ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಪ್ರೊ. ಜಿ.ಕೆ. ಗೋವಿಂದರಾವ್
ಹುಬ್ಬಳ್ಳಿಯ ಗೋಲ್ಡನ್ ಟೌನ್ ಬಡಾವಣೆಯ ತಮ್ಮ ಪುತ್ರಿಯ ನಿವಾಸದಲ್ಲಿ ಶುಕ್ರವಾರ ಬೆಳಗಿನ ಜಾವ ವಿಧಿವಶರಾದ ಚಿಂತಕ ಹಾಗೂ ಕಲಾವಿದ ಪ್ರೊ. ಜಿ.ಕೆ. ಗೋವಿಂದರಾವ್ ಅವರು ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
Published: 15th October 2021 12:43 PM | Last Updated: 15th October 2021 01:59 PM | A+A A-

ಜಿ.ಕೆ. ಗೋವಿಂದರಾವ್
ಬೆಂಗಳೂರು: ಹುಬ್ಬಳ್ಳಿಯ ಗೋಲ್ಡನ್ ಟೌನ್ ಬಡಾವಣೆಯ ತಮ್ಮ ಪುತ್ರಿಯ ನಿವಾಸದಲ್ಲಿ ಶುಕ್ರವಾರ ಬೆಳಗಿನ ಜಾವ ವಿಧಿವಶರಾದ ಚಿಂತಕ ಹಾಗೂ ಕಲಾವಿದ ಪ್ರೊ. ಜಿ.ಕೆ. ಗೋವಿಂದರಾವ್ ಅವರು ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಗೋವಿಂದರಾವ್ ಅವರು ತಮ್ಮ ಕಣ್ಣುಗಳನ್ನು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ನೇತ್ರದಾನ ಮಾಡಿದ್ದಾರೆಂದು ತಿಳಿದುಬಂದಿದೆ.
ತಮ್ಮ ಮರಣದ ಬಳಿಕ ನೇತ್ರದಾನ ಮಾಡಬೇಕು ಎಂಬುದು ಗೋವಿಂದರಾವ್ ಅವರ ಆಸೆಯಾಗಿತ್ತು. ಅದರಂತೆ ನೇತ್ರದಾನ ಮಾಡಲಾಗಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
2 ತಿಂಗಳಿನಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಪ್ರೊ. ಜಿ.ಕೆ. ಗೋವಿಂದರಾವ್ ಅವರ ಆರೋಗ್ಯ 5 ದಿನಗಳ ಹಿಂದೆ ಸಾಕಷ್ಟು ಹದಗೆಟ್ಟಿತ್ತು. ಬಳಿಕ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ದಾಖಲಾದ ಮೊದಲ ಮೂರು ದಿನ ಪ್ರಜ್ಞಾವಸ್ಥೆಯಲ್ಲಿಯೇ ಇದ್ದ ಅವರು, ಕೊನೆಯ ಎರಡು ದಿನ ಅರೆಪ್ರಜ್ಞಾವಸ್ಥೆಗೆ ತಲುಪಿದ್ದರು ಎಂದು ತಿಳಿದುಬಂದಿದೆ.