ಬಿಎಂಐಸಿ ಯೋಜನೆಯಡಿ ರಾಜ್ಯ ಧಾರವಾಡ ಕೈಗಾರಿಕಾ ಪ್ರದೇಶದ ಅಭಿವೃದ್ಧಿ

ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ (ಬಿಎಂಐಸಿ) ಅಡಿಯಲ್ಲಿ ಧಾರವಾಡ ಕೈಗಾರಿಕಾ ಪ್ರದೇಶದ ಅಭಿವೃದ್ಧಿಯನ್ನು ಸೇರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ (ಬಿಎಂಐಸಿ) ಅಡಿಯಲ್ಲಿ ಧಾರವಾಡ ಕೈಗಾರಿಕಾ ಪ್ರದೇಶದ ಅಭಿವೃದ್ಧಿಯನ್ನು ಸೇರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ನಾಲ್ಕು ಹಂತಗಳಲ್ಲಿ ಅಭಿವೃದ್ಧಿಪಡಿಸಲು 32 ಯೋಜನೆಗಳನ್ನು ಒಳಗೊಂಡಿರುವ 11 ಕೈಗಾರಿಕಾ ಕಾರಿಡಾರ್‌ಗಳಿಗೆ ಕೇಂದ್ರವು ಅನುಮೋದನೆ ನೀಡಿದೆ.

ಈ ಯೋಜನೆಯು 6,000 ಎಕರೆಗೂ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ (ಕರ್ನಾಟಕ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ) ಹತ್ತಿರದಲ್ಲಿದೆ. ಬೆಂಗಳೂರು ಮತ್ತು ಗೋವಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ (ಎನ್'ಹೆಚ್ 48 ಮತ್ತು 67) ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಇದು ಕರ್ನಾಟಕದಲ್ಲಿ ಮುಂದಿನ ಕೈಗಾರಿಕಾ ಕ್ರಾಂತಿಗೆ ಮುಂದಾಳತ್ವ ವಹಿಸಲು ಸಜ್ಜಾಗಿದೆ.

ಧಾರವಾಡದಲ್ಲಿ ಅಸ್ತಿತ್ವದಲ್ಲಿರುವ ರೈಲು ನಿಲ್ದಾಣವು ಈ ಪ್ರದೇಶದಿಂದ 25 ಕಿಮೀ ದೂರದಲ್ಲಿದೆ ಮತ್ತು ಉದ್ದೇಶಿತ ಧಾರವಾಡ-ಬೆಳಗಾವಿ ರೈಲು ಮಾರ್ಗವು ಈ ಪ್ರದೇಶಕ್ಕೆ ಹೊಂದಿಕೊಂಡಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣವು 30 ಕಿಮೀ ದೂರದಲ್ಲಿದೆ ಮತ್ತು ಕಾರವಾರ ಬಂದರುಗಳು (170 ಕಿಮೀ) ಮತ್ತು ಗೋವಾ (180 ಕಿಮೀ) ಹತ್ತಿರವಾಗಲಿದೆ.

ಧಾರವಾಡದಲ್ಲಿ ಪ್ರಸ್ತಾಪಿಸಲಾದ ಕೈಗಾರಿಕಾ ಅಭಿವೃದ್ಧಿಯು ಪ್ರಸ್ತುತ ಕೈಗಾರಿಕಾ ಅಭಿವೃದ್ಧಿಯನ್ನು ವರ್ಧಿಸುತ್ತದೆ ಮತ್ತು ವಿವಿಧ ವರ್ಗದ ಕೈಗಾರಿಕೆಗಳಿಗೆ ಹೂಡಿಕೆಯನ್ನು ಹೆಚ್ಚಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com