ನವೆಂಬರ್ 11-14 ರವರೆಗೆ ಬೆಂಗಳೂರು ಕೃಷಿ ಮೇಳ: ಈ ಬಾರಿ ಏನು ವಿಶೇಷ? ಮಾಹಿತಿ ಇಲ್ಲಿದೆ...

ರೈತರ ಆದಾಯ ದ್ವಿಗುಣಗೊಳಿಸುವಿಕೆಗೆ ಕೃಷಿ ತಾಂತ್ರಿಕತೆಗಳು ಎಂಬ ವಿಚಾರ ಮುಂದಿಟ್ಟುಕೊಂಡು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರತಿ ವರ್ಷದಂತೆ ಈ ಬಾರಿಯೂ ಕೃಷಿಮೇಳ ಆಯೋಜನೆ ಮಾಡಿದೆ. 
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ

ಬೆಂಗಳೂರು: ರೈತರ ಆದಾಯ ದ್ವಿಗುಣಗೊಳಿಸುವಿಕೆಗೆ ಕೃಷಿ ತಾಂತ್ರಿಕತೆಗಳು ಎಂಬ ವಿಚಾರ ಮುಂದಿಟ್ಟುಕೊಂಡು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರತಿ ವರ್ಷದಂತೆ ಈ ಬಾರಿಯೂ ಕೃಷಿಮೇಳ ಆಯೋಜನೆ ಮಾಡಿದೆ. 

ನವೆಂಬರ್ 11 ರಿಂದ ನವೆಂಬರ್ 14ರವರೆಗೆ 4 ದಿನಗಳ ಕಾಲ ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ ರೈತರಿಗಾಗಿ ಭರಪೂರ ಮಾಹಿತಿ ಒದಗಿಸಲು ಸಿದ್ಧಗೊಂಡಿದೆ.

ಈ ಬಾರಿಯ ಕೃಷಿಮೇಳವನ್ನು ಬೆಂಗಳೂರು ಕೃಷಿ ವಿವಿ ವಿಭಿನ್ನವಾಗಿ ಆಚರಿಸಲು ಹಲವು ವಿಶಿಷ್ಠ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರಮುಖವಾಗಿ ಈ ಬಾರಿಯ ರೈತರ ಹಬ್ಬದಲ್ಲಿ, 10 ಹೊಸ ತಳಿಗಳು ಮತ್ತು 28 ನೂತನ ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಕೃಷಿ ಸಾಧಕರಿಗೆ ಪುರಸ್ಕಾರ, ಅಂಗೈಯಲ್ಲೇ ಕೃಷಿ ಮೇಳ, ಕುಳಿತಲ್ಲೇ ಕೃಷಿಕರ ಕೃಷಿ ಸಮಸ್ಯೆಗಳಿಗೆ ಪರಿಹಾರ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಸೇರಿದಂತೆ ಕೃಷಿಗೆ ಉಪಯೋಗವಾಗುವ ಮಾಹಿತಿ ಕಣಜವನ್ನು ಬೆಂಗಳೂರು ಕೃಷಿ ವಿವಿ ಅನಾವರಣಗೊಳಿಸಲಿದೆ.

ದೂರದರ್ಶನ ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ರೈತರಿಗೆ ಕೃಷಿ ಮೇಳದ ದರ್ಶನ ಭಾಗ್ಯ ಈ ಬಾರಿ ಸಿಗಲಿದೆ. ವೆಬ್‍ಪೇಜ್, ವೆಬ್‍ಸೈಟ್, ಯೂಟ್ಯೂಬ್, ಫೇಸ್‍ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಮತ್ತು ಜೂಮ್ ಸಭೆಗಳ ಮೂಲಕ ಕೃಷಿ ಮೇಳದ ಲಾಭಗಳು ನೇರ ಪ್ರಸಾರದ ಮೂಲಕ ಅನ್ನದಾತರಿಗೆ ದೊರೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com