಗೂ 200 ಈ ರೀತಿಯ ಕಾನ್ಸಂಟ್ರೇಟರ್ ಗಳನ್ನು ಪೂರೈಕೆ ಮಾಡುವ ಗುರಿ ಹೊಂದಿದ್ದಾರೆ. 

ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ಸೀಮಂತ್ ಕುಮಾರ್ ಕೇಂದ್ರದ ವ್ಯಾಪ್ತಿಯಲ್ಲಿ ಕೋವಿಡ್-19ಗೆ ಸಂಬಂಧಿಸಿದ ಹಿರಿಯ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು,  ಜಿಲ್ಲಾ ವರಿಷ್ಠಾಧಿಕಾರಿಗಳ ಮೂಲಕ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಪೂರೈಕೆ ಮಾಡಲು ಸಹಕರಿಸುತ್ತಿದ್ದಾರೆ. 

ಕೋವಿದ್-19 ಮೊದಲ ಅಲೆಯಲ್ಲಿ ವಲಸಿಗ ಕಾರ್ಮಿಕರಿಗೆ ಔಷಧ, ಟ್ರೈನ್ ಸೌಲಭ್ಯಗಳು, ಆಹಾರ ಪದಾರ್ಥಗಳು, ದಿನಸಿ ನೀಡುವ ಮೂಲಕ ಸಾವಿರಾರು ಮಂದಿಗೆ ಸಹಾಯ ಮಾಡಿದ್ದರು. ಅಷ್ಟೇ ಅಲ್ಲದೇ ಪೊಲೀಸ್ ಇಲಾಖೆಯ ಮೂಲಕವೇ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ಪಡೆಯುವುದಕ್ಕೂ ವ್ಯವಸ್ಥೆ ಮಾಡಿದ್ದರು. 

ಈಗ ಎರಡನೇ ಅಲೆಯಲ್ಲಿ ಆಕ್ಸಿಜನ್ ಗೆ ಹಾಹಾಕಾರ ಉಂಟಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಪೂರೈಕೆ ಮಾಡುತ್ತಿದ್ದಾರೆ. 

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಮೊದಲ ಅಲೆಯಲ್ಲಿ ತಾವು 2 ವಾಟ್ಸ್ ಆಪ್ ಗ್ರೂಪ್ ಗಳನ್ನು ಪ್ರಾರಂಭಿಸಿದ್ದರು. ಇದರಲ್ಲಿ ಕೆನಡಾದಲ್ಲಿ ನೆಲೆನಿಂತಿರುವ ಕರ್ನಾಟಕದ ಮೂಲದವರೂ ಇದ್ದರು. ಎರಡನೇ ಅಲೆಯಲ್ಲಿ ಅಗತ್ಯವಿರುವವರಿಗೆ ಅಗತ್ಯವಿರುವುದನ್ನು ಪೂರೈಕೆ ಮಾಡುವುದರ ಬಗ್ಗೆ ಈ ಗ್ರೂಪ್ ನಲ್ಲಿ ಚರ್ಚೆಯಾಯಿತು. ಆಕ್ಸಿಜನ್ ಪೂರೈಕೆ ತುರ್ತು ಅಗತ್ಯವಾಗಿರುವುದರಿಂದ ಅವುಗಳನ್ನು ಅಗತ್ಯವಿರುವವರಿಗೆ ಪೂರೈಕೆ ಮಾಡುವುದಕ್ಕೆ ನಿರ್ಧರಿಸಲಾಯಿತು"

"ಪ್ರಾರಂಭಿಕ ಹಂತದಲ್ಲಿ 17 ಕಾನ್ಸಂಟ್ರೇಟರ್ ಗಳನ್ನು ಕೋಲಾರ, ತುಮಕೂರು, ದೊಡ್ದಬಳ್ಳಾಪುರ (ಬೆಂಗಳೂರು ಗ್ರಾಮಾಂತರ) ಜಿಲ್ಲೆಗಳಿಗೆ ತಲಾ 3 ರಂತೆ ನೀಡಲಾಗಿದೆ. ರಾಮನಗರಕ್ಕೆ 2, ಕೆಜಿಎಫ್ ಗೆ ಒಂದು, ಮೈಸೂರಿಗೆ 2 ನೀಡಲಾಗಿದೆ. ಈ ಪೈಕಿ ಒಂದನ್ನು ಪೊಲೀಸ್ ಕೋವಿಡ್-19 ಕೇರ್ ಕೇಂದ್ರಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು" ಸೀಮಂತ್ ಕುಮಾರ್ ಹೇಳಿದ್ದಾರೆ. 

"ಇದರಲ್ಲಿ ಹಣ ಸಂಗ್ರಹಿಸುವ ಮಾತೇ ಇಲ್ಲ, ಗುಂಪಿನ ಸದಸ್ಯರು ಅವರೇ ಖುದ್ದಾಗಿ ಖರೀದಿಸಿ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಕಳಿಸಿಕೊಟ್ಟಿದ್ದಾರೆ ಎಂದು" ಸೀಮಂತ್ ಕುಮಾರ್ ಮಾಹಿತಿ ನೀಡಿದ್ದಾರೆ. 

ಇನ್ನು ಮೂರು-ನಾಲ್ಕು ದಿನಗಳಲ್ಲಿ 50-10 ಲೀಟರ್ ಗಳಷ್ಟು ಕಾನ್ಸಂಟ್ರೇಟರ್ ಗಳು ಕೆನಡಾದಿಂದ ಬರುತ್ತಿದೆ. ಅಗತ್ಯಕ್ಕೆ ತಕ್ಕಂತೆ  ಆಸ್ಪತ್ರೆಗಳಿಗೆ 5 ಲೀಟರ್ ಗಳ 32 ಕಾನ್ಸಂಟ್ರೇಟರ್ ಗಳನ್ನು ಪೂರೈಕೆ ಮಾಡಲಾಗುತ್ತದೆ. 5 ಲೀಟರ್ ಗಳ ಕಾನ್ಸಂಟ್ರೇಟರ್ ಗಳಿಗೆ 80,000 ರೂಪಾಯಿ, 10 ಲೀಟರ್ ಗಳ ಕಾನ್ಸಂಟ್ರೇಟರ್ ಗಳಿಗೆ 1.25 ರೂಪಾಯಿಗಳಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com