ಪೆಟ್ರೋಲ್ ನಂತರ ಬೆಂಗಳೂರಿನಲ್ಲಿ ಸೆಂಚುರಿ ಬಾರಿಸಿದ ಟೊಮೊಟೊ: ರೇಟ್ ನೋಡಿ ಗ್ರಾಹಕರು ಸುಸ್ತೋ ಸುಸ್ತು!

ಈರುಳ್ಳಿ ಆಯ್ತು, ಪೆಟ್ರೋಲ್ ಆಯ್ತು ಈಕ ಶತಕ ಬಾರಿಸುವ ಸರದಿ ಟೊಮೊಟೊದ್ದು,  ಹೌದು ಬೆಂಗಳೂರಿನಲ್ಲಿ 1 ಕೆಜಿ ಟೊಮೊಟೊ ಬೆಲೆ ಒಂದು ಲೀಟರ್ ಪೆಟ್ರೋಲ್ ಗೆ ಸಮವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಈರುಳ್ಳಿ ಆಯ್ತು, ಪೆಟ್ರೋಲ್ ಆಯ್ತು ಈಕ ಶತಕ ಬಾರಿಸುವ ಸರದಿ ಟೊಮೊಟೊದ್ದು, ಹೌದು ಬೆಂಗಳೂರಿನಲ್ಲಿ 1 ಕೆಜಿ ಟೊಮೊಟೊ ಬೆಲೆ ಒಂದು ಲೀಟರ್ ಪೆಟ್ರೋಲ್ ಗೆ ಸಮವಾಗಿದೆ.

ಅಂದರೆ ಟೊಮೊಟೊ ಬೆಲೆ 1 ಕೆಜಿ ಗೆ 100 ರು ಆಗಿದೆ, ಈಗಾಗಿ ಟೊಮೊಟೊ ಸದ್ಯಕ್ಕೆ ಮನೆಯಲ್ಲಿನ ಆಸ್ತಿಯಾಗಿದ್ದು, ವಿವೇಚನಾಯುಕ್ತವಾಗಿ ಬಳಕೆ ಮಾಡುವಂತಾಗಿದೆ.

ಕಳೆದ ಕೆಲವು ವಾರಗಳಿಂದ ಟೊಮೆಟೊ ಬೆಲೆ ಏರುಗತಿಯಲ್ಲಿದೆ, ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕಿಲೋ ಬೆಲೆ 98-100 ರೂ. ಮತ್ತು ಹಾಪ್‌ಕಾಮ್ಸ್ ಮಳಿಗೆಗಳಲ್ಲಿ 93 ರೂ. ಆಗಿದೆ.

ನವೆಂಬರ್ ನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಟೊಮೊಟೊ ಬೆಲೆ ಗಗನಕ್ಕೇರಿದೆ, ರಾಜ್ಯದ ಹಲವು ಭಾಗಗಳಲ್ಲಿ ಬೆಳೆದಿದ್ದ ಟೊಮೊಟೊ ಮಳೆಯಿಂದಾಗಿ  ನಾಶವಾಗಿದೆ, ಇದರ ಜೊತೆಗೆ ಮಳೆಯಿಂದಾಗಿ ಟೊಮೊಟೊ ಗುಣಮಟ್ಟ ಕೂಡ ಹಾಳಾಗಿದೆ. ಹೆಚ್ಚು ಬೆಲೆ ಕೊಟ್ಟು ಖರೀದಿಸಿದರೂ ಟೊಮೊಟೋ ಒಳಗೆ ಕೊಳೆತು ಹುಳು ಬರುತ್ತಿದ್ದು, ವಿಧಿಯಿಲ್ಲದೇ ಎಸೆಯುವ ಪರಿಸ್ಥಿತಿ ಬಂದಿದೆ.

ಮಳೆಯಿಂದಾಗಿ ಬೆಲೆ ಹೆಚ್ಚಾಗಿದೆ. ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಟೊಮೆಟೊ ಬೆಲೆ 93 ರೂ.,  ಇದೆ . ಆದರೆ ಮಳೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಬೆಲೆ ಇನ್ನೂ ಹೆಚ್ಚುತ್ತದೆ ಎಂದು ಹಾಪ್‌ಕಾಮ್ಸ್ ಸಂಗ್ರಹಣೆ ಮತ್ತು ಮಾರುಕಟ್ಟೆ ವ್ಯವಸ್ಥಾಪಕ ಎನ್.ಜಯಪ್ರಕಾಶ್ ಹೇಳಿದ್ದಾರೆ.

