ಕರ್ನಾಟಕದಲ್ಲಿ ಮೂವರು ಬ್ಲ್ಯಾಕ್ ಫಂಗಸ್ ಗೆ ಬಲಿಯಾಗಿರುವ ಶಂಕೆ

ರಾಜ್ಯದಲ್ಲಿ ಮೂವರು ಬ್ಲ್ಯಾಕ್ ಫಂಗಸ್ ಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹುಬ್ಬಳ್ಳಿಯಲ್ಲಿ 40 ವರ್ಷದ ವ್ಯಕ್ತಿ ಬ್ಲ್ಯಾಕ್ ಫಂಗಸ್ ಗೆ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿ ಮತ್ತಿಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ಲ್ಯಾಕ್ ಫಂಗಸ್ ಗೆ ತುತ್ತಾಗಿರುವವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿರುವುದು
ಬ್ಲ್ಯಾಕ್ ಫಂಗಸ್ ಗೆ ತುತ್ತಾಗಿರುವವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿರುವುದು

ಹುಬ್ಬಳ್ಳಿ/ಬೆಳಗಾವಿ: ರಾಜ್ಯದಲ್ಲಿ ಮೂವರು ಬ್ಲ್ಯಾಕ್ ಫಂಗಸ್ ಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹುಬ್ಬಳ್ಳಿಯಲ್ಲಿ 40 ವರ್ಷದ ವ್ಯಕ್ತಿ ಬ್ಲ್ಯಾಕ್ ಫಂಗಸ್ ಗೆ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿ ಮತ್ತಿಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಹುಬ್ಬಳ್ಳಿಯಲ್ಲಿ 40 ವರ್ಷದ ವ್ಯಕ್ತಿ ಮೊನ್ನೆ ಶನಿವಾರ ರಾತ್ರಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಬ್ಲ್ಯಾಕ್ ಫಂಗಸ್ ಗೆ ಅಸುನೀಗಿದ್ದಾರೆ ಎಂದು ಹೇಳಲಾಗುತ್ತಿದೆ.ಈ ವ್ಯಕ್ತಿ ಇತ್ತೀಚೆಗೆ ಕೋವಿಡ್-19ನಿಂದ ಗುಣಮುಖರಾಗಿದ್ದರು. ಆದರೆ ವೈದ್ಯರು ಇನ್ನೂ ಆ ರೋಗಿ ಬ್ಲ್ಯಾಕ್ ಫಂಗಸ್ ನಿಂದ ಮೃತಪಟ್ಟಿದ್ದು ಎಂದು ಘೋಷಿಸಿಲ್ಲ. ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ನೀಡುವ ರಾಜ್ಯದ ಆಸ್ಪತ್ರೆಗಳಲ್ಲಿ ಕಿಮ್ಸ್ ಆಸ್ಪತ್ರೆ ಕೂಡ ಒಂದು. ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ರೋಗಿಗಳಿದ್ದು ನೆರೆಯ ರಾಜ್ಯಗಳ ರೋಗಿಗಳು ಸಹ ಫಂಗಲ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ 2-3 ವಾರಗಳಿಂದ ಈ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಕೇಸುಗಳಿವೆ. ನಾಲ್ವರು ರೋಗಿಗಳು ಯಶಸ್ವಿಯಾಗಿ ಗುಣಮುಖವಾಗಿ ಇತ್ತೀಚೆಗೆ ಬಿಡುಗಡೆ ಹೊಂದಿದ್ದಾರೆ. ರಾಜ್ಯದ ಇತರ ಆಸ್ಪತ್ರೆಗಳಂತೆ, ಕಿಮ್ಸ್ ಆಸ್ಪತ್ರೆಯಲ್ಲಿ ಕೂಡ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧಿಯ ಅಭಾವ ಕಂಡುಬಂದಿತ್ತು. ಮೊನ್ನೆ ಶನಿವಾರ ಆರೋಗ್ಯ ಸಚಿವ ಡಾ ಕೆ ಸುಧಾಕರ್, ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಗತ್ಯ ಔಷಧಿಗಳನ್ನು ಪೂರೈಸುವ ಭರವಸೆ ನೀಡಿದ್ದರು.

ವಾರದ ಹಿಂದೆ ಕೊರೋನಾದಿಂದ ಗುಣಮುಖರಾದ ನನ್ನ ತಂದೆಯನ್ನು ಕಪ್ಪು ಶಿಲೀಂಧ್ರ ಚಿಕಿತ್ಸೆಗಾಗಿ ಕಳೆದ ಗುರುವಾರ ಮತ್ತೆ ಕಿಮ್ಸ್ ಗೆ ದಾಖಲಿಸಲಾಯಿತು. ಸೋಂಕಿನ ವಿರುದ್ಧ ಹೋರಾಡಲು ಅವರಿಗೆ ಔಷಧಿ ನೀಡಿರಲಿಲ್ಲ. ಈ ಬಗ್ಗೆ ಕೇಳಿದಾಗ ಆಸ್ಪತ್ರೆಯಲ್ಲಿ ದಾಸ್ತಾನು ಇಲ್ಲ ಎಂದು ವೈದ್ಯರು ಹೇಳಿದರು. ನಾನು ಖಾಸಗಿ ಆಸ್ಪತ್ರೆಯಲ್ಲಿ ಕೇಳಿದಾಗ ಪ್ರತಿ ಚುಚ್ಚುಮದ್ದಿಗೆ 45,000 ರೂ. ವೆಚ್ಚವಾಗಲಿದೆ ಮತ್ತು ಅಂತಹ ಒಂಬತ್ತು ಚುಚ್ಚುಮದ್ದಿನ ಅಗತ್ಯವಿದೆ ಎಂದು ಅವರು ಹೇಳಿದರು. ನನ್ನಂತಹ ಮಧ್ಯಮ ವರ್ಗದ ವ್ಯಕ್ತಿಗೆ ಕೈಗೆಟಕುವಂತಹದ್ದುದಾಗಿರಲಿಲ್ಲ ಎನ್ನುತ್ತಾರೆ.

ಈ ಮಧ್ಯೆ ಬೆಳಗಾವಿಯಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ ಎಸ್ ವಿ ಮುಣಿಯಾಲ, ಅಥಣಿಯಲ್ಲಿ ಒಬ್ಬರು ಸತ್ತರೆ, ಮತ್ತೊಬ್ಬರು ಗೋಕಾಕ್ ನಲ್ಲಿ ಮೃತಪಟ್ಟಿದ್ದಾರೆ. ಇಬ್ಬರೂ 70 ವರ್ಷಕ್ಕಿಂತ ಮೇಲ್ಪಟ್ಟವರು. ಜಿಲ್ಲೆಯಲ್ಲಿ 7 ಬ್ಲ್ಯಾಕ್ ಫಂಗಸ್ ಕೇಸುಗಳು ಪತ್ತೆಯಾಗಿವೆ. ಅಲ್ಲದೆ ಎರಡು ವೈಟ್ ಫಂಗಸ್ ಕೇಸುಗಳು ಸಹ ವರದಿಯಾಗಿವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com