ಜಿಂದಾಲ್ ಸಂಸ್ಥೆಗೆ ಜಮೀನು ಮಾರಾಟ ಮಾಡುವ ನಿರ್ಧಾರಕ್ಕೆ ಒಪ್ಪಿಗೆ ನೀಡಲು ಸಚಿವ ಸಂಪುಟ ನಕಾರ

ಸರ್ಕಾರ ಈ ಹಿಂದೆ ಜಿಂದಾಲ್ ಸಂಸ್ಥೆಗೆ ಜಮೀನು ಮಾರಾಟ ಮಾಡುವ ನಿರ್ಧಾರಕ್ಕೆ ಗುರುವಾರದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡದೇ ಆ ಕುರಿತ ಪ್ರಸ್ತಾವನೆಯನ್ನು ತಳ್ಳಿಹಾಕಿದೆ.
ಬಿಜೆಪಿ ಸಂಪುಟ
ಬಿಜೆಪಿ ಸಂಪುಟ

ಬೆಂಗಳೂರು: ಸರ್ಕಾರ ಈ ಹಿಂದೆ ಜಿಂದಾಲ್ ಸಂಸ್ಥೆಗೆ ಜಮೀನು ಮಾರಾಟ ಮಾಡುವ ನಿರ್ಧಾರಕ್ಕೆ ಗುರುವಾರದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡದೇ ಆ ಕುರಿತ ಪ್ರಸ್ತಾವನೆಯನ್ನು ತಳ್ಳಿಹಾಕಿದೆ.

ಈ ಸಂಬಂಧ ಸಚಿವ ಸಂಪುಟ ಸಭೆಯ ಬಳಿಕ ಗೃಹ ಹಾಗೂ ಕಾನೂನು ಖಾತೆಗಳ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿ, ಹಿಂದಿನ ಸಂಪುಟದಲ್ಲಿ ತೆಗೆದುಕೊಂಡಿರುವ ಜಿಂದಾಲ್ ಕಂಪೆನಿಗೆ ಜಮೀನು ಮಾರಾಟದ ಪ್ರಸ್ತಾವಕ್ಕೆ ಈ ಸಂಪುಟ ಸಭೆ ಅನುಮೋದನೆ ನೀಡಿಲ್ಲ ಎಂದರು‌.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠ ನಡೆಸಿ ಮಾತನಾಡಿದ ಬೊಮ್ಮಾಯಿ,ಜಿಂದಾಲ್ ಗೆ ಜಮೀನು ನೀಡುವ ಮುಂದೆ ಏನಾಗುತ್ತದೆ ಎನ್ನುವ ಬಗ್ಗೆ ಗೊತ್ತಿಲ್ಲ.ಜಿಂದಾಲ್ ಕುರಿತು ಹೈ ಕೋರ್ಟ್‌ನಲ್ಲಿ ಪಿಐಎಲ್ ಇದೆ. ಸುಪ್ರೀಂ ಕೋರ್ಟ್‌ನಲ್ಲಿಯೂ ಪ್ರಕರಣ ಇದೆ.ಅಂದು ಕರ್ನಾಟಕ ಹೈಕೋರ್ಟ್ ಹೇಳಿತ್ತು. ಈಗ ಪಿಐಎಲ್ ಆಧಾರದಲ್ಲಿ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಕೋರ್ಟ್ ಏನು ತೀರ್ಪು ನೀಡುತ್ತದೆ ನೋಡಿ ಮುಂದೆ ತೀರ್ಮಾನ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾದ ವಿಷಯಗಳು

* ಮಕ್ಕಳಿಗೆ ಪ್ರತ್ಯೇಕ ಕೊಠಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತ ಮಕ್ಕಳಿಗಾಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ವಾರ್ಡ್ ಆರಂಭಿಸುವುದು. ಅಕ್ಸಿಜನ್ ಪ್ರಮಾಣ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದರು. ಬ್ಲಾಕ್ ಫಂಗಸ್ ಟ್ರೀಟ್ಮೆಂಟಿಗೆ ಔಷಧಿ ಬಗ್ಗೆಯೂ ಚರ್ಚೆಯಾಗಿದೆ. ಕಿಮ್ಸ್‌ನಲ್ಲಿ ವಯಲ್ ಬರುತ್ತಿಲ್ಲ.ಹೀಗಾಗಿ ಅಲ್ಲಿಗೆ ಹೆಚ್ಚು ವಯಲ್ ಕಳಿಸಲು ನಿರ್ಧರಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

