ಜ್ಞಾನಭಿವೃದ್ಧಿಗಾಗಿ ಕೃಷಿ ಮೇಳ ಸಹಕಾರಿ- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ನಮ್ಮ ದೇಶ ಕೃಷಿ ಆಧಾರಿತ ರಾಷ್ಟ್ರವಾಗಿದೆ. ಕೃಷಿ ಸಂಬಂಧಿತ ಜ್ಞಾನಭಿವೃದ್ಧಿಗಾಗಿ ಕೃಷಿ ಮೇಳ ಸಹಕಾರಿಯಾಗಿದೆ. ಮೇಳ ಆಯೋಜನೆಯಿಂದಾಗಿ ರೈತರು ಮತ್ತು ನಾಗರಿಕರು ಅನೇಕ ಮಹತ್ವಪೂರ್ಣ ಮಾಹಿತಿಯೊಂದಿಗೆ, ಅನುಕೂಲ ಪಡೆಯಲಿದ್ದಾರೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
Published: 14th November 2021 08:28 PM | Last Updated: 14th November 2021 08:30 PM | A+A A-

ಕೃಷಿಮೇಳದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು: ನಮ್ಮ ದೇಶ ಕೃಷಿ ಆಧಾರಿತ ರಾಷ್ಟ್ರವಾಗಿದೆ. ಕೃಷಿ ಸಂಬಂಧಿತ ಜ್ಞಾನಭಿವೃದ್ಧಿಗಾಗಿ ಕೃಷಿ ಮೇಳ ಸಹಕಾರಿಯಾಗಿದೆ. ಮೇಳ ಆಯೋಜನೆಯಿಂದಾಗಿ ರೈತರು ಮತ್ತು ನಾಗರಿಕರು ಅನೇಕ ಮಹತ್ವಪೂರ್ಣ ಮಾಹಿತಿಯೊಂದಿಗೆ, ಅನುಕೂಲ ಪಡೆಯಲಿದ್ದಾರೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ನಗರದ ಜಿಕೆವಿಕೆ ಆವರಣದಲ್ಲಿ ಇಂದು ಆಯೋಜಿಸಲಾಗಿದ್ದ ಭೌತಿಕ ಮತ್ತು ವರ್ಚುವಲ್ "ಕೃಷಿ ಮೇಳ-2021" ಸಮಾರೋಪ ಸಮಾರಂಭದಲ್ಲಿ ಏಳು ಮಂದಿ ಕೃಷಿ ಸಾಧಕರಿಗೆ ರಾಜ್ಯಮಟ್ಟದ ಕೃಷಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ರಾಜ್ಯಪಾಲರು, ನೆರದಿದ್ದ ಸರ್ವರಿಗೂ ಕನ್ನಡದಲ್ಲಿ ಅಭಿನಂದನೆಗಳನ್ನು ಸಲ್ಲಿಸಿ, ಕನ್ನಡ ಕಲಿಯುತ್ತಿರುವುದರ ಬಗ್ಗೆ ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ಕೃಷಿ ಮೇಳ -2021ರ ಸಮಾರೋಪ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಿದರು. ಈ ವೇಳೆ ಕುಲಪತಿಗಳಾದ ಡಾ.ರಾಜೇಂದ್ರ ಪ್ರಸಾದ್ ಸೇರಿದಂತೆ ಮುಂತಾದವರು ಉಪಸ್ಥಿತರಿದರು. pic.twitter.com/Z37jsOx8sv
— Thaawarchand Gehlot Office (@TcGehlotOffice) November 14, 2021
ನಮ್ಮ ದೇಶದಲ್ಲಿ ಜಾತ್ರೆಗೆ ವಿಶೇಷ ಮಹತ್ವವಿದೆ. ಜಾತ್ರೆ ನಮ್ಮ ಹಳೆಯ ಸಂಪ್ರದಾಯ, ಧಾರ್ಮಿಕ, ಸಾಂಸ್ಕೃತಿಕ, ಭೌಗೋಳಿಕ ಮಾಹಿತಿಯ ಜೊತೆಗೆ, ನಾವು ಪರಸ್ಪರ ಅರ್ಥಮಾಡಿಕೊಳ್ಳುವ ಮತ್ತು ಉತ್ತಮ ಬಾಂಧವ್ಯದ ಪ್ರಯೋಜನವನ್ನು ಪಡೆಯುತ್ತೇವೆ ಎಂದರು.
ಕೃಷಿ ಮೇಳದಲ್ಲಿ ಸುಸಜ್ಜಿತ ಮಳಿಗೆಗಳನ್ನು ನಿರ್ಮಿಸಿ, ಆಧುನಿಕ ತಂತ್ರಜ್ಞಾನ ಸೇರಿದಂತೆ ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ ಮತ್ತು ಲಾಭದಾಯಕ ಸಮಗ್ರ ಕೃಷಿ ಪದ್ಧತಿ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ಮೇಳಗಳು ಆದಿ ಕಾಲದಿಂದಲೂ ನಡೆಯುತ್ತಾ ಬಂದಿದೆ. ಬಾಲ್ಯದಲ್ಲಿ ಪೋಷಕರು ನಮ್ಮ ಕೈಹಿಡಿದು ಮೇಳಗಳಿಗೆ ಕರೆದುಕೊಂಡು ಹೋಗುತ್ತಿದ್ದರು, ಹಬ್ಬದ ಮಾದರಿಯಲ್ಲಿ ನಾವು ಸಂಭ್ರಮಿಸುತ್ತಿದ್ದೆವು ಎಂದು ಅವರು ಬಾಲ್ಯದ ದಿನಗಳನ್ನು ನೆನೆದರು.