ಮೆಚ್ಚಿನ ನಟನಿಂದ ಸ್ಫೂರ್ತಿ; ನೇತ್ರದಾನ ಮಾಡುವತ್ತ ಅಭಿಮಾನಿಗಳ ಆಸಕ್ತಿ!

ತಮ್ಮ ಮೆಚ್ಚಿನ ನಟನಿಂದ ಸ್ಪೂರ್ತಿ ಪಡೆದ ಹಲವು ಮಂದಿ ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ.  ಕಳೆದ  2 ದಿನಗಳಿಂದ ನೂರಾರು ಮಂದಿ ವಿಮ್ಸ್ ಆಸ್ಪತ್ರೆಯಲ್ಲಿ ಮತ್ತು ಖಾಸಗಿ ವೈದ್ಯರ ಬಳಿ ನೇತ್ರದಾನ ಮಾಡಲು ಮುಂದಾಗಿದ್ದಾರೆ.
ಪುನೀತ್ ರಾಜಕುಮಾರ್
ಪುನೀತ್ ರಾಜಕುಮಾರ್

ಬಳ್ಳಾರಿ: ಕಳೆದ ಎರಡು ದಿನಗಳಿಂದ ಅಪ್ಪು ಅಭಿಮಾನಿಗಳು ಬಳ್ಳಾರಿ ಜಿಲ್ಲೆಯ ಆರೋಗ್ಯಾಧಿಕಾರಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ತಮ್ಮ ಮೆಚ್ಚಿನ ನಟನಿಂದ ಸ್ಪೂರ್ತಿ ಪಡೆದ ಹಲವು ಮಂದಿ ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ.  ಕಳೆದ  2 ದಿನಗಳಿಂದ ನೂರಾರು ಮಂದಿ ವಿಮ್ಸ್ ಆಸ್ಪತ್ರೆಯಲ್ಲಿ ಮತ್ತು ಖಾಸಗಿ ವೈದ್ಯರ ಬಳಿ ನೇತ್ರದಾನ ಮಾಡಲು ಮುಂದಾಗಿದ್ದಾರೆ.

ವರನಟ ಡಾ.ರಾಜಕುಮಾರ್ ಅವರು ನಿಧನರಾದಾಗ ನೇತ್ರದಾನ ಮಾಡಿದ್ದರು. ಅದೇ ರೀತಿ ಪರಿಸ್ಥಿತಿ ಈಗಲೂ ಮುಂದುವರಿದಿದೆ.  ತಂದೆ ಮತ್ತು ಮಗನಿಂದ ಆರು ಮಂದಿ ದೃಷ್ಟಿ  ಪಡೆದುಕೊಂಡಿದ್ದಾರೆ.  ರಾಜ್‌ಕುಮಾರ್ ಕುಟುಂಬದ ಅಭಿಮಾನಿಗಳು ತಮ್ಮ ಕಣ್ಣುಗಳನ್ನು ದಾನ ಮಾಡಲು ಪ್ರೇರರಣೆ ನೀಡಿದ್ದಾರೆ.

ಬಳ್ಳಾರಿ ಮತ್ತು ವಿಜಯನಗರ ಎರಡೂ ಜಿಲ್ಲೆಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರು ಹಲವಾರು ಚಿತ್ರಗಳನ್ನು ಚಿತ್ರೀಕರಿಸಿದ್ದರಿಂದ ಇಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಪುನೀತ್ ಅವರ ಸರಳತೆ ಮತ್ತು  ಜನರೊಂದಿಗೆ ಬೆರೆಯುವ ಸ್ವಭಾವ ಬಹಳ ಹಿಂದೆಯೇ ಜನರ  ಮನ ಗೆದ್ದಿದೆ. ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡ ಅಭಿಮಾನಿಗಳು ಇನ್ನೂ ಆಘಾತದಿಂದ ಬಂದಿಲ್ಲ. ಪುನೀತ್ ನಿಧನದ ನಂತರ ಅಪ್ಪು ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ನಿಟ್ಟಿನಲ್ಲಿ ನೇತ್ರದಾನ ಪ್ರಮಾಣ ಸಂಖ್ಯೆ ಹೆಚ್ಚಾಗಿದೆ.

