ನೈತಿಕ ಪೊಲೀಸ್ ಗಿರಿ: ಆರೋಪಿಗಳನ್ನು ಠಾಣೆಯಿಂದ ಕರೆದೊಯ್ದ ಬಿಜೆಪಿ ಶಾಸಕ; ಫೋಟೋಗಳು ವೈರಲ್, ಕಾಂಗ್ರೆಸ್ ಕಿಡಿ!

ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕರು 'ನೈತಿಕ ಪೊಲೀಸ್ ಗಿರಿ' ಘಟನೆಗಳ ಹಿಂದಿದ್ದಾರೆ ಎಂಬ ಆರೋಪಗಳ ನಡುವೆ, ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಗಳಿಬ್ಬರನ್ನು ಠಾಣೆಯಿಂದ ಕರೆದೊಯ್ದ ಫೋಟೋಗಳು ವೈರಲ್ ಆಗಿವೆ.
ಉಮಾನಾಥ ಕೋಟ್ಯಾನ್
ಉಮಾನಾಥ ಕೋಟ್ಯಾನ್

ಮಂಗಳೂರು: ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕರು 'ನೈತಿಕ ಪೊಲೀಸ್ ಗಿರಿ' ಘಟನೆಗಳ ಹಿಂದಿದ್ದಾರೆ ಎಂಬ ಆರೋಪಗಳ ನಡುವೆ, ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಗಳಿಬ್ಬರನ್ನು ಠಾಣೆಯಿಂದ ಕರೆದೊಯ್ದ ಫೋಟೋಗಳು ವೈರಲ್ ಆಗಿವೆ.

ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದ ಬಂಧಿತ ಆರೋಪಿಗಳಾದ ಸಂಹಿತರಾಜ್ ಮತ್ತು ಸಂದೀಪ್ ಪೂಜಾರಿನನ್ನು ಪೊಲೀಸ್ ಠಾಣೆಯಿಂದ ಶಾಸಕರೂ ಎಸ್ಕಾರ್ಟ್ ಮಾಡಿದ್ದಾರೆ. 

ಕೆಲವು ಹಿಂದುತ್ವ ಸಂಘಟನೆಗಳಿಗೆ ಸೇರಿದ 6-8 ಕಾರ್ಯಕರ್ತರ ಗುಂಪು ಕಾರ್ಕಳಕ್ಕೆ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಪ್ರಯಾಣಿಸುತ್ತಿದ್ದ ಕಾರನ್ನು ಮೂಡುಬಿದಿರೆಯಲ್ಲಿ ತಡೆದು ಕಿರುಕುಳ ನೀಡಿದ ಆರೋಪದ ಮೇಲೆ ಸಂಹಿತರಾಜ್ ಮತ್ತು ಸಂದೀಪ್ ಪೂಜಾರಿನನ್ನು ಶನಿವಾರ ಬಂಧಿಸಲಾಯಿತು.

ಮುಸ್ಲಿಂ ಸಮುದಾಯಕ್ಕೆ ಸೇರಿದ ದಂಪತಿಯ ಜೊತೆ ಇಬ್ಬರು ಹಿಂದೂ ಮಹಿಳೆಯರು ಸಂಚರಿಸುತ್ತಿದ್ದರು. ಸಂತ್ರಸ್ತರೊಬ್ಬರ ದೂರಿನ ಆಧಾರದ ಮೇಲೆ ಮೂಡುಬಿದಿರೆ ಪೊಲೀಸರು ಇಬ್ಬರನ್ನು ಬಂಧಿಸಿ ಐಪಿಸಿ ಸೆಕ್ಷನ್ 354, 153 ಎ, 504 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. 

ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ ಅದೇ ರಾತ್ರಿ ಮಧ್ಯಂತರ ಜಾಮೀನು ಪಡೆಯುವಲ್ಲಿ ಯಶಸ್ವಿಯಾದರು. 

ಏತನ್ಮಧ್ಯೆ, ಕಾಂಗ್ರೆಸ್ ಈ ಚಿತ್ರಗಳನ್ನು ಟ್ವೀಟ್ ಮಾಡಿದೆ. ಆರೋಪಿಗೆ ಬಿಜೆಪಿ ಶಾಸಕರ 'ಬೆಂಬಲ'ವನ್ನು ಪ್ರಶ್ನಿಸಿತು. ಬೆಂಗಳೂರಿನಲ್ಲಿ ಇಂತಹ ಘಟನೆಯ ನಂತರ 'ನೈತಿಕ ಪೊಲೀಸ್' ಘಟನೆಗಳನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಯನ್ನು ಉಲ್ಲೇಖಿಸಿ, ಶಾಸಕರ ಕ್ರಮದ ಬಗ್ಗೆ ಕಾಂಗ್ರೆಸ್ ಸಿಎಂರನ್ನು ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com