ಮೊಹಮ್ಮದ್ ಬಾಬಾ ಅಲಿಯಾಸ್ ಬಂಡಿಬಾಬಾ
ಮೊಹಮ್ಮದ್ ಬಾಬಾ ಅಲಿಯಾಸ್ ಬಂಡಿಬಾಬಾ

ಕಲಬುರಗಿಯಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ

ನಗರದ ಆಟೋ ಚಾಲಕನೋರ್ವನನ್ನು ಆತನ ಪತ್ನಿಯ ಸಹೋದರನೇ ಕೊಲೆ ಮಾಡಿದ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.

ಕಲಬುರಗಿ :ನಗರದ ಆಟೋ ಚಾಲಕನೋರ್ವನನ್ನು ಆತನ ಪತ್ನಿಯ ಸಹೋದರನೇ ಕೊಲೆ ಮಾಡಿದ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.

ನಗರದ ಗಾಲೀಬ್ ಕಾಲೋನಿ ನಿವಾಸಿ ಮೊಹಮ್ಮದ್ ಬಾಬಾ ಅಲಿಯಾಸ್ ಬಂಡಿಬಾಬಾ ಹತ್ಯೆಯಾದ ಆಟೋ ಚಾಲಕ.

ಮೊಹಮ್ಮದ್ ಬಾಬಾ ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಇದರಿಂದ ಬೇಸತ್ತ ಆತನ ಪತ್ನಿ ತನ್ನ ಸಹೋದರ ಚಾಂದ್‌ನನ್ನು ಕರೆದಿದ್ದಳು. ಸ್ಥಳಕ್ಕೆ ಬಂದ ಚಾಂದ್ ಜಗಳ ಬಿಡಿಸುವ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಹೊಡೆದಿದ್ದಾನೆ.

ಇನ್ನು ಕೊಲೆಯಾದ ಬಂಡಿಬಾಬಾ ಕಳೆದ ತಿಂಗಳಷ್ಟೇ ಜೈಲಿನಿಂದ  ಜಾಮೀನಿನ ಮೇಲೆ ಹೊರ ಬಂದಿದ್ದ, ಘಟನೆ ಸಂಬಂಧ  ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Stories

No stories found.

Advertisement

X

Advertisement

X
Kannada Prabha
www.kannadaprabha.com