ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದ ಕತ್ತಲಲ್ಲಿ ಕರ್ನಾಟಕ: ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆ ಬಗ್ಗೆ ಕಾಂಗ್ರೆಸ್ ಟೀಕೆ
ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದ ಕತ್ತಲಲ್ಲಿ ಕರ್ನಾಟಕ ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.
Published: 12th October 2021 08:59 PM | Last Updated: 13th October 2021 01:28 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದ ಕತ್ತಲಲ್ಲಿ ಕರ್ನಾಟಕ ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.
ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಕೊರತೆ ಕುರಿತಂತೆ ಸಾಮಾಜಿಕ ಜಾಲತಾಣ ಕೆಪಿಸಿಸಿ ಟ್ವಿಟರ್ ನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಲಾಗಿದೆ. ರಾಜ್ಯಕ್ಕೆ ಪ್ರತಿನಿತ್ಯ 19 ರೇಕ್ ಕಲ್ಲಿದ್ದಲು ಅಗತ್ಯವಿದೆ. ಆದರೆ, ಕೇವಲ 6 ರೇಕ್ ಕಲ್ಲಿದ್ದಲನ್ನು ಪೂರೈಸಲಾಗುತ್ತಿದೆ. ಕರ್ನಾಟಕಕ್ಕೆ ಅಗತ್ಯವಾದ ವಿದ್ಯುತ್ ನಲ್ಲಿ ಶೇ. 52 ರಷ್ಟು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿಯೇ ಅವಲಂಬಿತವಾಗಿದೆ. ಈಗಾಗಲೇ ಉಡುಪಿಯ ಯುಪಿಸಿಎಲ್ ಸ್ಥಗಿತಗೊಂಡಿರುವುದಾಗಿ ಹೇಳಿದೆ.
ಕರ್ನಾಟಕಕ್ಕೆ ಅಗತ್ಯವಾದ ವಿದ್ಯುತ್ನಲ್ಲಿ ಶೇಕಡಾ 52 ರಷ್ಟು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿಯೇ ಅವಲಂಬಿತವಾಗಿದೆ.
— Karnataka Congress (@INCKarnataka) October 12, 2021
ಪ್ರತಿನಿತ್ಯ ರಾಜ್ಯಕ್ಕೆ 19 ರೇಕ್ ಕಲ್ಲಿದ್ದಲ ಅಗತ್ಯವಿದೆ, ಆದರೆ ಪೂರೈಕೆ ಇರುವುದು ಕೇವಲ 6 ರೇಕ್.
ಈಗಾಗಲೇ ಉಡುಪಿಯ UPCL ಸ್ಥಗಿತಗೊಳಿಸಲಾಗಿದೆ.
ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದ#ಕತ್ತಲಲ್ಲಿಕರ್ನಾಟಕ ಎಂಬಂತಾಗಿದೆ.
ಮತ್ತೊಂದು ಟ್ವೀಟ್ ನಲ್ಲಿ ಕೆಎಸ್ ಈಶ್ವರಪ್ಪ ಅವರ ಬಾಯಲ್ಲಿ ಮುಸ್ಲಿಮರಿಗೆ ಟಿಕೆಟ್ ಸಿಗಬೇಕೆಂದರೆ ಪಕ್ಷದ ಕಚೇರಿಯಲ್ಲಿ ಹತ್ತು ವರ್ಷ ಕಸ ಹೊಡೆಯಬೇಕೆಂದು ಹೇಳಿಸಿದ ಬಿಜೆಪಿ, ಅಲ್ಪಸಂಖ್ಯಾತರಿಗೆ ನೀಡಿದ ಸ್ಥಾನಮಾನ ಏನೆಂದು ಜಗತ್ತಿಗೆ ತಿಳಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷವಾಗಿ ಸಂವಿಧಾನದ ಆಶಯಗಳನ್ನು ಗೌರವಿಸವುದನ್ನು ಬಿಜೆಪಿ ಕಲಿಯಲಿ ಎಂದು ಸಲಹೆ ನೀಡಲಾಗಿದೆ.
'@ikseshwarappa ಅವರ ಬಾಯಲ್ಲಿ
— Karnataka Congress (@INCKarnataka) October 12, 2021
ಮುಸ್ಲಿಮರಿಗೆ ಟಿಕೆಟ್ ಸಿಗಬೇಕೆಂದರೆ ಪಕ್ಷದ ಕಚೇರಿಯಲ್ಲಿ ಹತ್ತು ವರ್ಷ ಕಸ ಹೊಡೆಯಬೇಕೆಂದು ಹೇಳಿಸಿದ @BJP4Karnataka ಪಕ್ಷ ಅಲ್ಪಸಂಖ್ಯಾತರಿಗೆ ನೀಡಿದ ಸ್ಥಾನಮಾನ ಏನೆಂದು ಜಗತ್ತಿಗೇ ತಿಳಿದಿದೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ರಾಜಕೀಯ ಪಕ್ಷವಾಗಿ ಸಂವಿಧಾನದ ಆಶಯಗಳಿಗೆ ಗೌರವಿಸುವುದನ್ನ ಬಿಜೆಪಿ ಕಲಿಯಲಿ.