ಏರ್‌ಪೋರ್ಟ್ ಸಿಟಿಯಲ್ಲಿ 'ಮನರಂಜನಾ ಗ್ರಾಮ' ನಿರ್ಮಾಣ ಕಾಮಗಾರಿ ಆರಂಭ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ 'ಏರ್‌ಪೋರ್ಟ್ ಸಿಟಿ' ಭಾಗವಾಗಿ “ರೀಟೇಲ್ ಡೈನಿಂಗ್ ಎಂಟರ್‌ಟೈನ್‌ಮೆಂಟ್ (ಆರ್‌ಡಿಇ) ಗ್ರಾಮ ಅಂದರೆ ಮನರಂಜನಾ ಗ್ರಾಮವನ್ನು ನಿರ್ಮಿಸಲು ಬಿಐಎಎಲ್‌ ಮುಂದಾಗಿದೆ. 
ಮನರಂಜನಾ ಗ್ರಾಮದ ನೀಲನಕ್ಷೆ
ಮನರಂಜನಾ ಗ್ರಾಮದ ನೀಲನಕ್ಷೆ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ 'ಏರ್‌ಪೋರ್ಟ್ ಸಿಟಿ' ಭಾಗವಾಗಿ “ರೀಟೇಲ್ ಡೈನಿಂಗ್ ಎಂಟರ್‌ಟೈನ್‌ಮೆಂಟ್ (ಆರ್‌ಡಿಇ) ಗ್ರಾಮ ಅಂದರೆ ಮನರಂಜನಾ ಗ್ರಾಮವನ್ನು ನಿರ್ಮಿಸಲು ಬಿಐಎಎಲ್‌ ಮುಂದಾಗಿದೆ. ಅದರ ವಿನ್ಯಾಸಕ್ಕಾಗಿ ಬ್ರಿಟನ್‌ ಸಂಸ್ಥೆ ಡಿಪಿ ಆರ್ಕಿಟೆಕ್ಟ್ ಸಿಂಗಾಪುರ ಆಂಡ್ ಪೋರ್ಟ್‌ಲ್ಯಾಂಡ್‌ ಡಿಸೈನ್ ಅನ್ನು ನೇಮಕ ಮಾಡಲಾಗಿದೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ಅಧೀನ ಸಂಸ್ಥೆಯಾದ ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್ (ಬಿಎಸಿಎಲ್), ಈಗಾಗಲೇ ಏರ್‌ಪೋರ್ಟ್ ಸಿಟಿ ನಿರ್ಮಾಣ ಕೆಲಸ ಪ್ರಾರಂಭಿಸಿದೆ. ಇದರ ಭಾಗವಾಗಿ ಮನರಂಜನಾ ಗ್ರಾಮವನ್ನು 23 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಈ ಜವಾಬ್ದಾರಿಯನ್ನು ಪೋರ್ಟ್‌ಲ್ಯಾಂಡ್‌ ಡಿಸೈನ್ ಯುಕೆ ಸಂಸ್ಥೆಗೆ ನೀಡಲಾಗಿದೆ. ಈ ಭಾಗದಲ್ಲಿ ಶಾಪಿಂಗ್ ಸೆಂಟರ್, ಮಾಲ್, ಐಟೆಕ್ ಸಿನಿಮಾ ಥಿಯೇಟರ್ ಸೇರಿದಂತೆ ಇತರೆ ಮನರಂಜನಾ ಸ್ಥಳಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಬಿಎಎಸಿಎಲ್ ಕಾರ್ಯನಿರ್ವಾಹಕ ಅಧಿಕಾರಿ ರಾಮ್ ಮುನುಕುಟ್ಲಾ, ಸಿಂಗಾಪುರ ಮಾದರಿಯ ಸಿಟಿ ನಿರ್ಮಾಣದ ಕನಸಿನಂತೆ ಈ ಭಾಗದಲ್ಲಿ ಏರ್‌ಪೋರ್ಟ್ ಸಿಟಿ ನಿರ್ಮಿಸಲಾಗುತ್ತಿದೆ. ಮನರಂಜನಾ ಗ್ರಾಮವನ್ನು ನಿರ್ಮಿಸಲು ಈಗಾಗಲೇ ಟೆಂಡರ್ ನೀಡಲಾಗಿದೆ. ಕೆಲವೇ ವರ್ಷಗಳಲ್ಲಿ ಈ ತಾಣ ತಲೆ ಎತ್ತಲಿದೆ ಎಂದರು.

ಈ ಮನರಂಜನಾ ಗ್ರಾಮಕ್ಕೆ ಬಿಎಂಟಿಸಿ, ಮೆಟ್ರೋ ಸೇರಿದಂತೆ ಎಲ್ಲಾ ರೀತಿಯ ಸಾರಿಗೆ ಸಂಪರ್ಕ ಸಹ ಇರಲಿದೆ. ಈ ಹೈಟೆಕ್ ಸಿಟಿಯಲ್ಲಿ ಬ್ಯುಸಿನೆಸ್ ಪಾರ್ಕ್, ಐಟಿ ಪಾರ್ಕ್, ಹಾಸ್ಪೆಟಲ್ ಸೆಂಟರ್, ಶಾಲಾ ಕಾಲೇಜುಗಳು, ಪ್ರದರ್ಶನ ಕೇಂದ್ರ ಹೀಗೆ ಹತ್ತಾರು ವಿಷಯಗಳು ಈ ಸಿಟಿಯಲ್ಲಿ ಇರಲಿದೆ. ಇದೊಂದು ದೇಶದಲ್ಲೇ ಮಾದರಿ ಹೈಟೆಕ್ ಸಿಟಿಯಾಗಿ ಸಿದ್ಧವಾಗಲಿದೆ ಎಂದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com