ಬೆಂಗಳೂರು: ವಂಚನೆ ಪ್ರಕರಣ; ಸುಮಾರು 10 ಕೋಟಿ ರೂ. ಮೌಲ್ಯದ ಕಾರುಗಳೊಂದಿಗೆ ಆರೋಪಿ ಪರಾರಿ

ಬೆಂಗಳೂರಲ್ಲಿ ಮತ್ತೊಂದು ಬೃಹತ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಟ್ರಾವೆಲ್ಸ್ ಹೆಸರಿನಲ್ಲಿ ಕಾರುಗಳನ್ನ ಬಾಡಿಗೆಗೆ ಪಡೆದು 10 ಕೋಟಿಗೂ ಅಧಿಕ ಮೌಲ್ಯದ ಕಾರುಗಳ ಸಮೇತ ಆರೋಪಿ ಪರಾರಿಯಾಗಿದ್ದಾನೆ.
ವಂಚನೆ (ಸಾಂಕೇತಿಕ ಚಿತ್ರ)
ವಂಚನೆ (ಸಾಂಕೇತಿಕ ಚಿತ್ರ)

ಬೆಂಗಳೂರು: ಬೆಂಗಳೂರಲ್ಲಿ ಮತ್ತೊಂದು ಬೃಹತ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಟ್ರಾವೆಲ್ಸ್ ಹೆಸರಿನಲ್ಲಿ ಕಾರುಗಳನ್ನ ಬಾಡಿಗೆಗೆ ಪಡೆದು 10 ಕೋಟಿಗೂ ಅಧಿಕ ಮೌಲ್ಯದ ಕಾರುಗಳ ಸಮೇತ ಆರೋಪಿ ಪರಾರಿಯಾಗಿದ್ದಾನೆ.

ಬಾಗಲುಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಸಂದ್ರದಲ್ಲಿ ಈ ಘಟನೆ ನಡೆದಿದ್ದು, ತಮಿಳುನಾಡು ಮೂಲದ ಶಿವಕುಮಾರ್ ವಂಚಿಸಿರುವ ಆರೋಪಿಯಾಗಿದ್ದಾನೆ. ಆರ್.ಎಸ್. ಟ್ರಾವೆಲ್ಸ್ ಹೆಸರಲ್ಲಿ ಕಂಪನಿ ನಡೆಸುತ್ತಿದ್ದ ಆರೋಪಿ, ಇನೋವಾ, ಈಟಿಯೋಸ್, ಸ್ವಿಫ್ಟ್ ಕಾರುಗಳನ್ನ ಬಾಡಿಗೆಗೆ ಪಡೆದು ಅಟ್ಯಾಚ್ ಮಾಡ್ಕೊಳ್ತಿದ್ದ. ಪ್ರತಿ ತಿಂಗಳ 8ರಂದು ಕಾರು ಮಾಲೀಕರ ಅಕೌಂಟ್ ಗೆ ಬಾಡಿಗೆ ಹಣ ಹಾಕುವ ಒಪ್ಪಂದ ಮಾಡಿಕೊಂಡಿದ್ದನು. ಆದ್ರೆ ಈ ತಿಂಗಳು ಶಿವಕುಮಾರ್, ಮಾಲೀಕರ ಖಾತೆಗೆ ಹಣ ಹಾಕಿಲ್ಲ. ಬದಲಿಗೆ 130 ಕ್ಕೂ ಹೆಚ್ಚು ಕಾರುಗಳ ಜೊತೆ ಆರೋಪಿ ಪರಾರಿಯಾಗಿದ್ದಾನೆ.

ಅಷ್ಟೇ ಅಲ್ಲದೆ, ಬೆಂಗಳೂರಿನ ನಾಗಸಂದ್ರದಲ್ಲಿದ್ದ ಟ್ರಾವೆಲ್ಸ್ ಕಚೇರಿಯನ್ನು ಆರೋಪಿ ರಾತ್ರೋರಾತ್ರಿ ಖಾಲಿ ಮಾಡಿರುವುದು ಕೂಡ ವರದಿಯಾಗಿದೆ. ಪ್ರತಿ ತಿಂಗಳು ಬಾಡಿಗೆ ಸಿಗುತ್ತದೆ ಎಂದು ನಂಬಿಕೆ ಇಟ್ಟುಕೊಂಡು ಸಾಲ ಮಾಡಿ ಕಾರು ಖರೀದಿ ಮಾಡಿದ್ದ ಮಾಲೀಕರು ಸದ್ಯ ಕಂಗಾಲಾಗಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಆರೋಪಿ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, 10 ಕೋಟಿಗೂ ಅಧಿಕ ಮೌಲ್ಯದ ಕಾರುಗಳ ಸಮೇತ ಪರಾರಿಯಾಗಿರುವ ಶಿವಕುಮಾರ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com