ಅಭಿಮಾನಿಗಳ ಆಶಯದಂತೆ ಹೊಸಪೇಟೆಯಲ್ಲಿ ಪುನೀತ್ ರಾಜ್ ಕುಮಾರ್ ಪ್ರತಿಮೆ ಸ್ಥಾಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಭರವಸೆ ನೀಡಿದ್ದಾರೆ.  ಪುನೀತ್ ನಿಧನದ ನೋವನ್ನು ಸಹಿಸಲಾಗದೆ ಹಲವಾರು ಅಭಿಮಾನಿಗಳು  ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.  ಬೆಂಗಳೂರು ಬಳಿ ಅಭಿಮಾನಿಯೊಬ್ಬರು ಪುನೀತ್ ಅವರಂತೆ ಕಣ್ಣುಗಳನ್ನು ದಾನ ಮಾಡಲು ಬಯಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವೈದ್ಯರ ತಂಡ ಪುನೀತ್ ಅವರ ಕಣ್ಣುಗಳಿಂದ ಆಧುನಿಕ ತಂತ್ರಜ್ಞಾನದ ಮೂಲಕ ನಾಲ್ಕು ಜನರಿಗೆ ಕಸಿ ಮಾಡಿದ್ದಾರೆ. ಈ ಸುದ್ದಿ ತಿಳಿದ ನಂತರ ಬಳ್ಳಾರಿ ಮತ್ತು ವಿಜಯನಗರದ ಅಭಿಮಾನಿಗಳು ತಮ್ಮ ಕಣ್ಣುಗಳನ್ನು ದಾನ ಮಾಡಲು ಆಯ್ಕೆಗಳನ್ನು ಹುಡುಕುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ಅನೇಕರು ನೇತ್ರದಾನ ಮಾಡುವ ಬಗ್ಗೆ ವಿಚಾರಿಸುತ್ತಿದ್ದಾರೆ. "ಇದು ಸರಳ ಪ್ರಕ್ರಿಯೆಯಾಗಿದೆ . ವ್ಯಕ್ತಿಯೊಬ್ಬರು ನೇತ್ರದಾನ ಮಾಡಲು ಫಾರ್ಮ್ ಭರ್ತಿ ಮಾಡಬೇಕು.  ಈ ಫಾರ್ಮ್ ನಲ್ಲಿ ವೈಯಕ್ತಿಕ ವಿವರಗಳನ್ನು ಹೊಂದಿರುತ್ತದೆ.  ದಾನಕ್ಕಾಗಿ ತಮ್ಮ ಕಣ್ಣುಗಳನ್ನು ಒತ್ತೆ ಇಟ್ಟಿರುವ ವ್ಯಕ್ತಿಯು ಸತ್ತರೆ ಕುಟುಂಬದ ಸದಸ್ಯರು ವೈದ್ಯಕೀಯ ತಂಡಕ್ಕೆ ತಿಳಿಸುತ್ತಾರೆ.

ಅವರ ಮರಣದ ಆರು ಗಂಟೆಗಳ ಒಳಗೆ ದಾನಿಯ ಕಣ್ಣುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನೇತ್ರದಾನ ಮಾಡುವವರ ಸಂಖ್ಯೆ ವಿಪರೀತ ಹೆಚ್ಚುತ್ತಿರುವ ಕಾರಣ , ನಾವು ನೇತ್ರದಾನ ಪ್ರಕ್ರಿಯೆಯನ್ನು ಸರಳಗೊಳಿಸಲು ಯೋಜಿಸುತ್ತಿದ್ದೇವೆ ಬಳ್ಳಾರಿ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಅಧಿಕಾರಿ ಡಾ.ಸಿ.ರಾಜಶೇಖರ್ ರೆಡ್ಡಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com