* ಮೇಕೆದಾಟು ಯೋಜನೆ ವಿಚಾರವಾಗಿ ಸಿಎಂ ನೇತೃತ್ವದಲ್ಲಿ ಒಂದು ಸಭೆಯಾಗಿದೆ. ಅದಕ್ಕಾಗಿ ಪ್ರತ್ಯೇಕ ಕಮಿಟಿ ಕೂಡ ರಚನೆಯಾಗಿದೆ. ತಮಿಳುನಾಡಿನ ರೈತರು ಮೇಕೆದಾಟು ಬಳಿ ಹೋಗಿರುವುದು ಸುದ್ದಿಯಾಗಿದೆ. ಕಚ್ಚಾ ರಸ್ತೆಯ ವೀಕ್ಷಣೆ ಮಾಡಿದ್ದಾರೆ. ಟೀಮ್ ಮಾಡಿ ಇನ್ಸ್‌ಪೆಕ್ಷನ್ ಮಾಡಲು ನಿರ್ಧರಿಸಿದ್ದು,ಎನ್.ಜಿ.ಟಿ ಮುಂದೆ ಚಾಲೆಂಜ್ ಮಾಡಬೇಕು. ಅದನ್ನು ಕಾನೂನು ಘಟಕ ನೋಡಿಕೊಳ್ಳುತ್ತದೆ ಎಂದರು.

* ಲಾಕ್ಡೌನ್ ಪ್ಯಾಕೇಜ್ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ,ಪ್ಯಾಕೇಜ್ ಒಂದಿಷ್ಟು ಸಮುದಾಯಕ್ಕೆ ದೊರೆತಿಲ್ಲದರ ಬಗ್ಗೆ ಆರ್ಥಿಕ ಇಲಾಖೆ ಜೊತೆ ಸಿಎಂ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕೋವಿಡ್‌ನಿಂದ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ವಿಶೇಷ ಪರಿಹಾರ ನೀಡುವ ಬಗ್ಗೆ ಚರ್ಚೆ ಯಾಗಿದೆ.ಈ ಕುರಿತು ಕೇಂದ್ರದಿಂದ ಈ ಬಗ್ಗೆ ಹೊಸ ಗೈಡ್‌ಲೈನ್ಸ್ ಬರಲಿದೆ. ಅದು ಬಂದ ಬಳಿಕ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

* ಪಶು ಸಂಗೋಪನೆ ಇಲಾಖೆಯಿಂದ ಪಿಪಿಪಿ ಮಾದರಿಯಲ್ಲಿ ಹಾವೇರಿಯಲ್ಲಿ ಅಲ್ಟ್ರಾ ಪ್ಯಾಕೇಜ್ ಮಿಲ್ಕ್ ಪ್ರೊಡಕ್ಟ್ ಯುನಿಟ್ ಸ್ಥಾಪನೆ 90 ಕೋಟಿ ರೂ. ವೆಚ್ಚ ಮಾಡಲು, ಗರಿಷ್ಠ 50ಎಕರೆಗೆ ನಿಗದಿಪಡಿಸಿ ಕರ್ನಾಟಕ ಎಲೆಕ್ಟ್ರಿಕ್ ಎನರ್ಜಿ ಸ್ಟೋರೇಜ್ ಪಾಲಿಸಿ 15% ಬಂಡವಾಳ ಸಬ್ಸಿಡಿಯನ್ನು ಐದು ಕಂತುಗಳಲ್ಲಿ ನೀಡಲು ಸಂಪುಟ ಅನುಮೋದನೆ ನೀಡಿದ್ದು,ಕೆಪಿಎಸ್‌ಸಿ ಮಾಜಿ ಅಧ್ಯಕ್ಷರ ತನಿಖೆಗೆ ಅವಕಾಶ ನೀಡಲಾಗಿಲ್ಲ. ಈ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆಯಾಗಿತ್ತು. ರಾಜ್ಯಪಾಲರೂ ಇದನ್ನು ತಿರಸ್ಕರಿಸಿದ್ದರು.ಇದಕ್ಕೆ ಸೆಕ್ರೆಟರಿ ಎಕ್ಸಾಮಿನೇಷನ್ ಅಥಾರಿಟಿ ಇರುತ್ತಾರೆ. ಹೀಗಾಗಿ ಈ ಪ್ರಸ್ತಾಪ ಕೈ ಬಿಡಲಾಗಿದೆ ಎಂದರು.

