ಕೋವಿಡ್ ಚಿಕಿತ್ಸೆ: ಕೈಪಿಡಿ ಬಿಡುಗಡೆ ಮಾಡಿದ ಜಯದೇವ ಆಸ್ಪತ್ರೆ!

ಕೋವಿಡ್ ಸಾಂಕ್ರಾಮಿಕ ರೋಗದ ಚಿಕಿತ್ಸೆ ಕುರಿತ ಕೈಪಿಡಿಯೊಂದನ್ನು ಜಯದೇವ ಆಸ್ಪತ್ರೆ ಗುರುವಾರ ಬಿಡುಗಡೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದ ಚಿಕಿತ್ಸೆ ಕುರಿತ ಕೈಪಿಡಿಯೊಂದನ್ನು ಜಯದೇವ ಆಸ್ಪತ್ರೆ ಗುರುವಾರ ಬಿಡುಗಡೆ ಮಾಡಿದೆ.

ಕೈಪಿಡಿ ಬಿಡುಗಡೆ ವೇಲೆ ಮಾತನಾಡಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರು, “ಈ ಪುಸ್ತಕವು ವೈದ್ಯರು, ವೈರಾಲಜಿಸ್ಟ್‌ಗಳು, ಇಮ್ಯುನೊಲೊಜಿಸ್ಟ್‌ಗಳು, ಲಸಿಕೆಶಾಸ್ತ್ರಜ್ಞರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಕೋವಿಡ್ ಚಿಕಿತ್ಸೆ ಕುರಿತು ಸಂಪೂರ್ಣ ಮಾಹಿತಿಯನ್ನೊಳಗೊಂಡ ಮಾಹಿತಿಯನ್ನು ಒದಗಿಸಲಿದೆ. ನಾವು ನಮ್ಮದೇ ಆದ ಚಿಕಿತ್ಸಾ ವಿಧಾನ ಹಾಗೂ ಪರಿಸರವನ್ನು ಹೊಂದಿದ್ದು, ಹೀಗಾಗಿ ಈ ಚಿಕಿತ್ಸೆ ಕುರಿತು ಕೈಪಿಡಿಯ ಅಗತ್ಯವಿದೆ. ಈ ಕೈಪಿಡಿಯು ಎಲ್ಲಾ ಆಸ್ಪತ್ರೆಗಳ ಐಸಿಯುವಿನಲ್ಲಿ ಲಭ್ಯವಿರುವಂತ ಮಾಡುವುದು ಅಗತ್ಯವಿದೆ ಎಂದು ಹೇಳಿದ್ದಾರೆ.

ಪುಸ್ತಕದ ಮುನ್ನುಡಿಯನ್ನು ಕರ್ನಾಟಕದ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ ಎಂ ಕೆ ಸುದರ್ಶನ್ ಮತ್ತು ಮಣಿಪಾಲ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ ಸುದರ್ಶನ್ ಬಲ್ಲಾಳ್ ಮತ್ತು ಇಂಡಿಯನ್ ಸೊಸೈಟಿ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್ ಅಧ್ಯಕ್ಷರಾಗಿ ಆಯ್ಕೆಯಾದ ಡಾ ರಾಜೇಶ್ ಮಿಶ್ರಾ ಬರೆದಿದ್ದಾರೆ.

ಪುಸ್ತಕದ ಬಿಡುಗಡೆಗೂ ಮೊದಲು ವೈದ್ಯರ ಸಮಿತಿಯು, ಸೋಂಕು ಹರಡುವಿಕೆ, ಲಸಿಕೆ ಮತ್ತು ರೂಪಾಂತರಗಳು, ಬೂಸ್ಟರ್ ಡೋಸ್‌ಗಳು ಮತ್ತು ಕೋವಿಡ್ -19 ಲಸಿಕೆಗಳ ತೊಡಕುಗಳ ಕುರಿತು ಚರ್ಚೆ ನಡೆಸಿತು.

ಲಸಿಕೆ ಪಡೆದ ಬಳಿಕವೂ ಸೋಂಕು ತಗಲುವ ಆತಂಕಗಳಿವೆ. ಹೀಗಾಗಿ ಜನರು ಕೋವಿಡ್ ನಿಯಮಗಳನ್ನು ಪಾಲನೆ ಮಾಡುವುದು ಮುಖ್ಯವಾಗಿದೆ. ಆಸ್ಪತ್ರೆಗಳ ಐಸಿಯುವಿಗೆ ಗಂಭೀರ ಸ್ಥಿತಿಯಲ್ಲಿರುವ ಜನರಷ್ಟೇ ದಾಖಲಾಗುತ್ತಿದ್ದಾರೆ. ಆದರೆ, ಸಾವಿನ ಪ್ರಮಾಣ ಕಡಿಮೆಯಿದೆ ಎಂದು ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತುರ್ತುಘಟಕದ ವೈದ್ಯಕೀಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ ಭುವನಾ ಕೃಷ್ಣ ಅವರು ಸಭೆಯಲ್ಲಿ ಹೇಳಿದ್ದಾರೆ.

ಕೈಪಿಡಿ ಬಿಡುಗಡೆ ವೇಳೆ ಆರೋಗ್ಯ ಮಾಜಿ ಆಯುಕ್ತ ಡಾ.ತ್ರಿಲೋಕ್ ಚಂದ್ರ ಸೇರಿದಂತೆ 58ಕ್ಕೂ ಹೆಚ್ಚು ವೈದ್ಯರು ಮತ್ತು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com