ತನ್ನ ಲಾಭಕ್ಕಾಗಿ ತಮಿಳುನಾಡು ಸದಾಕಾಲ ನೀರು ವಿಚಾರದಲ್ಲಿ ರಾಜಕೀಯ ಮಾಡುತ್ತದೆ: ಸಿಎಂ ಬೊಮ್ಮಾಯಿ

ಕರ್ನಾಟಕದ ಜಲ-ಸಂಬಂಧಿತ ಯೋಜನೆಗಳಿಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮಿಳುನಾಡು ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಕರ್ನಾಟಕದ ಜಲ-ಸಂಬಂಧಿತ ಯೋಜನೆಗಳಿಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮಿಳುನಾಡು ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ತಿರುಪತಿ ಪ್ರವಾಸ ಮುಗಿಸಿ ನಗರಕ್ಕೆ ವಾಪಸಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿಚಾರವನ್ನು ಜಲಶಕ್ತಿ ಸಚಿವಾಲಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಪ್ರಸ್ತಾಪಿಸಲಾಗಿದೆ. ತಮಿಳುನಾಡು ಸ್ವಾತಂತ್ರ್ಯ ಪೂರ್ವದಿಂದಲೂ ತನ್ನ ಲಾಭಕ್ಕಾಗಿ ನೀರಿನ ರಾಜಕಾರಣ ಮಾಡುತ್ತಿದೆ. ನಾವು ತೆಗೆದುಕೊಳ್ಳುವ ನೀರಿನ ಯಾವುದೇ ಹೊಸ ಯೋಜನೆಗೆ ಅವರು ಉದ್ದೇಶಪೂರ್ವಕವಾಗಿ ಆಕ್ಷೇಪಿಸುತ್ತಾರೆ. ಅವರು ಏನೇ ಮಾಡಿದರೂ ನಾವು ಮೇಕೆದಾಟು ಯೋಜನೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆಂದು ಹೇಳಿದ್ದಾರೆ.

ಇದೇ ವೇಳೆ ಬಿಟ್ ಕಾಯಿನ್ ಹಗರಣ ಕುರಿತು ಮಾತನಾಡಿದ ಅವರು, ಬಿಟ್ ಕಾಯಿನ್ ಬಗ್ಗೆ ಇಲ್ಲದ ವಿವಾದವನ್ನು ಪದೇ ಪದೇ ಪ್ರಸ್ತಾಪಿಸಿ ಅದನ್ನು ಜೀವಂತವಾಗಿಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮಾಡಿರುವ ಆರೋಪಗಳು ಇಲ್ಲದ ವಿವಾದವನ್ನು ಜೀವಂತವಾಗಿಡುವ ಪ್ರಯತ್ನವಾಗಿದೆ. ಇದು ರಾಜಕೀಯ ಬಿಟ್ಟರೆ ಬೇರೇನೂ ಅಲ್ಲ. ಬಿಟ್ ಕಾಯಿನ್ ಕುರಿತು ಪದೇ ಪದೇ ನನ್ನನ್ನು ಕೇಳಬೇಡಿ. ನಾನು ಹೇಳಬೇಕಾದದ್ದನ್ನು ಈಗಾಗಲೇ ನಾನು ಹೇಳಿದ್ದೇನೆ. ಈ ಹಿಂದೆಯೂ ಹೇಳಿದ್ದೇನೆ  ಪ್ರತಿಪಕ್ಷದ ಬಳಿ ದಾಖಲೆಗಳಿದ್ದರೆ ತನಿಖಾ ಸಂಸ್ಥಗಳಿಗೆ ಸಲ್ಲಿಸಲಿ. ದಾಖಲೆಗಳಿದ್ದರೆ ಜಾರಿ ನಿರ್ದೇಶನಾಲಯ ಅಥವಾ ಇತರೆ ತನಿಖಾ ಸಂಸ್ಥೆಗಳಿಗೆ ನೀಡಲಿ. ನಾವು ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದೇವೆಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com