ಬೆಂಗಳೂರು: ರೈಲ್ವೆ ಆವರಣದಲ್ಲಿ 3.2 ಕೋಟಿ ಮೌಲ್ಯದ ಪಾರ್ಟಿ ಡ್ರಗ್ ವಶಪಡಿಸಿಕೊಂಡ ಆರ್‌ಪಿಎಫ್ ಮಹಿಳಾ ತಂಡ

ನಗರದಲ್ಲಿ ಅತಿದೊಡ್ಡ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಿರುವ ರೈಲ್ವೇ ಪ್ರೊಟೆಕ್ಷನ್ ಫೋರ್ಸ್(ಆರ್‌ಪಿಎಫ್)ನ ಮಹಿಳಾ ತಂಡ ಸುಮಾರು 3.2 ಕೋಟಿ ಮೌಲ್ಯದ 640 ಗ್ರಾಂ ಕ್ರಿಸ್ಟಲ್ ಮೆಥಾಂಫೆಟಮೈನ್ ಪಾರ್ಟಿ ಡ್ರಗ್ ಅನ್ನು ವಶಪಡಿಸಿಕೊಂಡಿದೆ. 
ಕ್ರಿಸ್ಟಲ್ ಮೆಥಾಂಫೆಟಮೈನ್
ಕ್ರಿಸ್ಟಲ್ ಮೆಥಾಂಫೆಟಮೈನ್

ಬೆಂಗಳೂರು: ನಗರದಲ್ಲಿ ಅತಿದೊಡ್ಡ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಿರುವ ರೈಲ್ವೇ ಪ್ರೊಟೆಕ್ಷನ್ ಫೋರ್ಸ್(ಆರ್‌ಪಿಎಫ್)ನ ಮಹಿಳಾ ತಂಡ ಸುಮಾರು 3.2 ಕೋಟಿ ಮೌಲ್ಯದ 640 ಗ್ರಾಂ ಕ್ರಿಸ್ಟಲ್ ಮೆಥಾಂಫೆಟಮೈನ್ ಪಾರ್ಟಿ ಡ್ರಗ್ ಅನ್ನು ವಶಪಡಿಸಿಕೊಂಡಿದೆ. 

ಪ್ರಶಾಂತಿ ಎಕ್ಸ್‌ಪ್ರೆಸ್‌ನ ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಒಡಿಶಾ ಮೂಲದ 44 ವರ್ಷದ ಪ್ರಯಾಣಿಕ ಕ್ರಿಸ್ಟಲ್ ಮೆಥ್ ಎಂದು ಕರೆಯಲ್ಪಡುವ ಡ್ರಗ್ಸ್ ಅನ್ನು ಹೊಂದಿದ್ದ ಎಂದು ಉನ್ನತ ರೈಲ್ವೆ ಮೂಲಗಳು ತಿಳಿಸಿವೆ. 'ಐಸ್ ' ಅಥವಾ 'ಗ್ಲಾಸ್' ಎಂದೂ ಕರೆಯಲ್ಪಡುವ ಜನಪ್ರಿಯ ಪಾರ್ಟಿ ಡ್ರಗ್ ಹೆಚ್ಚು ವ್ಯಸನಕಾರಿ ಮತ್ತು ಕೇಂದ್ರ ನರಮಂಡಲದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಬೆಂಗಳೂರು ನಗರ) ನಿಲ್ದಾಣದಿಂದ ಭುವನೇಶ್ವರಕ್ಕೆ ಅಕ್ಟೋಬರ್ 1.50ಕ್ಕೆ ಹೊರಟಿತು. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ವಿಶೇಷವಾಗಿ ರಚಿಸಲಾದ ಆರ್‌ಪಿಎಫ್‌ನ ಶಕ್ತಿ ಘಟಕದ ಆರು ಸದಸ್ಯರ ತಂಡವು ಗಸ್ತು ತಿರುಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಪ್ರಯಾಣಿಕನ ದೇಹಸ್ಥಿತಿ ಪೊಲೀಸರಲ್ಲಿ ಸಂಶಯವನ್ನು ಹುಟ್ಟುಹಾಕಿತು. ಇದನ್ನು ಗಮನಿಸಿದ ಆತ ರೈಲು ಹಿಂದೂಪುರ ನಿಲ್ದಾಣವನ್ನು ತಲುಪಿದ ತಕ್ಷಣ ಕೆಳಗಿಳಿದು ಪೊಲೀಸರಿಗೆ ವಿರುದ್ಧ ದಿಕ್ಕಿನಲ್ಲಿ ಚಲಿಸಲು ಆರಂಭಿಸಿದರು ಎಂದು ಮೂಲಗಳು ವಿವರಿಸಿದೆ.

ಸಹಾಯಕ ಸಬ್ ಇನ್ಸ್‌ಪೆಕ್ಟರ್, ತನುಜಾ ಎಂಪಿ, ತಂಡದ ಮುಖ್ಯಸ್ಥರಾಗಿದ್ದು, ತಕ್ಷಣವೇ ತನ್ನ ತಂಡದ ಸದಸ್ಯರನ್ನು ಸುತ್ತುವರಿಯುವಂತೆ ಎಚ್ಚರಿಸಿದರು. 600 ಮೀಟರ್ ಬೆನ್ನಟ್ಟಿದ ನಂತರ ಅವನನ್ನು ಆವರಣದಲ್ಲಿ ವಶಕ್ಕೆ ಪಡೆದು ಯಶವಂತಪುರದ ಆರ್‌ಪಿಎಫ್ ಪೋಸ್ಟ್‌ಗೆ ಕರೆದೊಯ್ಯಲಾಯಿತು. ನಂತರ ಪರೀಕ್ಷಿಸಿದಾಗ ಡ್ರಗ್ಸ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com