ಬಸವನ ಬಾಗೇವಾಡಿಯಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 2.9ರಷ್ಟು ತೀವ್ರತೆ ದಾಖಲು
ವಿಜಯಪುರದ ಬಸವನಬಾಗೇವಾಡಿಯಲ್ಲಿ ಭೂಕಂಪನದ ಅನುಭವವಾಗಿದ್ದು, ಶಾಲೆ ನಡೆಯುತ್ತಿದ್ದಾಗಲೇ ಈ ಘಟನೆ ನಡೆದ ಕಾರಣ ಶಾಲಾಮಕ್ಕಳು ಭಯದಿಂದ ಹೊರಗೆ ಓಡಿ ಬಂದಿದ್ದಾರೆ.
Published: 06th October 2021 04:12 PM | Last Updated: 06th October 2021 06:22 PM | A+A A-

ರಿಕ್ಟರ್ ಮಾಪನ (ಸಂಗ್ರಹ ಚಿತ್ರ)
ವಿಜಯಪುರ: ವಿಜಯಪುರದ ಬಸವನಬಾಗೇವಾಡಿಯಲ್ಲಿ ಭೂಕಂಪನದ ಅನುಭವವಾಗಿದ್ದು, ಶಾಲೆ ನಡೆಯುತ್ತಿದ್ದಾಗಲೇ ಈ ಘಟನೆ ನಡೆದ ಕಾರಣ ಶಾಲಾಮಕ್ಕಳು ಭಯದಿಂದ ಹೊರಗೆ ಓಡಿ ಬಂದಿದ್ದಾರೆ.
A Govt school students in #Masuti village of #Basavana Bagewadi have run out of the classes as soon as they experienced tremors on Tuesday. According to @KarnatakaSNDMC, “An earthquake of 2.9 magnitude at depth of 10km recorded in same village.” @XpressBengaluru @santwana99 pic.twitter.com/rKxYZqUQ3j
— Mahesh M Goudar। ಮಹೇಶ್ ಮ ಗೌಡರ (@MahiPEN_TNIE) October 6, 2021
ಬಸವನಬಾಗೇವಾಡಿಯ ಮಸುಟಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಮಸುಟಿ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಮಕ್ಕಳಿಗೂ ಕಂಪನದ ಅನುಭವವಾಗಿ ಭಯದಿಂದ ಶಾಲೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಇದನ್ನೂ ಓದಿ: ಹಾಸನ ಜಿಲ್ಲೆಯ ಸುತ್ತಮುತ್ತ ಲಘು ಭೂಕಂಪನ
ಇನ್ನು ಭೂಕಪಂನದ ಕುರಿತು ಸ್ಪಷ್ಟನೆ ನೀಡಿರುವ ಭೂಕಂಪನ ಮಾಪನ ಇಲಾಖೆ ಅಧಿಕಾರಿಗಳು ಗ್ರಾಮದ 10 ಕಿಮೀ ಆಳದಲ್ಲಿ 2.9 ತೀವ್ರತೆಯ ಕಂಪನ ಸಂಭವಿಸಿದೆ ಎಂದು ಹೇಳಿದ್ದಾರೆ.
ಬಾಗಲಕೋಟೆ, ವಿಜಯಪುರದಲ್ಲೂ ಭೂಕಂಪನ
ಇನ್ನು ಇದಕ್ಕೂ ಮೊದಲು ಅಂದರೆ ಭಾನುವಾರ ರಾತ್ರಿ ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಭೂಕಂಪನದ ಅನುಭವಾಗಿತ್ತು. ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ವಿಕ್ಷಣಾ ಕೇಂದ್ರ (KSNDMC) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. "ಕರ್ನಾಟಕದ ಗಡಿಯನ್ನು ಹಂಚಿಕೊಂಡಿರುವ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ. ಅಂತೆಯೇ ಕರ್ನಾಟಕದ ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ, ರಾತ್ರಿ 11:47 ಕ್ಕೆ ಕಡಿಮೆ ಪ್ರಮಾಣದ ಕಂಪನ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ವಿಜಯಪುರ, ಬಾಗಲಕೋಟೆಗಳಲ್ಲಿ ಕಡಿಮೆ ತೀವ್ರತೆಯ ಭೂಕಂಪನ
ವಿಜಯಪುರನಗರ, ಬಸವನ ಬಾಗೇವಾಡಿ, ಟಿಕೋಟಾ, ಇಂಡಿ ಮತ್ತು ಸಿಂದಗಿಯ ಅನೇಕ ಪ್ರದೇಶಗಳಲ್ಲಿ ರಾತ್ರಿ 11:30 ರಿಂದ 12 ರ ನಡುವೆ ಭೂಕಂಪನ ಅನುಭವಿಸಿದ ಅನುಭವವಾಗಿದೆ.