* ಇನ್ನು ಹಾಸನ ಮೆಡಿಕಲ್ ಕಾಲೇಜಿನಲ್ಲಿ 52 ಹೊಸ ಪಿಜಿ ಸೀಟ್ ಹೆಚ್ಚಳಕ್ಕೆ ಒಪ್ಪಿಗೆ, ಆದಿ ಚುಂಚನಗಿರಿ ಮಠಕ್ಕೆ ಜಮೀನು ನೀಡಲು ಹಿಂದಿನ ಸಂಪುಟದಲ್ಲಿ ತಿಳಿಸಿದಂತೆ ಕಂದಾಯ ಇಲಾಖೆಯಲ್ಲಿ 18.07 ಎಕರೆ ಆದಿನಾರಾಯಣ ಹಳ್ಳಿ ದೊಡ್ಡಬಳ್ಳಾಪುರದಲ್ಲಿ ಹಿಂಡಗಿ ಆಕ್ಟಿವ್ ಕಂಪನಿಗೆ ಗೋಮಾಳ ಜಮೀನು ನೀಡಲು ತೀರ್ಮಾನಿಸಿದೆ.

ಇದಲ್ಲದೆ ಈ ಮುಂದಿನ ಯೋಜನೆಗಳಿಗೆ ಸಂಪುಟ ಒಪ್ಪಿಗೆ ನೀಡಿದೆ.

- ಬಸವನಗುಡಿ ಲ್ಯಾಂಡ್ 25 ವರ್ಷ ಲೀಸ್ ಮುಂದುವರಿಕೆಗೆ ಒಪ್ಪಿಗೆ ನೀಡಿದೆ.

- ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಲಜೀವನ್ ಮಷಿನ್ ಯೋಜನೆ ಅಡಿಯಲ್ಲಿ ಇಂಡಿ ಚಡಚಣ, ಕೊಲಾರಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲು ಉದ್ದೇಶಿಸಿದೆ.

- ಪಾಂಡವಪುರ, ನಾಗಮಂಗಲ, ಬಹುಗ್ರಾಮ ಕುಡಿಯುವ ನೀರು, ಹುಬ್ಬಳ್ಳಿ ಧಾರವಾಡ, ಉಡುಪಿ, ಬೈಂದೂರು ಕ್ಷೇತ್ರಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

- ಹೊಳಲ್ಕೆರೆ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

- ಸಿಂಗಸಂದ್ರದಲ್ಲಿ 75 ಕೋಟಿ ವೆಚ್ಚದಲ್ಲಿ ಕಲಬುರುಗಿಯಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

- ಮೈಸೂರು ರೋಡ್ ನಿಂದ ಉತ್ತರ ಹಳ್ಳಿ ರೋಡ್ ಗೆ 25.7 ಕೋಟಿ ರೂ.

- ಕನಕಪುರ ಸಿಟಿ ಮುನ್ಸಿಪಲ್ ಕೋರ್ಟ್ 7 ರಿಂದ 10 ಕೋಟಿಗೆ ಹೆಚ್ಚಳಕ್ಕೆ ಕಲಬುರುಗಿ ನಗರದಲ್ಲಿ ಫಿಫ್ಟಿಪಿಫ್ಟಿ ಮಾದರಿಯಲ್ಲಿ ಬಿಲ್ಡಿಂಗ್

- ಹಾಸನ ದಲ್ಲಿ ಐದು ಪಾರ್ಕ್ ಅಭಿವೃದ್ಧಿಗೆ ಒಪ್ಪಿಗೆ

- ಅಣ್ಣಿಗೆರೆ, ಸುರಪುರ, ಶಾಪುರ, ಶಿವಮೊಗ್ಗ, ಹೊನ್ನಾಳಿ ನಗರಗಳಲ್ಲಿ ಕುಡಿಯುವ ನೀರು ಯೋಜನೆಗೆ 770 ಕೋಟಿ ರೂ.ಗೆ ಸಚಿವ ಸಂಪುಟ ಸಭೆ ಅನುಮೋದನೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com