ಬೆಂಗಳೂರಿನ ಕೆಲವು ಭಾಗಗಳಲ್ಲಿ, ಉತ್ತಮ ಗುಣಮಟ್ಟದ ಟೊಮೆಟೊಗಳನ್ನು ರಸ್ತೆ ಬದಿಗಳಲ್ಲಿಯೂ ಸಹ 100 ರೂ.ಗೆ ಮಾರಾಟ ಮಾಡಲಾಗುತ್ತದೆ. ಮಾಲ್ ಗಳಲ್ಲಿ ಕೆಜಿ 100 ರು. ಗೆ ಮಾರಾಟ ಮಾಡಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಟೊಮೊಟೊ ದರ ವಿಭಿನ್ನವಾಗಿದೆ.

ಮೂರು ತಿಂಗಳ ಹಿಂದೆ 26 ರೂ.ಗೆ ಇದ್ದ ಈರುಳ್ಳಿ ಕೆಜಿಗೆ 53 ರೂ.ಗೆ  ಏರಿಕೆಯಾಗಿದೆ ಎಂದು ಜಯಪ್ರಕಾಶ್ ಹೇಳಿದರು. ಬಯಲು ಪ್ರದೇಶದಲ್ಲಿ ಬೆಳೆದ ಬೆಳೆಗಳು ಮಳೆಯ ರಭಸವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಾಲಿ ಹೌಸ್ ಗಳಲ್ಲಿ ಬೆಳೆದ ಬೆಳೆ ಚೆನ್ನಾಗಿದೆ ಎಂದು ಹೇಳಿದ್ದಾರೆ.

ಅಗತ್ಯ ಅಡುಗೆ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ವಾರದ ಬಜೆಟ್ ನಲ್ಲಿ ಏರುಪೇರಾಗುತ್ತಿದ್ದು, ಟೊಮೊಟೊ ಮಾತ್ರವಲ್ಲ, ಎಲ್ಲ ವಸ್ತುಗಳ ಬೆಲೆಯೂ ಜಾಸ್ತಿಯಾಗುತ್ತಿದ್ದು, ಸರಿಯಾಗಿ ಊಟ ಮಾಡಲು ಕಷ್ಟವಾಗುತ್ತಿದೆ ಎಂದು ಸಾಕ್ಷಿ ಎಂಬ ಗೃಹಿಣಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಬಾರಿ ತಿಪಟೂರು, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಟೊಮೊಟೊ ಬೆಳೆ ಹಾನಿಯಾಗಿದೆ. ಕೋಲಾರದ ಭಾಗಗಳಲ್ಲಿ ಮಾತ್ರ ಬೆಳೆ ಉಳಿದುಕೊಂಡಿದೆ. ಮಳೆ ಬರದಿದ್ದರೇ ಬೆಲೆ ಕುಸಿಯುತ್ತದೆ ಎಂದು  ಕೋಲಾರದ ಎಪಿಎಂಸಿ ಮಾರುಕಟ್ಟೆಯ ಮುನಿರಾಜ್ ಹೇಳಿದ್ದಾರೆ.

ತರಕಾರಿಗಳು, ಬೇಳೆಕಾಳುಗಳು ಮತ್ತು ಎಲ್‌ಪಿಜಿ ಬೆಲೆ ಏರಿಕೆಯಿಂದಾಗಿ ರೆಸ್ಟೋರೆಂಟ್‌ಗಳಲ್ಲಿ ಬೆಲೆ ಏರಿಕೆ ಮಾಡಲು ಹೋಟೆಲ್ ಮಾಲೀಕರ ಸಂಘಗಳು ಚರ್ಚೆ ನಡೆಸುತ್ತಿವೆ. ಚರ್ಚೆಯ ನಂತರ ಅವರಲ್ಲಿ ಹೆಚ್ಚಿನವರು ಶೇಕಡಾ 5-15 ರಷ್ಟು ದರವನ್ನು ಹೆಚ್ಚಿಸಿದ್ದಾರೆ.

ಕಳೆದ ವರ್ಷ, ಮೊದಲ ಲಾಕ್‌ಡೌನ್‌ಗೆ ಮೊದಲು, ಅಡುಗೆ ಎಣ್ಣೆಯ ಬೆಲೆ 15 ಲೀಟರ್‌ಗೆ 1,300 ರೂ ಇತ್ತುತ್ತು ಈಗ 2,500 ರೂ ಆಗಿದೆ. ಕಾಫಿ ಪುಡಿಯದ್ದು ಅದೇ ಸಮಸ್ಯೆಯಾಗಿದೆ.  ಮಳೆಯಿಂದಾಗಿ ಹೆಚ್ಚಿನ ತರಕಾರಿಗಳು ಲಭ್ಯವಿಲ್ಲ, ಆದ್ದರಿಂದ ಬೆಲೆ ಹೆಚ್ಚಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ವೀರೇಂದ್ರ ಕಾಮತ್ ವಿವರಿಸಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com