ಪುನೀತ್ ರಾಜಕುಮಾರ್
ರಾಜ್ಯ
ಅಪ್ಪನ ಅಗಲಿಕೆಯ ನೋವಲ್ಲಿ ಪರೀಕ್ಷೆ ಬರೆಯಲಿದ್ದಾರೆ ಪುನೀತ್ ರಾಜಕುಮಾರ್ ಪುತ್ರಿ!
ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಹನ್ನೊಂದನೇ ದಿನ. ಹೀಗಾಗಿ, ಇಂದು ಅಪ್ಪು ಕುಟುಂಬಸ್ಥರು 11ನೇ ದಿನ ಕಾರ್ಯ ನಡೆಸಲಿದ್ದಾರೆ.
ಬೆಂಗಳೂರು: ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಹನ್ನೊಂದನೇ ದಿನ. ಹೀಗಾಗಿ, ಇಂದು ಅಪ್ಪು ಕುಟುಂಬಸ್ಥರು 11ನೇ ದಿನ ಕಾರ್ಯ ನಡೆಸಲಿದ್ದಾರೆ.
ಆದರೆ ಅಪ್ಪ ಜೊತೆಗಿಲ್ಲ ಎಂಬ ನೋವಲ್ಲೂ ಅಪ್ಪು ಮಗಳು ವಂದಿತಾ ಪರೀಕ್ಷೆ ಬರೆಯುವಂತಹ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಪ್ಯಾಲೇಸ್ ರಸ್ತೆಯ ಸೋಫಿಯಾ ಶಾಲೆಯಲ್ಲಿ ಐಸಿ ಎಸ್ ಸಿ 10ನೇ ತರಗತಿಯಲ್ಲಿ ಓದುತ್ತಿರೊ ವಂದಿತಾಗೆ ಮುಂದಿನ ವಾರದಲ್ಲಿ ಐಸಿಎಸ್ ಸಿ 10ನೇ ತರಗತಿ ಸೆಮಿಸ್ಟರ್ ಎಕ್ಸಾಂ ಹಿನ್ನಲೆಯಲ್ಲಿ ಇಂದಿನಿಂದ ಪೂರ್ವಬಾವಿ ಪರೀಕ್ಷೆ ಆರಂಭವಾಗಿದೆ.
ತಂದೆಯ 11ನೇ ದಿನದ ಕಾರ್ಯದ ನಡುವೆಯೂ ವಂದಿತಾ ಪರೀಕ್ಷೆಗೆ ಹಾಜರಾಗಲಿದ್ದಾಳೆ. ಪುನೀತ್ ರಾಜಕುಮಾರ್ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ರು. ಕಲಿಕೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕಾಳಜಿವಹಿಸಿದ್ದರು. ತಂದೆಯ ಆಸೆಯಂತೆ ನೋವಿನ ನಡುವೆಯೂ ಎಕ್ಸಾಂ ಬರೆಯಲು ವಂದಿತಾ ಮನಸ್ಸು ಮಾಡಿದ್ದಾಳೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