ಮಂಗಳೂರು: ಸೇಂಟ್ ಅಲೋಶಿಯಸ್ ಕಾಲೇಜಿನ ಪಾರ್ಕ್ ಗೆ ಸ್ಟಾನ್ ಸ್ವಾಮಿ ಹೆಸರು, ಹಿಂದೂ ಸಂಘಟನೆಗಳಿಂದ ವಿರೋಧ

ಸೇಂಟ್ ಅಲೋಶಿಯಸ್ ಕಾಲೇಜ್ ತನ್ನ ಕ್ಯಾಂಪಸ್ ನ ಪಾರ್ಕ್ ಗೆ ಬುಡಕಟ್ಟು ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ ಅವರ ಹೆಸರು ಇಡಲು ನಿರ್ಧಾರಿಸಿದೆ. ಆದರೆ ಇಕ್ಕೆ ಹಿಂದೂ ಬಲಪಂಥೀಯ ಸಂಘಟನೆಗಳಾದ ವಿಹೆಚ್‌ಪಿ...
ಸ್ಟಾನ್ ಸ್ವಾಮಿ
ಸ್ಟಾನ್ ಸ್ವಾಮಿ

ಮಂಗಳೂರು: ಸೇಂಟ್ ಅಲೋಶಿಯಸ್ ಕಾಲೇಜ್ ತನ್ನ ಕ್ಯಾಂಪಸ್ ನ ಪಾರ್ಕ್ ಗೆ ಬುಡಕಟ್ಟು ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ ಅವರ ಹೆಸರು ಇಡಲು ನಿರ್ಧಾರಿಸಿದೆ. ಆದರೆ ಇಕ್ಕೆ ಹಿಂದೂ ಬಲಪಂಥೀಯ ಸಂಘಟನೆಗಳಾದ ವಿಹೆಚ್‌ಪಿ, ಬಜರಂಗದಳ ಮತ್ತು ಎಬಿವಿಪಿಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಈ ಉದ್ಯಾನವು ಮಂಗಳೂರಿನ ಹೊರವಲಯದಲ್ಲಿರುವ ಕಾಲೇಜಿನ ಬೀರಿ ಕ್ಯಾಂಪಸ್‌ನಲ್ಲಿದೆ ಮತ್ತು ಆರಂಭದಲ್ಲಿ ಆಡಳಿತ ಮಂಡಳಿ ಇಂದು(ಅಕ್ಟೋಬರ್ 7) ಪಾರ್ಕ್ ಗೆ ನಾಮಕರಣ ಸಮಾರಂಭ ನಡೆಸಲು ನಿರ್ಧರಿಸಿತು. ಆದರೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಎರಡು ದಿನಗಳ ಭೇಟಿಗಾಗಿ ಇಂದು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ನಾಮಕರಣ ಸಮಾರಂಭ ಮುಂದೂಡಿದೆ.

ಏತನ್ಮಧ್ಯೆ, ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಎಚ್‌ಪಿ, ಬಜರಂಗದಳ ಮತ್ತು ಎಬಿವಿಪಿ ಮುಖಂಡರು, ಉದ್ಯಾನವನಕ್ಕೆ ಫಾದರ್ ಸ್ವಾಮಿ ಹೆಸರಿಡುವ ಕಾಲೇಜು ಆಡಳಿತ ಮಂಡಳಿಯ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದರು.

ಸ್ಟಾನ್ ಸ್ವಾಮಿಯನ್ನು ಕಾನೂನುಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆಯಡಿ ಬಂಧಿಸಲಾಗಿದೆ ಮತ್ತು ಭೀಮಾ ಕೋರೆಗೊವಾನ್ ಹಿಂಸಾಚಾರದಲ್ಲಿ ಅವರ ಪಾತ್ರಕ್ಕಾಗಿ 'ಭಯೋತ್ಪಾದನೆ' ಮತ್ತು 'ನಕ್ಸಲಿಸಂ' ನಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. "ಉದ್ಯಾನವನಕ್ಕೆ ಅಂತಹ ವ್ಯಕ್ತಿಯ ಹೆಸರು ಇಡುವುದು ಅತ್ಯಂತ ಖಂಡನೀಯ. ಇದಕ್ಕು ನಾವು ಅವಕಾಶ ನೀಡುವುದಿಲ್ಲ" ಎಂದು ವಿಎಚ್‌ಪಿ ನಾಯಕ ಶರಣ್ ಪಂಪ್‌ವೆಲ್ ಅವರು ಹೇಳಿದ್ದಾರೆ.

ಕಾಲೇಜು ಆಡಳಿತ ದೇಶದ್ರೋಹಿ ವ್ಯಕ್ತಿಯ ಹೆಸರಿಡು ವುದನ್ನು ತಕ್ಷಣವೇ ಕೈ ಬಿಡಬೇಕು. ಇಲ್ಲದೇ ಇದ್ದಲ್ಲಿ ನಾಳೆಯೇ ನಾವು ಕಾಲೇಜು ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com