ತಮಿಳುನಾಡಿಗೆ ಹರಿದ ಕಾವೇರಿ: ಅಕ್ಟೋಬರ್-ನವೆಂಬರ್ ಅವಧಿಗೆ 30 ಟಿಎಂಸಿ ಹೆಚ್ಚು ನೀರು ಬಿಡುಗಡೆ

ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಎಲ್ಲಾ ಜಲಾಶಯಗಳು ಮತ್ತು ಕೆರೆಗಳು ತುಂಬಿತುಳುಕುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕವೂ ತಮಿಳುನಾಡಿಗೆ 30 ಟಿಎಂಸಿ ಅಡಿ ಹೆಚ್ಚುವರಿ ನೀರು ಹರಿಸಿದೆ.
ತಮಿಳುನಾಡಿಗೆ ನೀರು ಬಿಡುಗಡೆ
ತಮಿಳುನಾಡಿಗೆ ನೀರು ಬಿಡುಗಡೆ

ಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಎಲ್ಲಾ ಜಲಾಶಯಗಳು ಮತ್ತು ಕೆರೆಗಳು ತುಂಬಿತುಳುಕುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕವೂ ತಮಿಳುನಾಡಿಗೆ 30 ಟಿಎಂಸಿ ಅಡಿ ಹೆಚ್ಚುವರಿ ನೀರು ಹರಿಸಿದೆ.

ಕಾವೇರಿ ನದಿ ಪ್ರಾಧಿಕಾರದ ಅಂತಿಮ ತೀರ್ಪಿನಂತೆ ಅಕ್ಟೋಬರ್-ನವೆಂಬರ್‌ನಲ್ಲಿ ಕರ್ನಾಟಕವೂ ತಮಿಳುನಾಡಿಗೆ 43 ಟಿಎಂಸಿ ಅಡಿ ನೀರು ಬಿಡಬೇಕಿತ್ತು, ನವೆಂಬರ್ 18 ರವರೆಗೆ 73 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಿದೆ.   ಅಲ್ಲದೆ ಇನ್ನೂ ಮಳೆ ಕಡಿಮೆಯಾಗದ ಕಾರಣ ಕೃಷ್ಣರಾಜ ಸಾಗರ, ಕಬಿನಿ, ಅರ್ಕಾವತಿ, ಶಿಂಷಾ ಅಣೆಕಟ್ಟೆಗಳಿಂದ ನಿತ್ಯ ಸುಮಾರು 35 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದೆ, ಕೆಆರ್‌ಎಸ್‌ನಿಂದ 18 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ, ಇದಲ್ಲದೇ ಕಬಿನಿ ಜಲಾಶಯದಿಂದ 4,500 ಕ್ಯೂಸೆಕ್ ಹಾಗೂ ಮದ್ದೂರು ತಾಲೂಕಿನ ಇಗ್ಗಲೂರು ಅಣೆಕಟ್ಟೆಯಿಂದ ಸುಮಾರು 7 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅರಕಾವತಿ ನದಿಯ ನೀರಿನ ಮಟ್ಟವೂ ಹೆಚ್ಚುತ್ತಿದೆ.

ಮಳೆಯ ಪ್ರಮಾಣ ಹೆಚ್ಚಾಗುವ ಕಾರಣದಿಂದ  ರಂಗನ ತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ನಿಲ್ಲಿಸಲಾಗಿದೆ. ನೆರೆಯ ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತಮಿಳುನಾಡಿನ ಮೆಟ್ಟೂರು ಅಣೆಕಟ್ಟಿನ ಒಳಹರಿವು ಹೆಚ್ಚಾಗಿದೆ. ಮೆಟ್ಟೂರು ಜಲಾಶಯದಿಂದ ಸಮುದ್ರಕ್ಕೆ ನೀರು ಬಿಡುತ್ತಿರುವುದು ಕಾವೇರಿ ಜಲಾನಯನ ಪ್ರದೇಶದ ರೈತರನ್ನು ಕೆರಳಿಸಿದೆ.ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಯನ್ನು ತೆರವುಗೊಳಿಸಿ ಹೆಚ್ಚುವರಿ ನೀರನ್ನು ಸಮುದ್ರಕ್ಕೆ ಬಿಡದೆ ನೀರನ್ನು ಸಂಗ್ರಹಿಸಲು ಒತ್ತಾಯಿಸಿದ್ದಾರೆ.   

ಈಗಾಗಲೇ 50 ಟಿಎಂಸಿ ನೀರು ಹರಿದು ಹೋಗಿದೆ, ಮಳೆ ಇನ್ನೂ ಮುಂದುವರಿದರೇ  ಹೆಚ್ಚಿನ ಪ್ರಮಾಣದ ನೀರು ಸಮುದ್ರ ಸೇರಲಿದೆ ಎಂದು ರೈತರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ರೈತರ ಹಿತದೃಷ್ಟಿಯಿಂದ ಮೇಕೆದಾಟು ಯೋಜನೆ ಅವಶ್ಯಕತೆಯಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಮುಖ್ಯ ಎಂಜಿನಿಯರ್ ಶಂಕರಗೌಡ ನೇತೃತ್ವದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಮಳೆಯಿಂದ ಕುಸಿದಿರುವ ಕಬಿನಿ ಬಲದಂಡೆ ನಾಲೆಯನ್ನು ಪರಿಶೀಲಿಸಿದರು.  ಮೈಸೂರು ಜಿಲ್ಲೆಯ 1.10 ಲಕ್ಷ ಎಕರೆಗೆ ನೀರುಣಿಸುವ ಕಾಲುವೆಗೆ ಜಲಾಶಯದಿಂದ ನೀರು ಬಿಡುವ ಬಗ್ಗೆ ಗಮನ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com